ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಐದು ಶ್ರೀ ಕಾಲಿಯ ಫಣಾರ್ಪಿತ ಪಾದಾಂಬುಜಾಯನಮ ಶ್ರೀ ಗುರುಭ್ಯೋನಮಃ ಪದ, ರಾಗ ಸೌರಾಷ್ಟ ತಾಳ ತಿವಿಡೆ ಸ್ವರ ಋಷಭ ಬಿಡದೆ ಕೃಷ್ಣನ ಅಪ್ಪಿ ತಾಯಿಯು ನಡದಳಾ ಗೃಹಕಾರ್ಯದಲ್ಲೆ ನಡೆದವನು ಜೋಡ್ಯರಡು ಮತ್ತೀ ಗಿಡಗಳಿದ್ದಲ್ಲೇ ನಡೆದವುಗಳ ಮತ್ತವು ತಡದು ಅಡ್ಡಾಯಿತು ಊಲೂಬಲ ಕಡಕಡೆನುತಲಿ ಕಡದು ಬಿದ್ದವುಗಿಡಗಳವು ಎರಡು|| 1 ಪತಿತ ವೃಕ್ಷಗಳಿಂದ ಹೊರಟರು ಅತಿಸುರೂಪರು ಅತಿ ಮದೋನ್ಮತ್ತರು ಕುಬೇರನ ಸುತರು ಮಂಚೆವರು| ಪೃಥಿವಿಯಲಿ ತರುಜನ್ಮಕೊಂಡರು ಪ್ರಥಮ ನಳಕೂಬರನು ಎನಿಸುವ ದ್ವಿತಿಯ ಮಣಿಗ್ರಿವಾ|| 2 ವೃಕ್ಷ ಜನ್ಮದಿ ಮುಕ್ತರಾದರಧೋಕ್ಷಜನ ದಯದಿಂದ ಇಬ್ಬರು ವೃಕ್ಷ ಶಬ್ದವ ಕೇಳಿ ನೆರೆದರು ಆ ಕ್ಷಣಕೆ ಜನರು ಲಕ್ಷ್ಮಿ ಇಲ್ಯಲ್ಲರಿಗೆ ಹರಿ ಪುತ್ಯಕ್ಷ ಅಲ್ಲಿರಲು|| 3 ತನ್ನ ಮಗನಾಟವನು ತಿಳಿಯದೆ ಚನ್ನಿಗನು ಆನಂದಗೋಪನು ಮುನ್ನವನು ಕರಕೊಂಡು ನಡಿದನು ಕಣ್ಣಿಯನು ಬಿಟ್ಟಿ|| ಆದಾವೆಂದು ಚಿಂತಿಸಿ ತನ್ನ ಮನದೊಳಗೆ 4 ಹೂಡಿ ಭಂಡಿಗಳನ್ನು ಮರುದಿನ ಮಾಡಿಸಿದ್ಧವು ಎಲ್ಲರಿಂದಲಿ ಕೂಡಿ ವೃಂದಾವನಕ ಪೋಗುತ ಮಾಡಿದಾಶ್ರಯವು | ನೋಡಿ ಆ ವೃಂದಾವನ ಸ್ಥಳ ಗಾಢ ಹರುಷದಲಿ ಬಾಲರೆಲ್ಲರು ಕೂಡಿದರು ಕುಣಿದಾಡಿದರು ಙಡ್ಯಾಡಿದರು ಅಲ್ಲೆ5 ಸ್ವಚ್ಛ ಯಮುನಾ ತೀರದಲಿ ತನ್ನಿಚ್ಛಿಯಿಂದ ವಿಚಾರ ಮಾಡುವ ವತ್ಸಗಳ ಕಾಯುವನು ತಾ ಶ್ರೀ ವತ್ಸಲಾಂಧನನು| ವಂತ್ಸರೂಪದಿ ಬಂದ ಅಸುರನ ಪುಚ್ಛ ಹಿಂಗಾಲ್ಹಿಡದು ತಿರಿಗಿಸಿ ಉತ್ಸವದಿ ಮ್ಯಾಲೊಗೆದ ಬಿದ್ದಾವತ್ಸಹತವಾಗಿ|| 6 ನಳಿನನಾಭನು ಮುಂದ ಆತರಗಳಿಗೆ ತಾ ನೀರಕುಡಿಸಿ ತೀರದ ಮಳಲಿನೂಳಗಾಡುವನು ಮತ್ತಾ ಗೆಳೆಯರನ ಕೂಡಿ| ಖಳ ಅಸುರ ಬಕಪಕ್ಷಿ ರೂಪದಿ ಸುಳದು ಮೆಲ್ಲನೆ ಬಂದು ಬಾಲಕರೂಳಗಿರುವ ಕೃಷ್ಣನ್ನ ತಾ ಬಾಯ್ವಳಗ ನುಂಗಿದನು||7 ಸುಡುವ ಕೃಷ್ಣನ ಉಂಡು ದಕ್ಕಿಸಿಕೊಳದೆ ಘಾಬರಿಗೊಂಡು ಕಾರಿದನು| ತುಂಡು ಮಾಡಿಯೊಗದಾ||8 ಘಾಸಿ ಆಗದೆ ಉಳದನೆಂದು ತೀಸವಾಗ್ಯಲ್ಲಾರು ಬಹಳುಲ್ಹಾಸವನು ಬಟ್ಟು ಏಸುಕಾಲಕೆ ಬಿಡದೆ ನಮ್ಮನ್ನು ಘಾಸಿಮಾಡದೆ ಗುರು ಅನಂತಾದ್ರೇಶ ರಕ್ಷಿಸುವೋನು ಎಂದು ಆ ಸಮಯದಲ್ಲಿ 9 ಪದ್ಯ ಸಾಧು ಹಿತಕರ ಕೃಷ್ಣಯಾದವರಲ್ಯವ ತರಿಸಿ ಐದು ವರ್ಷಾದ ಮ್ಯಾಲ್ಕಾಯ್ದನು ಆಕಳುಗಳನು ಆದರದಿ ಮತ್ತು ರಾಮಾದಿಗಳಕೂಡಿ ಬೇಕಾದ ಆಟಗಳಾಡಿ ಅನುಸರಿಸಿ ಆ ಧೇನುಕಗಳ ಕೂಡಿ ಸ್ವಾದು ಫಲಗಳು ಕೋಮಲಾದ ತೃಣ ಇದ್ದಲ್ಲೆ ಆದಿಯಲಿ ಬಲರಾಮ ಹಾದಿಯನು ಮಾಡಿ ಮುಂಧೋದ ಆ ಸ್ಥಳಕ್ಕೆ || 1 ನೋಡ್ಯಲ್ಲೆ ತಾಳಾಖ್ಯ ಪ್ರೌಢ ವೃಕ್ಷಗಳನ್ನು ಆ ಫಳಗಳನ್ನು ಪ್ರೌಢಫಲಗಳು ನೋಡಿ ಅಬ್ಬರದಿಂದ ಓಡಿ ಬಂದನು ಅಸುರ ಕೂಡಿ ತನ್ನವರಿಂದ ಕಾಡ ಖರರೂಪಿ ಅವ ಮಾಡಿ ಕ್ರೂರಧ್ವನಿಯ ಮಾಡಿದನು ಮೂಢಧೇನುಕನು 2 ಖಡುಕೋಪದಲಿ ರಾಮ ಹಿಡಿದು ಹಿಂಗಾಲುಗಳ ತಡಿಯದಲೆ ತಿರಿವ್ಯಾಡಿ ಗಿಡದ ಮ್ಯಾಲೊಗದ ಆ ಗಿಡಕ ಭಾರಾಗ್ಯವನು ಗಿಡಸಹಿತ ಪ್ರಾಣ ವನು ಬಿಡುತಲೆ ಬಿದ್ದನು ತೆಳಗೆ ತಡವು ಇಲ್ಲದಲೆ| ಬಿಡದೆ ವಸುದೇವಜರು ಬಿಡಿ ಮೆಂದಿಗಳ ಕೊಂಡು ಖಡು ಹರುಷದಿಂದಲ್ಲೆ ಬಿಡದೆ ಗೋಪಾಲರಿಂದೊಡಗೂಡಿ ಎಲ್ಲಾರು ಖಡು ರುಚಿಕರಾಗಿರುವ ಗಿಡದ ಫಲಗಳ ತಿಂದು ನಡದರಾಲಯಕೆ|| 3 ಬಂದು ದಿನದಲಿ ದಿವಿಜವಂದಿತನು ಶ್ರೀ ಕೃಷ್ಣವಂದಿಸ್ಯಗ್ರಜಗ ಅವನ ಮಂದಿರದಲಿಟ್ಟು ಬಹು ಛಂದವಾಗಿರುವ ಕಾಳಿಂದಿಯಾ ತೀರದಲಿ ಬಂದÀ ಗೋಗೋಪಾಲ ವೃಂದವನು ಕಾಲಂದಿಯಲಿ ವಿಷಜಲವು ಛಂದಾಗಿ ಕುಡದುಮರಣ ಬದಿಕಿಸಿದ ಗೋವಿಂದ ಎಲ್ಲಾರನಾ|| 4 ಚಾರು ಕಾಲಿಂದಿಯಲಿ ನೀರು ವಿಷವಾದಕ್ಕೆ ಕಾರಣ ಹುಡುಕುವೆನೆಂದ ಶೌರಿಸುತ ಶ್ರೀಕೃಷ್ಣಸಾರ ಕಡಹಾಲ ಮರನೇರಿ ಆ ಮಡಿವಿನಲಿ ಹಾರಿದಾಕ್ಷಣಕ್ಕೆ ಉಕ್ಕೇರಿದಳು ಸಾರ ಮದಗಜದಂತೆ ನೀರೊಳಗೆ ಗಡಬಡಿಸಿ ಸಾರ ಸರ್ಪನ ಹಿಡಿದ ಕ್ರೂರನವ ಮೈಮ್ಯಾಲೇರಿ ಕಚ್ಚುತ ತನ್ನ ಶರೀರಪಾಶದಿ ಹರಿ ಶರೀರ ಸುತ್ತಿದನು||5 ದುಷ್ಟಾಹಿಯಿಂದ ನಿಶ್ಚೇಷ್ಟನಾದನು ಕೃಷ್ಣದೃಷ್ಟಿಯಿಂದಲಿ ನೋಡಿ ಅಷ್ಟು ಗೋಗಳು ಮತ್ತೆ ಅಷ್ಟೆಗೋಪಾಲಕರು ಕಷ್ಟವನು ಬಟ್ಟು ಉತ್ಕøಷ್ಟ ತಾಪದಲೆ ನಿಶ್ಬೇಷ್ಟರಾದರು ಅಲ್ಲೆ ಕಾಷ್ಟಮೂರ್ತಿಗಳಂತೆ ಸ್ಪಷ್ಟತೋರಿದರು| ಗೋಷ್ಟದಲಿ ಮತ್ತೆಲ್ಲ ದುಷಚಿನ್ಹವು ಕಂಡು ಶೇಷ್ಠ ನಂದಾದಿಗಳು ಕÀಷ್ಟದನು ಬಟ್ಟಸಂತುಷ್ಟರಾಮನ ಕೂಡಿ ಅಷ್ಟೂರು ನಡದರಾ ವೃಷ್ಣಿಕುಲ ತಿಲಕ ಶ್ರೀಕೃಷ್ಣ ಇದ್ದಲ್ಲೆ||6 ಮುಂದವನ ತಾಯಿ ಆಕಂದನಾ ಕಂಡು ಕಾಳಿಂದಿಯಲಿ ಧುಮುಕಬೇಕೆಂದು ಧಾವಿಸಲಾಗಿ ಮಂದಗಮನಿಯರೆಲ್ಲ ಹಿಂದಕ್ಕ ಸರಿಸಿದರು ನಂದಗೋಪನ ಹಿಡಿದು ಹಿಂದಕ್ಕ ಸರಿಸಿದನು óಛಂದದಲಿ ರೋಹಿಣಿಯ ಕಂದ ಬಲರಾಮಾ| ಮುಂದೆರಡು ಫಳಿಗಿ ಮ್ಯಾಲೆ ಛಂದಾಗಿ ಎಚ್ಚÀ್ಚರಿಕಿಯಿಂದ ಸರ್ಪನ ಹಿಡಿದು ಹಿಂದೊತ್ತಿ ಹೆಡಿಮೇಲೆ ಛóಂದಾಗಿ ಮಂದ ಹಾಸ್ಯದಿ ನಗುತ ನಂದಸುತ ಕುಣಿದ ಆನಂದದಿಂದಾ|| 7 ಪದ, ರಾಗ:ಆನಂದ ಭೈರವಿ ಆದಿತಾಳ ರಂಗ ಕುಣಿದ ಕಾಳಿಂಗನ ಹೆಡಿಮ್ಯಾಲ ಕಂಗಳಿಂದಲಿ ನೋಡಿ ಹಿಂಗದೆ ಸುರಕಿಲ್ಲ ಸಂಗೀತ ಸಹಿತ ಸಾರಂಗ ಮೃದಂಗ ತಾಲಂಗಳ ನುಡಿಸಿದರು ಹಿಂಗದಲೆ||ಪ ಹಿಂಗದೆ ಯಮುನಿ ತರಂಗಗಳಿಂದಲೆ ಮಂಗಳಾಂಗನ ಪಾದಂಗಳ ತೊಳುವಳು | ಅಂಗಾಲಿಲ್ಯವನು ಕಾಳಿಂಗನ ಮರ್ದಿಸಿ ಮಂಗಳ ಕೂಡುವ ಜಗಂಗಳಿಗೆ | ಮಂಗಳಕರ ಪುಷ್ಟಂಗಳ ದೃಷ್ಟಿಯ ರಂಗಗ ಮಾಳ್ಪರು ಹಿಂಗದೆ ದಿವಿಜರು ಭೃಂಗಕೋಕಿಲ ಮಯೂರಂಗಳು ಮಾಳ್ಪವು ರಂಗನ ಸಂಗಾತ ಸಂಗೀತವು|| 1 ಮುನ್ನಾಗಿ ಬಹುವರ್ಷ ತನ್ನ ಸಂದರ್ಶನವನ್ನು ಬಯಸುವಂಥ ಮಾನ್ಯಾದ ಮುನಿಗಳಿಗೆ ಚೆನ್ನಾಗಿ ಶ್ರೀಹರಿ ತನ್ನ ಕೃಷ್ಣರೂಪವನ್ನು ತೋರಿಸುತ ಪ್ರಸನ್ನನಾಗಿ| ಉನ್ನತವಾಗಿಹ ಪನ್ನಗಾಧೀಶನ ಉನ್ನತವಾಗಿಹ ಘನ್ನ ಹೆಡಿಗಳಲ್ಲಿ| ರನ್ನದಂಥೊಳುವಂಥಾ ತನ್ನ ಪಾದಗಳಟ್ಟು ತನ್ನಂಗಡ ಧಿನ್ನಂ ಗಡ ಧಿಕ್ಕಡ ಥೌ ಎಂದು|| 2 ಎಂತು ವರ್ಣಿಸಲಿ ಅನಂತ ಮಹಿಮಿಯು ಎಂಥವರಿಗೆ ಬಹಿರಂತವ್ರ್ಯಾಪತನಾಗ್ಯನಂತ ಪ್ರಾಣಿಗಳಲ್ಲಿ ನಿಂತಿರುವಾ| ಅಂತ್ಹತ್ತಗುಡದೆ ತನ್ನಂತೆ ತಾ ಕುಣಿದಾಡುವಂಥದಗನ್ಯ ದೃಷ್ಟಾಂತವೆಂಬುದಿಲ್ಲ ಇಂಥ ಎಲ್ಲರು ಭ್ರಾಂತರಾಗಿ|| 3 ಆರ್ಯಾ ಪದ, ರಾಗ :ಜಾಂಗಲಾ ಶ್ರೀ ಪತಿಯೇ ನಮ್ಮ ಪ್ರಾಣಪತಿಯ ಪಾಲಿಸು ಶ್ರೀ ಪತಿಯೆ|| ಪ ಪತಿಯು ಪಾವಿತನಾದ ಹಿತವಾಯಿತು||1 ಫಣಿಯ ಫಣಗಳಲ್ಲಿ ಪ್ರಣಯದಲಿ ಕಾಲಿಟ್ಟ ಶುಣಿಕುಣಿ ದಾಡಿದ್ದು ಗುಣವಾಯಿತು|| 2 ಮುದ್ದು ಮುಖದ ಅನಂತಾದ್ರೀಶ ದುಃಖ ಸಮುದ್ರದಿಂದ ನಮ್ಮನ್ನು ಉದ್ಧಾರ ಮಾಡು 3 ಆರ್ಯಾ ಕೃಷ್ಣ ವೇಣಿಯರ ಕಷ್ಟನೋಡಿ ಶ್ರೀ ಕೃಷ್ಣ ಅವನ ಬಿಟ್ಟನುಬ್ಯಾಗೆ| ಕೃಷ್ಣನೇ ಸಾಕ್ಷಾದ್ದಿಷ್ಣುನೆಂದು ಆ ಕೃಷಸರ್ಪ ನುಡಿದನು ಹೀಂಗೆ|| 3 ಭಕುತಿಯ ಕೊಡು ಮೋಹನಾ|| ಪ ಚನ್ನಾಗಿಕೊಡು ನೀನಿನ್ನಲ್ಲಿ ಧ್ಯಾನಾ||1 ಲೋಕನಾಥನೆ ನಿನ್ನ ತೋಕನೆಂದರಿತು|| 2 ಹರಿಯೆ ಅನಂತಾದ್ರಿ ದೊರಿಯೆ ಎಂದೆಂದು|| 3 ಆರ್ಯಾ ಕಾಳಿಯ ನುಡಿಯನು ಕೇಳುತ ಶ್ರೀ ಪತಿ ಭಾಳ ಪ್ರೇಮದಲಿ ಹೀಗೆಂದಾ | ಹೇಳುವೆ ಕಾಳಿಯ ಕೇಳ್ಯನ್ನಯ ವಚನಾ ಏಳು ಶೀಘ್ರದಲಿ ಇಲ್ಲಿಂದಾ|| 1
--------------
ಅನಂತಾದ್ರೀಶ - ಕಥನಕಾವ್ಯಗಳು
ವಿಜಯಗುರು ನಿನ್ನಡಿಯ ಭಜಿಸುವೆನೋ ಸತತದಲಿ ವಿಜಯ ಕೊಡು ದಾಸತ್ವದಿ ಪ. ಪಾದ ಭಜನೆಯ ಮಾಳ್ಪಂಥ ಮತಿ ರುಜು ಮಾರ್ಗ ತೋರಿ ಸಲಹೋ ದಯದಿ ಅ.ಪ. ವಿಧಿ ವಶದಿ ಘನ ಕಷ್ಟ ಒದಗುತಿರೆ ಚರಿಸಿ ಯಾತ್ರೆ ಪದುಮನಾಭನ ದಯದಿ ಕಾಶಿಕ್ಷೇತ್ರದಲಿರುವ ಅದೆ ಕಾಲದಲಿ ಸ್ವಪ್ನದಿ ವಿಧಿಸುತಾಂಶರು ಪುರಂದರದಾಸರಿತ್ತಂಥ ಅದುಭುತದ ಉಪದೇಶದಿ ಉದಿತವಾಗಲು ಜ್ಞಾನ ಒದೆದು ದುಷ್ಕರ್ಮಗಳ ಪದುಮೇಶ ದಾಸನಾದಿ ಮುದದಿ 1 ಪರಮ ವೈರಾಗ್ಯದಲಿ ಚರಿಸಿ ತೀರ್ಥಕ್ಷೇತ್ರ ತರುಣಿ ಶಿಷ್ಯರ ಸಹಿತದಿ ಪರಿಪರಿಯ ಮಹಿಮೆಗಳವರ ಭಕ್ತಿಗೆ ತೋರಿ ಕರುಣಾಳುವೆನಿಸಿ ಮೆರೆದಿ ಪುರಂದರ ಗುರು ಆಜ್ಞೆ ತೆರದಂತೆ ಪದಲಕ್ಷ ವಿರಚಿಸಿದೆ ಪದ ಸುಳಾದಿ ನರವರರಿಗನ್ನದಾನಗಳನು ಮದುವೆ ಮುಂಜಿ ತೆರವಿಲ್ಲದೆಲೆ ಚರಿಸಿದಿ ದಯದಿ 2 ನಿನ್ನ ಕರುಣವು ದಾಸಕುಲದವರ ಮೇಲೆ ಬಹು ಉನ್ನತವಾಗಿಹುದು ಘನ್ನ ಗುರು ವಿಜಯವಿಠ್ಠಲದಾಸರೆಂತೆಂದು