ಇಕ್ಕೊ ಇಲ್ಲೆ ನೋಡಿ ಸಿಕ್ಕುತ್ತದೆ ನಿಜಗೂಡಿ ಧ್ರುವ ತಿಳಿಯಲು ತನ್ನ ಅಳುವುದು ಭಿನ್ನ ಒಳಹೊರಗದೆ ಪ್ರಸನ್ನ ಬೆಳಗು ಅಭಿನ್ನ ಹೊಳೆವದು ಸುಳಹು ಸದ್ಗುರು ಪಾವನ್ನ 1 ತನ್ನೊಳು ತಿಳಿದವನೆ ತಾನುಳಿದ ಉನ್ಮನಿವಸ್ತಿಯೊಳಳಿದಾ ಮುನ್ನಿನ ಕರ್ಮವ ನಿಲ್ಲದೆದೊಳದಾ ಚನ್ನಾಗವೆ ಭವಗಳೆದಾ 2 ಇದು ನಿಜ ಖೂನ ಸಾಧಿಸು ಙÁ್ಞನ ಬುಧ ಜನರ ಸುಪ್ರಾಣ ಭೇದಿಸು ಮಹಿಪತಿ ನಿನ್ನೊಳು ಪೂರ್ಣ ಇದೇ ಸದ್ಗುರು ಕರುಣ3
ಜೋ ಜೋ ಜೋ ಜೋ ಜೋ ಎನ್ನ ಗುರುವೆ ಜೋ ಜೋ ಜೋ ನಿಜ ಕಲ್ಪತರುವೆ ಜೋ ಜೋ ಎಂದು ಜನ್ಮಕ್ಕೆ ಬರುವೆ | ಜೋ ಜೋ ನಿಮ್ಮ ಚರಣದಲ್ಲಿರುವೆ ಜೋ ಜೋ ಪ ಅಷ್ಟ ಸಿದ್ಧಿಗಳೆಲ್ಲ ಬಡ್ಡಿಯ ಕೊರೆಸಿ | ಗಟ್ಟ್ಯಾಗಿ ವೇದದ ಕಾಲವ ನಿಲ್ಲಿಸಿ ಅಷ್ಟತತ್ತ್ವದ ಹುರಿ ಹೆಣಿಕಿಲಿ ಬಿಗಿಸಿ | ತೊಟ್ಟಿಲೊಳರುವಿನ ಹಾಸಿಗೆ ಹಾಸೀ || ಜೋ ಜೋ 1 ಸಾಧನ ನಾಲ್ಕೆಂಬೋ ಹಗ್ಗವ ಹೊಸೆದು | ಬೋಧದ ಗಂಟು ತುದಿಯಲ್ಲಿ ಬಿಗಿದು | ನಾದ ಅನಾಹತ ಗಂಟೆಯ ಹೊಡೆದು | ಆದಿ ಗುರುವಿನ ಮಲಗಲಿ ಕರೆದು || ಜೋ ಜೋ || 2 ಕಾಲಿಗೆ ಯೋಗದ ಪಾಶವ ಕಟ್ಟಿ | ಮೂಲೈದು ಬ್ರಹ್ಮರಂಧ್ರಕ್ಕೆ ಮುಟ್ಟಿ | ಮೇಲಿನ ಜೋತೆಗೆ ಭಾಸದ ಬುಟ್ಟಿ | ಲೀಲೆಯಿಂದಲಿ ನೋಡು ಗುರುವಿನ ದೃಷ್ಟಿ || ಜೋ ಜೋ 3 ಮನಸೀಗೆ ಬಾರದ ಮಾತುಗಳಾಡಿ |ನೆನೆಹಿಗೆ ನಿಲ್ಕದ ನಿತ್ಯನ ಕೂಡಿ | ಕನಸು ಎಚ್ಚರದ ಗಾಢವ ನೋಡಿ |ಉನ್ಮನಿ ಬೆಳಗುವ ಮೂರ್ತಿಯ ಪಾಡಿ || ಜೋ ಜೋ 4 ಭಕ್ತಿ ವಿರಕ್ತಿಗೆ ಸಿಲ್ಕುವನೀತಾ | ಸತ್ಯ ಶರಣ್ಯ ಸದ್ಗುರು ನಾಥಾ | ಕರ್ತೃತ್ವ ಇಟ್ಟನು ಮೌನದಲ್ಲೀತಾ | ವೃತ್ತಿ ವಿರಹಿತ ಗಿರಿ ಪಾಲಿಸು ಗುರುತಾ || ಜೋ ಜೋ 5
