ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಖಾದಿ ಧರಿಸುವ ಜನಕೆ ಕ್ರೋಧವುಂಟೇ ಪ ಕ್ರೋಧ ಜೈಸಿದ ನರಗೆ ಕಲಹಗಳುಂಟೇ ಪಥ್ಯದಿಂದಿರುವವಗೆ ವ್ಯಾಧಿ ಭಯವೇ ನಿತ್ಯ ಉಪವಾಸಿಗೆ ಭತ್ತದಾ ವ್ಯಥೆಯುಂಟೇ ಚಿತ್ತ ಶುದ್ಧಿದ್ದವಗೆ ಮೈಲಿಗೆಯ ಪರವೇ 1 ಆಶೆ ಬಿಟ್ಟವನಿಗೆ ಅರಸರಾಭಯವುಂಟೆ ದಾಸನಾದವನಿಗೆ ದೋಷವುಂಟೆ | ದೇಶ ಉದ್ಧಾರಕಗೆ ಸೆರೆಮನೆಯ ಭಯವುಂಡೆ ಪೂಶರನ ಗೆದ್ದವಗೆ ಕಾಮಿನಿಯ ಭಯವೇ 2 ಗೀತಾರ್ಥ ತಿಳಿದವಗೆ ಪಾತಕದ ಭಯವುಂಟೆ ಶೀತೋಷ್ಣ ಸಹಿಸುವವಗೆ ಛಳಿ ಬಿಸಿಲು ಭಯವೆ | ನೀತಿ ಕೋವಿದರಿಗೆ ಜಾತಿ ಪಕ್ಷಗಳುಂಟೆÉ ದಾತನಿಗೆ ದುರ್ಭಿಕ್ಷು ಭೀತಿ ತಾವುಂಟೆ 3 ವಿದ್ಯಾಭಿಲಾಶೆಗೆ ತೇರ್ಗಡೆಯ ಭಯವುಂಡೆ ಉದ್ಯೋಗವಿದ್ದವಗೆ ಉದರ ಭಯವೇ ಯುದ್ಧ ಶೂರರಿಗೆಲ್ಲ ಮದ್ದುಗುಂಡಿನ ಭಯವೇ ಬುದ್ಧಿವಂತರಿಗೆಂದಿಗಪಮಾನ ಭಯವೇ 4 ನೇಮದಿಂದಲಿ ನಡೆವವಗೆ ಸೋಮಾರಿತನವುಂಟೆ ಭೂಮಾತೆ ಮಕ್ಕಳಿಗೆ ಕ್ಷಾಮವುಂಟೆ ಸಾಮಗಾನವಿಲೋಲ ಶಾಮಸುಂದರವಿಠಲ ನಾಮ ನೆನವವಗೆ ಯಮಧಾಮದಂಜಿಕೆಯೇ 5
--------------
ಶಾಮಸುಂದರ ವಿಠಲ
ಶುಂಠನಿಗೆ ಉಂಟೆ ವೈಕುಂಠಾ | ಬಂಟನಿಗೆ ಉಂಟೆ ಒಡತನವು ಪ ಕಳ್ಳನಿಗೆ ಉಂಟೆ ಪರರು ಒಡವೆ ಗಳಿಸಿದ ಕಷ್ಟ | ಸುಳ್ಳನಿಗೆ ಉಂಟೆ ಮಿತಿಯಾದ ಭಾಷೆ|| ಕೊಲ್ಲುವನಿಗೆ ಉಂಟೆ ದಯಾದಾಕ್ಷಿಣ್ಯದ ಮಾತು | ಕ್ಷುಲ್ಲಕನಿಗೆ ಉಂಟೆ ಗುಣ ಭಾರಿ ಬುದ್ಧಿಗಳು 1 ಉಪವಾಸಿಗೆ ಉಂಟೆ ಅನ್ನ ಆಹಾರದ ಚಿಂತೆ | ತಪಸಿಗೆ ಉಂಟೆ ಇಹದ ವ್ಯಾಕುಲ || ಕೃಪಣನಿಗೆ ಉಂಟೆ ದಾನ-ಧರ್ಮದ ಚಿಂತೆ | ಚಪಳನಾರಿಗೆ ಉಂಟೆ ತನ್ನ ಮನೆವಾರ್ತೆ 2 ರುಚಿ | ಹಾದಿ ಬಿಟ್ಟವಗುಂಟೆ ಮನದ ಧೈರ್ಯ || ವೇದನೆಬಡುವಗುಂಟೆ ಅನ್ನಿಗರ ಸಂಧಾನ | ಕ್ರೋಧದವಗುಂಟೆ ಬಲು ಶಾಂತ ನೀತಿ 3 ಕಾಮಾತುರಗೆ ಉಂಟೆ ಭವಕುರಿತ ಲಜ್ಜೆಗಳು | ನೇಮ ನಿತ್ಯಗೆ ಉಂಟೆ ಮನದರೋಗ || ಹೇಮಾತುರಗೆ ಉಂಟೆ ಗುರು ಬಾಂಧವ ಸ್ನೇಹ | ತಾಮಸಿಗೆ ಉಂಟೆ ಶುಭಕರ್ಮ ಸದ್ಭಕ್ತಿ 4 ದಾನಿಗೆ ಉಂಟೆ ಇಂದಿಗೆ ನಾಳಿಗೆಂಬೋದು | ಜ್ಞಾನಿಗೆ ಹತ್ಯಾದಿ ದೋಷ ಉಂಟೆ | ಸಿರಿ ವಿಜಯವಿಠ್ಠಲ ಸ್ವಾಮಿಯ ಧೇನಿಸುವಗುಂಟೆ ದಾರಿದ್ರ್ಯ ದುಷ್ಕರ್ಮ5
--------------
ವಿಜಯದಾಸ