ನಿನ್ನ ಸ್ಮರಿಸಲು ಕಾವುದು ಎನ್ನ ಗುರು ತಂದೆ ಮುದ್ದುಮೋಹನರ ದಯದಿ ನಿನ್ನ ಸ್ಮರಿಸಲು ಬಾಹುದು ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನ ದಯದಿ ಉನ್ನತ ಜಯವೀವುದು 3
--------------
ಅಂಬಾಬಾಯಿ
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ಪ ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗಿಹ ನಾರಾಯಣ ನಾಮ ಮಾಧವ ನಾಮವ 1 ಅಂತರಂಗದಿ ಗೋವಿಂದನ ನಾಮವ ಸಿರಿ ನಾಮವ ಸಂತತ ಮಧುಸೂದನನೆಂಬ ನಾಮವ ಪಂಥವಿಡಿದು ತ್ರಿವಿಕ್ರಮ ನಾಮವ 2 ಅನುದಿನ ವಾಮನ ನಾಮವ ವನಜಾಕ್ಷ ಶ್ರೀಧರ ಗುಣ ನಾಮವ ವಿನಯದಿ ಹೃಷಿಕೇಶನೆನುತಿಹ ನಾಮವ ತನುವಾದ ಪದುಮನಾಭನ ನಾಮವ 3 ಅಂದದೊಳು ಧರಿಸಿರುವ ದಾಮೋದರ ನಾಮ ಚಂದದಿ ವಾಸುದೇವನ ನಾಮವ ಕುಂದದೆ ಸಂಕರ್ಷಣನೆಂಬ ನಾಮವ ಬಂಧನ ಪರಿಹಾರ ಪ್ರದ್ಯುಮ್ನ ನಾಮವ 4 ಅರ್ಥಿಯಿಂದಲೆ ಅನಿರುದ್ಧನ ನಾಮವ ಉತ್ತಮ ಪುರುಷೋತ್ತಮ ನಾಮವ ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ ಮೃತ್ಯುವು ಕಾಣದ ನರಹರಿ ನಾಮವ 5 ಅಚ್ಯುತ ನಾಮವ ನಿಶ್ಚಯಿಸಿ ಜನಾರ್ದನ ನಾಮವ ಬಚ್ಚಿಡಬೇಡ ಉಪೇಂದ್ರನ ನಾಮವ ಸಿರಿ ನಾಮವ 6 ದುಷ್ಟನಿಗ್ರಹವಾದ ಕೃಷ್ಣನ ನಾಮವ ಬೆಟ್ಟದ ವರಾಹತಿಮ್ಮಪ್ಪನ ನಾಮವ ಅನುದಿನ ಘನ ನಾಮವ ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ 7
--------------
ವರಹತಿಮ್ಮಪ್ಪ
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು