ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಾಧ ಎನ್ನದಯ್ಯ ಹೇ ಗುರುವರ್ಯ ಪ ಅಪರಾಧ ಎನ್ನದಯ್ಯ ಅಪರಿಮಿತವು ಸರಿ ಕೃಪೆಯು ಮಾಡಲಿ ಬೇಕು ಕೃಪಣವತ್ಸಲ ಗುರುವೆ ಅ.ಪ. ಹಡೆದ ತಾಯಿ ಶಿಶುವ ಬಡಿದು ಕೊಂದರೆ ತೃಣವು ಬಿಡಿಸಿಕೊಳ್ಳಲು ಬಲ್ಲುದೆ ಜಡಕೆ ಸಮವಾದದ್ದು ಒಡೆಯ ನೀ ಎನ್ನಯ ಅಸ್ವಾತಂತ್ರ ಎಣಿಸದೆ ಬಿಡುವೆನೆಂದರೆ ನಿನಗೆ ತಡೆಯ ಬರುವರು ಯಾರೈ 1 ದೀನವತ್ಸಲ ಕೇಳು ಅನೇಕ ಜನ್ಮದೊಳು ನಾನಾ ಪರಿಯೊಳು ನೊಂದು ಸೇರಿದೆ ನಿನಗೆ ಬಂಧು ಏನು ಪೇಳದೆ ಎನ್ನ ಕಾನನದಲಿ ಬಿಟ್ಟು ಶ್ರೀನಾಥನ ಸೇರಿದಿ ಅನಾಥನ ಮಾಡಿದಿ ಎನ್ನ 2 ಬ್ಯಾರೆ ಉಪಾಯವಿಲ್ಲ ಸಾರಿದೆ ನಿನಗಯ್ಯ ಕಾರುಣ್ಯ ನಿಧಿಯೆ ಅಪಾರ ಕರುಣಮಾಡಿ ಮಾರಪಿತನಾದ ಜಯೇಶವಿಠಲನ್ನ ಆರಾಧನೆಯಲಿ ಸತತ ಧಾರಾಳ ಮತಿನೀಡೋ 3
--------------
ಜಯೇಶವಿಠಲ