ಜೋ ಜೋ ಜೋ ಅಂಜನಿ ಕಂದಾ ಜೋ ಜೋಸಂಜೀವನ ತಂದಾ | ಜೋ ಜೋ ಸಾಧುಸಜ್ಜನ ವೃಂದಾ | ಜೋ ಜೋ ವಾಯು ಬಾಲಮುಕುಂದಾ ಜೋ ಜೋಪಭೂತೈದೆಂಬೊ ಕನ್ನಡಿ ಮಂಟಪದೊಳಗೆ |ಜ್ಯೋತಿ ದೀಪದ ಭಾಸ ಉನ್ಮನಿಯೊಳಗೆ |ಪ್ರೀತಿಂದ ಪ್ರಣವೆಂಬ ಮೇಲ್ಕಟ್ಟ ಕೆಳಗೆ ರಕ್ತಶ್ವೇತಶ್ಯಾಮನೀಲಖಿಡಕಿಯೊಳಗೆ ಜೋ ಜೋ1ಪಂಚ ಭೂತವೆಂಬ ಮಂಚವ ನಿಲಿಸಿ |ಪಂಚವಿಂಶತಿ ತತ್ತ್ವ ನವಾರ ಬಿಗಿಸಿ | ಪಂಚಕರಣವೆಂಬೋ ಹಾಸೀಗಿ ಹಾಸಿ | ಪಂಚ ಪ್ರಾಣವೆಂಬೋಲೇಪ ತೀವಿಸಿ ಜೋ ಜೋ2ಆರು ಚಕ್ರ ಮೀರಿದ ಸ್ಥಾನದಲ್ಲಿ |ಘೋರಘೋರಘೋಷ ಉನ್ಮನಿಯಲ್ಲಿ |ತುರ್ಯಾತೀತ ಶಂಕರ ತಾನೇ ಅಲ್ಲಿ |ಸೂರ್ಯಚಂದ್ರ ಅಗ್ನಿ ಮೂಜಗದಲ್ಲಿ ಜೋ ಜೋ3
ಮಾಡೋ ಸುವಿಚಾರ ಸಾಧನಾ |ಹವಣಿಕಿಯಲಿ ನಿನ್ನ ಮಾಡೊಪಮಾಡಿ ನಿನ್ನ ಕಡಿ ಮೋಹ ಬೇಡಿ ಘನಗೂಡಿನಲ್ಲಿಒಡಗೂಡಿಸರ್ಕನೆ| ಮಾಡೊಅ. ಪ.ಶ್ರುತಿತತಿಯ ಪೇಳಿಹ ವಚನ ಸತತ ಮಾಡೊನೀ ಮಥನದನಾ | ಇತರ ಭಾವನತಿಗಳೆದು |ಶಾಂತಿನಿಜ ಸ್ಥಿತಿಯ ತಾಳಿ ಸದ್ಗತಿಪಡೆಯೊ ನೀ ಮಾಡೊ1ಪರಿಪರಿಯ ಜನ್ಮಂಗಳನು | ಧರಿಸಿ ಬಟ್ಟಿಬಹುಕ್ಲೇಶವನು ಪರಿಹರಿಸಿಗುರುವರನ ಕರುಣದಿಂದರಿತುಕೊಳ್ಳೊನಿನ್ನರಿವು ನೋಡಿ ನೀ ಮಾಡೊ2ಸ್ಥೂಲ ಸೂಕ್ಷ್ಮ ಕಾರಣದುದಯಾ |ಮೂಲಉನ್ಮನಿಕೀಲ ಸಾಕ್ಷಿಯನುಕೂಲಶಂಕರನ ಲೀಲೆ ನೋಡಿ ನೀ ಮಾಡೊ3