ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ವಿಬುಧರ ಸಂಗವೆ ಮಹಾಪ್ರಮೋದ ದುರ್ಲಭ ಜ್ಞಾನಿಯ ನಿಜಾತ್ಮಬೋಧ ಭಾಗ್ಯವಿದೇ ಬಹುಜನ್ಮದ ಪುಣ್ಯ ಯೋಗ್ಯರಬೋಧಾ ದೊರಕುವುದಣ್ಣ ಬೋಗ್ಯದಿ ಲಂಪಟನಾದವಗಿನ ಅಗ್ಗದಿ ಸಿಗುವದೆ ಸಜ್ಜನರನ್ನಾ ಸ್ವರ್ಗದಿ ಸಿಗದಿಹ ಸಂತರ ಬೋಧ ದುರ್ಲಭ ಜ್ಞಾನಿಯ ನಿಜಾತ್ಮಬೋಧ 1 ಉಪದೇಶದಿ ಈ ಭವವನು ಕಡಿವಾ ಬಾಧೆಯ ಸುಡುವಾ ಮುಕುತಿಯ ಕೊಡುವಾ ಹೃದಯದೊಳಿರುವಾ ಆತ್ಮಸ್ವರೂಪ ಜ್ಞಾನದಿ ತಿಳುಹಿನಿ ಮೋದವ ಕೊಡುವಾ ಸ್ವಾನು ಭವಾನಂದಾನ್ವಿತರೂಪ ಸನ್ನುತ ಶಂಕರಗುರುಸ್ವರೂಪ2
--------------
ಶಂಕರಭಟ್ಟ ಅಗ್ನಿಹೋತ್ರಿ
ಪ್ರಭುರಾಯ ಪ್ರಭುರಾಯ ಅಭಿನಂದಿಸುವೆನು | ಶುಭಮತಿ ಪಾಲಿಸು ಪ ಶ್ರೀಶಗುರಪ್ರಾಣೇಶದಾಸರಿಂದ ಪೋಷಿತನಾದ ಭೂಸುರ ಪ್ರೀಯ 1 ಭಾವÀಭಕ್ತಿಲಿ ಸೇವಿಸಿ ಸಂತಸ ಶ್ರೀವರದೇಂದ್ರರ | ನೀಮೊಲಿದ‌ಘನ 2 ಕೋಶಿಗಿ ಗುರು ಉಪದೇಶದಿಂದ ವರ ದೇಶವಿಠಲನ ದಾಸನೆಂದೆನಿಸಿದ 3 ಕಪ್ಪುಗೊರಳನುತ | ಕುಪ್ಪಿಯ ಭೀಮನ ತಪ್ಪು ಕ್ಷಮಿಸೆಂದು | ತಪ್ಪದೆ ಸ್ತವಿಸಿದ 4 ಅನ್ಯನಲ್ಲನಾ ನಿನ್ನಾಪ್ತನು ನಿಜ ವೆನ್ನುತ ಬಿನ್ನಪ ಮನ್ನಿಸಿ ನೋಡೋ 5 ರಾಮಸ್ತವನವನು ನೇಮದಿಗೈಯುವ ಕೋಮಲಾಂಗದ ಹೇಮಮ ಬಂಧು 6 ನಂದಜ ಶಾಮಸುಂದರವಿಠಲನ ಮಂದಜ ಮಧುಪ7
--------------
ಶಾಮಸುಂದರ ವಿಠಲ
ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆಪ ಹಿಂದೆ ಮುಂದೆ ಎಂದೆಂದಿಗು ಎನ್ನಯ ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ ಅಪರಾಧಿಯು ಎಂದು ತಿಳಿದರು ಗುಪಿತದಿ ಸಲಹುವದು ಅಪಮೃತ್ಯುವು ಪರಿಹಾರಕೆ ನಿಮ್ಮಯ ಉಪದೇಶದ ಮಂತ್ರವೆ ಪರಮೌಷಧಿ 1 ಕಾಯಕ್ಲೇಶದಿಂದ ಮನಸಿನ ಹೇಯ ವ್ಯಥೆಗಳಿಂದ ಕಾಯಜ ಪಿತನಂಘ್ರಿಯ ಸೇವಿಸದಲೆ ಆಯಾಸದಿ ಮನ ಕಳವಳಗೊಳುತಿದೆ 2 ಆರು ಮಂದಿ ಇಹರು ಮಾಯಾ ಪಾಶಾದಿ ಬಂಧಕ ಪಡಿಸುತ ಹಾಯಲೀಸರೊ ಹರಿ ಅಂಘ್ರಿಗಳಲಿ 3 ಆರಿಗುಸುರಲೇನು ಮಾಡಿದ ಕಾಂiÀರ್iವು ಮುಂದಿನ್ನೂ ಆನಂದಮಯ ವಿಠ್ಠಲದಾಸರ ಕೂಡಿ ಆದರುಸುವುದಿನ್ನೂ ಮುನ್ನೂ4 ಕಮಲನಾಭ ವಿಠ್ಠಲನೊಲುಮೆಯು ಸುಲಭದಿ ಪಡೆವುದಕೆ ಅನುದಿನ ಪ್ರಾರ್ಥಿಸುತ5
--------------
ನಿಡಗುರುಕಿ ಜೀವೂಬಾಯಿ
ವಿಜಯಗುರು ನಿನ್ನಡಿಯ ಭಜಿಸುವೆನೋ ಸತತದಲಿ ವಿಜಯ ಕೊಡು ದಾಸತ್ವದಿ ಪ. ಪಾದ ಭಜನೆಯ ಮಾಳ್ಪಂಥ ಮತಿ ರುಜು ಮಾರ್ಗ ತೋರಿ ಸಲಹೋ ದಯದಿ ಅ.ಪ. ವಿಧಿ ವಶದಿ ಘನ ಕಷ್ಟ ಒದಗುತಿರೆ ಚರಿಸಿ ಯಾತ್ರೆ ಪದುಮನಾಭನ ದಯದಿ ಕಾಶಿಕ್ಷೇತ್ರದಲಿರುವ ಅದೆ ಕಾಲದಲಿ ಸ್ವಪ್ನದಿ ವಿಧಿಸುತಾಂಶರು ಪುರಂದರದಾಸರಿತ್ತಂಥ ಅದುಭುತದ ಉಪದೇಶದಿ ಉದಿತವಾಗಲು ಜ್ಞಾನ ಒದೆದು ದುಷ್ಕರ್ಮಗಳ ಪದುಮೇಶ ದಾಸನಾದಿ ಮುದದಿ 1 ಪರಮ ವೈರಾಗ್ಯದಲಿ ಚರಿಸಿ ತೀರ್ಥಕ್ಷೇತ್ರ ತರುಣಿ ಶಿಷ್ಯರ ಸಹಿತದಿ ಪರಿಪರಿಯ ಮಹಿಮೆಗಳವರ ಭಕ್ತಿಗೆ ತೋರಿ ಕರುಣಾಳುವೆನಿಸಿ ಮೆರೆದಿ ಪುರಂದರ ಗುರು ಆಜ್ಞೆ ತೆರದಂತೆ ಪದಲಕ್ಷ ವಿರಚಿಸಿದೆ ಪದ ಸುಳಾದಿ ನರವರರಿಗನ್ನದಾನಗಳನು ಮದುವೆ ಮುಂಜಿ ತೆರವಿಲ್ಲದೆಲೆ ಚರಿಸಿದಿ ದಯದಿ 2 ನಿನ್ನ ಕರುಣವು ದಾಸಕುಲದವರ ಮೇಲೆ ಬಹು ಉನ್ನತವಾಗಿಹುದು ಘನ್ನ ಗುರು ವಿಜಯವಿಠ್ಠಲದಾಸರೆಂತೆಂದು ನಿನ್ನ ಸ್ಮರಿಸಲು ಕಾವುದು ಎನ್ನ ಗುರು ತಂದೆ ಮುದ್ದುಮೋಹನರ ದಯದಿ ನಿನ್ನ ಸ್ಮರಿಸಲು ಬಾಹುದು ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನ ದಯದಿ ಉನ್ನತ ಜಯವೀವುದು 3
--------------
ಅಂಬಾಬಾಯಿ
ಸುರಪಕುಮಾರ ನಾರಣ ಗೀತಾರ್ಥ ಪ ಧರಣಿಯ ಸೌಖ್ಯದ ಬಯಕೆಯು ವ್ಯರ್ಥ ಅ.ಪ ಮರಣಕಾಲದಿ ತನ್ನ ಬಳಿಗೆ ಬಂದಾತನ ಚರಣವೆ ಶರಣೆಂದ ಖಗನು ಸಮರ್ಥ ಶರಣೆಂದೆನ್ನುತ ಧರಣಿಜೆಯರಸನ ಚರಣವ ನುತಿಸಿದ ದನುಜ ಸಮರ್ಥ1 ಸರಳ ಪಂಜರದಲಿ ಶಯನಿಸಿದಾಗ ತನು ಹರಿ ಶರಣೆಂದುದು ಪರಮ ಪದಾರ್ಥ ಗುರು ಉಪದೇಶದಿ ಶರಣಾಗತಿಯ ಮಾಂ ಗಿರಿಯರಸಗೊರೆವುದೆ ಚಿರ ಚರಿತಾರ್ಥ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೃಷ್ಣ ಮಂತ್ರವ ಜಪಿಸೊ - ಏ ಮನುಜ |ಕೃಷ್ಣ ಮಂತ್ರವ ಜಪಿಸೊ ಪ.ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ 1ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ 2ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |ಜೀವಗಳಿಗೆಲ್ಲ ಸಂಜೀವ ಮಂತ್ರ ||ಪಾವನ ಮಾಡಿ ಪಾಲಿಪುದೀ ಮಂತ್ರ |ದೇವ ಪುರಂದರವಿಠಲ ಮಹಾ ಮಂತ್ರ 3
--------------
ಪುರಂದರದಾಸರು