ಒಟ್ಟು 9 ಕಡೆಗಳಲ್ಲಿ , 9 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಬೇಕಾಗಿತ್ತೊ ನಿನಗೆ ಈ ಆಟಲೋಕೇಶ ಸಾಕಯ್ಯ ಇಲಿ ಬೆಕ್ಕಿನಾಟಾ ಪ ಸುಷ್ಟು ಜಲಧಿಶಯನ ಬಿಸುಟಿ ಬಿಸಲ್ಯಾಕೆಸೃಷ್ಟಿಪುದು ಮೊದಲ್ಯಾಕೆ ಸೃಷ್ಟಿಸಲು ಪ್ರಾಣಿಗಳಕಷ್ಟ ಪಡಿಸುವುದ್ಯಾಕೆ ಕಷ್ಟವನು ನೋಡಿತುಷ್ಟಪಡುವುದು ಯಾಕೆ ಇಷ್ಟಕೆ ಬಯಕೆ 1 ಸ್ವರ್ಗ ನರಕಗಳೇಕೆ ಜನ್ಮ ಜನ್ಮಾಂತರಕೆವರ್ಗ ಮಾಡುವುದೇಕೆ ಪಾಪಪುಣ್ಯಗಳೇಕೆದುರ್ಗಮದ ವೈಕುಂಠದಾಸೆ ತೋರುವುದೇಕೆನಿರ್ಗುಣನೆ ಸಲ್ಲದಿ ಉದ್ಯೋಗವ್ಯಾಕೆ 2 ಉದಧಿಶಯನದೊಳಾತ್ಮಾನಂದದಲಿ ಮುಳುಗಿಹೃದಯದೊಳು ನೀನೊಂದು ನೀನೇಯೇ ನೀನಾಗಿಮೋದ ಪಡುವುದು ಬಿಟ್ಟು ವೀರನಾರಾಯಣನೆಗದುಗಿನೊಳು ಬಂದಿಲ್ಲಿ ನಿಂತಿರುವುದೇಕೇ 3
--------------
ವೀರನಾರಾಯಣ
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ ನಸುಗೆಂಪಾಗಿ ತಾರಕಿಗಳಡುಗುತಿದೆ ಬೊಂಪು ಹರಿದೋಡುತಿದೆಕೋ ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1 ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2 ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು ರಕ್ಕಸಾಂತರನೆವಳು ಮನೆಮನೆ ಬಿಡದೆ ಅಮ್ಮಿಯನು ಹುಡುಕುತಿವೆ ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3 ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು ದಧಿ ಮಥಕನುವಾಗಿ ಕುಳಿತು ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ ನೀನು ಉಪ್ಪವಡಿಸ 4 ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ ಗೆದೆಯ ಧೈರ್ಯಗುಂದುವ ಸಮಯ ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ ಮುದ್ದು ಗೋಪಾಲಕೃಷ್ಣ 5 ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ ಸನಕ ದೂರ್ವಾಸ ಕೌಶಿಕ ಕಪಿಲರು ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ ಈ ಸಮಸ್ತಾದಿ ಹರಿಯೇ || ಸ್ವಾಮಿ || 6 ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7 ಗಂಗೆ ಗೋದಾವರಿಯ ಭೀಮರತಿವರದೆ ವರ ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು ಅಂಗನೆಯರೆಲ್ಲರೂ ಕೂಡಿ ರಂಗು ಮಾಣಿಕದ ಆಭರಣಗಳಲಂಕರಿಸಿ ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು ಮಂಗಳಭಿಷೇಕಕೆಂದು ಸ್ವಾಮಿ 8 ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು ವರ ಪಾಂಡುರಂಗ ವಿಠಲ ಹರಿಸುತನ ಹಯವರೂಥವ ಹರಿಸಿದವನೆ ಏಳು ಹರಿಸುತನ ಸುತನ ಸುತನ ಕಾಯ್ದವನೆ ಏಳು ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ ನೀನು ಉಪ್ಪವಡಿಸಾ ||ಕೃಷ್ಣ || 9
--------------
ಕವಿ ಪರಮದೇವದಾಸರು
ಖಾದಿ ಧರಿಸುವ ಜನಕೆ ಕ್ರೋಧವುಂಟೇ ಪ ಕ್ರೋಧ ಜೈಸಿದ ನರಗೆ ಕಲಹಗಳುಂಟೇ ಪಥ್ಯದಿಂದಿರುವವಗೆ ವ್ಯಾಧಿ ಭಯವೇ ನಿತ್ಯ ಉಪವಾಸಿಗೆ ಭತ್ತದಾ ವ್ಯಥೆಯುಂಟೇ ಚಿತ್ತ ಶುದ್ಧಿದ್ದವಗೆ ಮೈಲಿಗೆಯ ಪರವೇ 1 ಆಶೆ ಬಿಟ್ಟವನಿಗೆ ಅರಸರಾಭಯವುಂಟೆ ದಾಸನಾದವನಿಗೆ ದೋಷವುಂಟೆ | ದೇಶ ಉದ್ಧಾರಕಗೆ ಸೆರೆಮನೆಯ ಭಯವುಂಡೆ ಪೂಶರನ ಗೆದ್ದವಗೆ ಕಾಮಿನಿಯ ಭಯವೇ 2 ಗೀತಾರ್ಥ ತಿಳಿದವಗೆ ಪಾತಕದ ಭಯವುಂಟೆ ಶೀತೋಷ್ಣ ಸಹಿಸುವವಗೆ ಛಳಿ ಬಿಸಿಲು ಭಯವೆ | ನೀತಿ ಕೋವಿದರಿಗೆ ಜಾತಿ ಪಕ್ಷಗಳುಂಟೆÉ ದಾತನಿಗೆ ದುರ್ಭಿಕ್ಷು ಭೀತಿ ತಾವುಂಟೆ 3 ವಿದ್ಯಾಭಿಲಾಶೆಗೆ ತೇರ್ಗಡೆಯ ಭಯವುಂಡೆ ಉದ್ಯೋಗವಿದ್ದವಗೆ ಉದರ ಭಯವೇ ಯುದ್ಧ ಶೂರರಿಗೆಲ್ಲ ಮದ್ದುಗುಂಡಿನ ಭಯವೇ ಬುದ್ಧಿವಂತರಿಗೆಂದಿಗಪಮಾನ ಭಯವೇ 4 ನೇಮದಿಂದಲಿ ನಡೆವವಗೆ ಸೋಮಾರಿತನವುಂಟೆ ಭೂಮಾತೆ ಮಕ್ಕಳಿಗೆ ಕ್ಷಾಮವುಂಟೆ ಸಾಮಗಾನವಿಲೋಲ ಶಾಮಸುಂದರವಿಠಲ ನಾಮ ನೆನವವಗೆ ಯಮಧಾಮದಂಜಿಕೆಯೇ 5
--------------
ಶಾಮಸುಂದರ ವಿಠಲ
ಗಣಾಧೀಶ ಗೌರೀಶ್ ವಾಗೀಶ ಶ್ರೀಶಾನ'ುಸಿ ಬೇಡುವ ಪ್ರಸಾದವನು ಜಗದೀಶಾನೆಲಸಿ ಹೃದಯದಿ ಬಂದು ನುಡಿಸು ದಯದಿಂದಾನೀ ನುಡಿಸಿದಂತೆ ನುಡಿಯುವೆ ಸ್ಪೂರ್ತಿುಂದಾ 1ದೇಹ ದೇವಾಲಯವು ದೇವರೊಳಗಿಹನುಮನದ ಗರ್ಭಾಲಯದಿ ಮಲಗಿಕೊಂಡಿಹನುನಾಲಿಗೆಯ ನಾಮಗರ್ಜನೆಯ ಬಲದಿಂದಾಮನದ ಕದ ತೆಗೆಯೆ ಕಾಣುನನು ಗೋ'ಂದಾ 2ಮನವೆ ಕಾರಣವು ಬಂಧಮೋಕ್ಷಗಳಿಗೆಮನವೆ ಕಾರಣ'ಲ್ಲಿ ಸುಖದುಃಖಗಳಿಗೆಮನಸು ಬಿಗಿ'ಡಿದ್ಹಿಡಿದು 'ಷಯಗಳ ತ್ಯಜಿಸುಮನತು ನಾಮಸ್ಮರಣೆಯೊಳು ಸದಾ ಇರಿಸು 3ಯಾವಾಗಲೂ ರಾಮ ನಿನ್ನೊಳಗೆ ಇರುವಾಭಾವದಿಂದಲಿ ಕರೆಯೆ 'ಒ' ಎಂದು ಬರುವಾದೇವರನು ನಂಬಿದರೆ ಸರ್ವದಾ ಕಾವಾಯಾವ ಅಂಜಿಕೆಯು ನಿನಗಿಲ್ಲ ತಿಳಿ ಜೀವಾ 4ನಿನ್ನೊಳಗೆ ನೀ ನಿನ್ನ ರಾಮನನು ನೋಡುನಿನ್ನ ಬೇಡಿಕೆಗಳನು ರಾಮನಲಿ ಬೇಡುಅನ್ಯರನು ಅಲಕ್ಷಿಸದೆ ಭಜನೆಯನು ಮಾಡುಪುಣ್ಯವಂತರ ಸಂಗದೊಳು ಸದಾ ಕೂಡು 5ಶ್ರವಣ ಭಕ್ತಿಯು ಬೇಕು ಮೊದಲು ಚೆನ್ನಾಗಿಶ್ರವಣವಾಗುವವರೆಗೆ ನಾದತಾನಾಗಿಭವ ಸಮುದ್ರವನು ದಾಟುವಡೆ ಸುಖವಾಗಿಶ್ರವಣವೇ ಮುಖ್ಯ ಸಾಧನವು ನಿಜವಾಗಿ 6ನಾದ ಹುಟ್ಟಿದ ಮೇಲೆ ನಾಮ ಕೀರ್ತನವುನಾಮ ಕೀರ್ತನದಿ ಅಸ್ಪಷ್ಟ ದರುಶನವುನೇಮ ಹೆಚ್ಚಾದಂತೆ ಸ್ಮರಣೆ ಶಾಶ್ವತವುಸ್ಮರಣೆಯೊಳು ಸಂಪೂರ್ಣ ವಸ್ತುದರುಶನವು 7ಅನನ್ಯ ಭಕ್ತಿಯ ಬಲವ ಬಣ್ಣಿಸುವದೇನುಕಣ್ಮುಂದೆ ಸರ್ವದಾ ಹರಿಯು ಕುಣಿಯುವನುಕಣ್ಣು ಮುಚ್ಚಣಿಕೆಯಾಟವನು ಆಡುವನುಅಣುರೇಣು ಪರಿಪೂರ್ಣನಾಗಿ ತೋರುವನು 8ಕುಣಿಯುವನು ಕುಣಿಸುವನು ನಗುತ ನಲಿಸುವನುದಣಿಯುವನು ದಣಿಸುವನು ಉಣುತ ಉಣಿಸುವನುಜನರಿಗದ್ಭುತ ಚಮತ್ಕಾರ ತೋರುವನುಕ್ಷಣ ಬಿಡದೆ ಕೆಳಗಿಳಿಯದಂತೆ ಕಾಯುವನು 9ದೇವರನು ನಂಬಿ ಕೆಡಕಾದವರು ಇಲ್ಲಜದೇವರನು ಬಿಟ್ಟು ಸುಖಹೊಂದಿದವರಿಲ್ಲಾದೇವರನು ಒಲಿಸುವೆಡೆ ಭಾವ'ರಬೇಕುಭಾವ'ಲ್ಲದ ಢೋಂಗಿನರ್ಚನೆಯು ಸಾಕು 10ಚಿನ್ನ ಬೆಳ್ಳಿಗಳ ಮಂಚಪವು ಬೇಕಿಲ್ಲಾಸಣ್ಣಕ್ಕಿ ಅನ್ನ ಪಕ್ವಾನ್ನ ಬೇಕಿಲ್ಲಮಣ್ಣು ಕುಳ್ಳಿಯೊಳು ಒಣ ಅಂಬಲಿಯು ಸಾಕುಘನ್ನ ಮ'ಮನಿಗೆ ನಿರ್ಮಲ ಭಕುತಿ ಬೇಕು 11ಶ್ರವಣ ಭಕ್ತಿಯ ದಾಟದವನು 'ಸಾಧಕ' ನುಪಾದಸೇವನದಿಂದ 'ಸಾಧು' ಆಗುವನುದಾಸ್ಯ ಭಕ್ತಿಯ ಮುಂದೆ 'ಸಿದ್ಧ' ನಾಗುವನುಸಖ್ಯಭಕ್ತಿಯ ಮುಂದೆ 'ಗುರು'ವು ಆಗುವನು 12ಭಕ್ತಿ ಮಾರ್ಗವು ಬಹಳ ಸುಲಭ ಸಾಧನವುಭಕ್ತಿ ಸರ್ವರಿಗೆ 'ಷಯದೊಳು ಪರಿಚಿತವು'ಷಯದೊಳಗಿನ ಪ್ರೀತಿ ಎಳೆದೆಳೆದು ತೆಗೆದುಪರಮಾತ್ಮನೊಳು ಇಡಲು ಭಕ್ತಿಯಾಗುವದು 13ಉಂಡದ್ದು ಶ್ರೀ ಹರಿಗೆ ನೈವೇದ್ಯವೆನ್ನುಕಂಡದ್ದು ಶ್ರೀ ಹರಿಯ ಪ್ರತಿರೂಪವೆನ್ನುಮಲಗಿದ್ದು ಶ್ರೀ ಹರಿಗೆ ಸಾಷ್ಟಾಂಗವೆನ್ನುಸುಲಭ ಪೂಜೆಯ ಮರ್ಮವೆನು ತಿಳಿದು ನೀನು 14ಸಾಲವನು ಮಾಡಿ ಹೋಳಿಗೆ ಹೊಡಿಯಬೇಡಾಜೇಲಿಗಂಜುತ ದೇಶಕಾರ್ಯ ಬಿಡಬೇಡಾಆಲಸ್ಯದಲಿ ಕಾಲವನು ಕಳಿಯಬೇಡಾಕೆಲಸದಲಿ ಕೀಳು ಮೇಲೆಂದು ಅನಬೇಡಾ 15ಸ್ವಚ್ಛ'ರಬೇಕು ಮನಬುದ್ಧಿ ದೇಹದೊಳುಅಚ್ಚುಕಟ್ಟಿರಬೇಕು ಸರ್ವಕಾರ್ಯದೊಳುಎಚ್ಚರಿರಬೇಕು ಜನಪಾತ್ರೆ ರಾತ್ರಿಯೊಳುಬಿಚ್ಚು ಮನ'ರಬೇಕು ಸ್ವಜನ 'ುತ್ರರೊಳು 16ಬಡತನವು ಬಂದಾಗ ಧೈರ್ಯ ಬಿಡಬೇಡ'ಡಿದು ನೆಂಟರ ಮನೆಯ ನೀ ಕೂಡಬೇಡದುಡಿದು ತಿನ್ನಲು ಸ್ವಲ್ಪ ಸಹ ನಾಚಬೇಡಮಡದಿ ಹುಟ್ಟಿದ ಮನೆಯ ನೀ ಸೇರಬೇಡಾ 17ಗಾಜಕಾರಣದೊಳು ' ಮುಚ್ಚುಮನ' ಬೇಕುಧರ್ಮಕಾರಣದೊಳಗೆ 'ಸ್ವಚ್ಛಮನ' ಬೇಕುಅರ್ಥಕಾರಣದೊಳಗೆ ' ಮೆಚ್ಚುಮನ'' ಬೇಕುಕಚ್ಚೆಕೈಗಳು ಸದಾ ಸ್ವಚ್ಛ'ರಬೇಕು 18ಸಂಸಾರ ಮಾಡುವಡೆ ಧನವ ಸಂಗ್ರ'ಸುಸನ್ಯಾಸಿಯಾಗುವೆಡೆ ವೈರಾಗ್ಯ ಬೆಳೆಸುಸರ್ವಕರ್ಮಗಳಲ್ಲಿ ಶ್ರೀಹರಿಯ ಸ್ಮರಿಸುಸರ್ವದಾ ಸಂತ ಸಂಗದೊಳು ಸಂಚರಿಸು19ಸಂತ ಸಂಗದೊಳು ಸಂಚರಿಸುವುದು ಸ್ನಾನಾಸಂತ ವಚನಾಮ್ರತದ ಪಾನವೇ ಸ್ನಾನಾಸಂತರನು ಸಂತೋಷಪಡಿಸುವುದು ಸ್ನಾನಾಶಾಂತಮನದಿಂ ಹರಿಯ ಚಿಂತಿಪುದ ಸ್ನಾನಾ 20ಬಾಲ್ಯದಲಿ ಬ್ರಹ್ಮಚರ್ಯದಿ ಬಲವ ಬೆಳೆಸುತಾರುಣ್ಯದಲಿ ದುಡಿದು ಧನವ ನೀ ಗಳಿಸುವೃದ್ಧಾಪ್ಯದೊಳು ಸದಾ ಶ್ರೀಹರಿಯ ಸ್ಮರಿಸುಶ್ರೀಹರಿಯ ಸ್ಮರಣೆಯೊಳು ಆಯುಷ್ಯ ಸವೆಸು 21ಮೊದಲು ನಿನ್ನ ಪ್ರಯತ್ನ ತಪ್ಪದೆಲೆ ಮಾಡುಅದು ನೀಗದಿರೆ ಮುಂದೆ ದೈವವನು ನೋಡುಮದುವೆಯಾಗುವ ಮೊದಲು ತಿಳಿತಿಳಿದು ನೋಡುದುಡಿದು ಧನ ಗಳಿಸಿ ಸುಖದಿಂದ ಬಾಳುವೆ ಮಡು 22ಧನ'ಲ್ಲದವನ ಸಂಸಾರ ಸುಖವಲ್ಲಾಮನೆಯೊಳಗೆ ನಿತ್ಯ ಕಿರಿಕಿರಿಯು ತರವಲ್ಲಾದನದಂತೆ ಹೆಣ್ಣು ನುಡಿಯುವುದು ಸರಿಯಲ್ಲಾಎಣಿಕೆುಲ್ಲದೆ ಮಕ್ಕಳಾಗುವುದು ಸಲ್ಲಾ23ನೆಂಟರೊಳು ಬಹುದಿನ ಕೆಳಗಿರಬೇಡಾ'ಫ್ರಂಟಸೀಟಿ'ನ ಮೇಲೆ ನೀ ಕೂಡಬೇಡಾಒಂಟಿಯಲಿ ಹೆಂಡತಿಯ ಬಿಟ್ಟು ಇರಬೇಡಾಗಂಟು ಒಬ್ಬರ ಕೈಗೆ ಕೊಟ್ಟು ಆಳಬೇಡಾ 24ನಿನ್ನಂತೆ ತಿಳಿ ಪರರ ಸುಖ ದುಃಖಗಳನುಅನ್ಯಥಾ ನೋಡದಿರು ಅಣ್ಣ ತಮ್ಮರನುಸರ್ವಥಾ ಸ'ಸದಿರು ಅನ್ಯಾಯಗಳನುತಿಳಿಯದೇ ಹಳಿಯದಿರು ಭಿನ್ನ ಮತಗಳನು 25ಅತಿ ಮತುಗಳು ಬೇಡ ಅತಿ ಮೌನ ಬೇಡಾಅತಿ ತಿನಸು ಬೇಡ ಅತಿ ಉಪವಾಸ ಬೇಡಾಅತಿ 'ಹಾರವು ಬೇಡ ಅತಿ 'ನಯ ಬೇಡಾಅತಿ ಉದಾರತೆ ಬೇಡ ಜೀನತನ ಬೇಡಾ 26ಭೂ'ುಂಗೆ ಭಾರವಾಗುತ ತಿರುಗಬೇಡಾಕೂಳಿಂಗೆ ಕಾಳಾಗಿ ನೀ ಕೂಡಬೇಡಸಾಲ ಸಿಗುವಾಗ ಸಂತೋಷ ಪಡಬೇಡಾಸಾಲವೇ ಶೂಲವೆಂಬುದು ಮರೆಯಬೇಡಾ 27ಹನಿಗೆ ಹನಿ ಕೂಡಿದರೆ ಹಳ್ಳದಾಗುವುದುತೆನಿಗೆ ತೆನಿ ಕೂಡಿದರೆ ರಾಶಿಯಾಗುವುದುಕ್ಷಣಬಿಡದೆ ಕಂಡಲ್ಲಿ 'ದ್ಯೆಯನು ಗಳಿಸುಕಣಬಿಡದೆ ಧನ ಧಾನ್ಯಗಳನು ಸಂಗ್ರ'ಸು 28ಮಾತು ಕೃತಿಗಳಿಗೆ ಬಲು ಮೇಳ'ರಬೇಕುನೀತಿಯೊಳು ತನ್ನ ಮನಸಾಕ್ಷಿ ಇರಬೇಕುಮಾತು ಬಲು ಸ'ುದ್ದು ಸತ್ಯ'ರಬೇಕುಸತ್ಯ'ಲ್ಲದ ಸುಳ್ಳು ಸ' ಮಾತು ಸಾಕು 29ಐಕ್ಯ'ದ್ದರೆ ಸೌಖ್ಯ ಭೇದದೊಳು ಬೇದಾಐಕ್ಯ'ದ್ದರೆ ಬಲವು ಕ್ಷಯಬೇನೆ ಭೇದಾಐಕ್ಯ'ದ್ದರೆ 'ಗ್ಗು ಭೇದದೊಳು ಕುಗ್ಗುಐಕ್ಯದಿಂದ ಸ್ವಾತಂತ್ರ್ಯ ರಥವನ್ನು ಜಗ್ಗು 30ತನ್ನ ಅಭಿಮಾನ ತನ್ನವರ ಅಭಿಮಾನತನ್ನ ಕುಲಗೋತ್ರ ಜಾತಿಯ ಸ್ವಾಭಿಮಾನತನ್ನ ಭಾಷಾರಾಷ್ಟ್ರ ಧರ್ಮಾಭಿಮಾನಮಾನವನಿಗಿರಬೇಕು ಇಲ್ಲದವ 'ಶ್ವಾನಾ' 31ತನ್ನತನ ಬಿಡಬೇಕು ತನ್ನವರಿಗಾಗಿತನ್ನವರ ಕುಲಗೋತ್ರ ಜಾತಿಗಳಿಗಾಗಿ ಕುಲಗೋತ್ರ ಜಾತಿಗಳ ತಾಯ್ನಾಡಿಗಾಗಿತಾಯ್ನಾಡು ನುಡಿಧರ್ಮ ಪರಮಾತ್ಮಗಾಗಿ 32ತನ್ನ ಉದ್ಯೋಗ ಮನಮುಟ್ಟಿ ಮಾಡುವರುಉಣಲು ಅಧಿಕಾರ ಆಮೇಲೆ ದೊರಕುವದುಉಣುವಾಗ ಶ್ರೀಹರಿಯ ಸ್ಮರಣೆ ಮಾಡುವದುಮನೆಯೊಳಗೆ ಶಿಸ್ತು ಶಾಂತಿಗಳ ಕಾಯುವದು33ಹರಿಕಥಾ ಕೀರ್ತನ ಪುರಾಣ ಪಠಿಸುವದುಸರಸ ವಾಙ್ಮಯದ ಅಭ್ಯಾಸ ಮಡುವದುತರು ಬರುವ ತನ್ನ ವ್ಯವಹಾರ ನೋಡುವದುಪರ ಪರಿಸ್ಥಿತಿಗಳನು ತೂಗಿ ನೋಡುವದು 34'ಶ್ರಾಂತಿ ಅಭ್ಯಾಸಿ ಸರಸ ಸಲ್ಲಾಪನಿಶ್ಚಿಂತೆುಂದ ನಿದ್ರೆಯು ಸೌಖ್ಯರೂಪನಿತ್ಯ ಮಾನವನ ದಿನಚರಿಯ ಈ ರೂಫನಿಶ್ರೇಯಸಕೆ ಸುಲಭ ಸಾಧನವು ಭೂಪಾ 35ಸ್ವಚ್ಛ ಹವೆ ನೀರು ವ್ಯಾಯಾಮ 'ಶ್ರಾಂತಿಸಾತ್ವಿಕ ಸಸತ್ವಾನ್ನ ಪಾನಗಳ ಪ್ರೀತಿಉಚ್ಚತಮ ಧ್ಯೇಯ ಆಚರಣೆಗಳ ರೀತಿಮೋಕ್ಷಕ್ಕೆ ಸಾಧನವು ಇಹದಿ ಸಂತೃಪ್ತಿ 36ದೇಹ ಬಿದ್ದರೆ 'ಂದೆ ಕೀರ್ತಿುರಬೇಕುಕೀರ್ತಿ ಬರುವಂಥ ಕಾರ್ಯವ ಮಾಡಬೇಕುಕಾರ್ಯದೊಳು ಕುಶಲತನ ದಕ್ಷತೆಯು ಇರಬೇಕುಫಲವು ಪರಮಾತ್ಮನಾಧೀನವೆನಬೇಕು 37ಸರ್ವದಾ ಸುಖವೆ ಇದ್ದವರು ಯಾರುಂಟುಅವರವರ ಕರ್ಮ ಫಲವೇ ಅವರ ಗಂಟುಬೆಳತು ಕತ್ತಲೆಯಂತೆ ಚಕ್ರ ಆರುಗುವದುಸುಖ ದುಃಖ ಬರುವಾಗ ಬಂದು ಹೋಗುವುದು 38ಅನುಭವದಿ ಹೆಚ್ಚು ಸಾಧನ ಬೆಳೆಯಬೇಕುಅನುಭವದ ಮಾತುಗಳು ಬಚ್ಚಿಡಲು ಬೇಕುಅನುಭವವು ಬಂತೆಂದು ಗರ್ವ ಪಡಬೇಡಾಗರ್ವದಿಂದಲಿ ಮತ್ತೆ ಕೆಳಗಿಳಿಯ ಬೇಡಾ 39ಅಡಗಿ ಅಂಬಲಿ ಅರ' ಅಂಚಡಿಯ ಕಡೆಗೆಹುಡುಗರ ಬಲಾರೋಗ್ಯ ನಡೆನುಡಿಯ ಕಡೆಗೆಕಡು ಚಾಣ್ಮೆುಂದ ನೋಡುವದು ಸತಿ ಪತಿ ಕೆಲಸಾ 40ಪತಿುಂದಲೇ ಸತಿಯು ಸತಿುಂದ ಪತಿಯುಸತಿಪತಿಯ ಪ್ರೇಮದಿಂದಾತ್ಮದುನ್ನತಿಯುಪತಿಯ ಕೋಪದಿ ಕಲ್ಲು ಆಗುವಳು ಸತಿಯುಸತಿಯ ಶಾಪದಿ ಕತ್ತೆಯಾಗುವನು ಪತಿಯು 41ಸಾ'ಗಂಜಲು ಬೇಡ ಸಾ'ಗಳಬೇಡಾಸಾವು ಅಂದರೆ ಭಯಂಕರ ತಿಳಿಯಬೇಡಾದೇಹಕ್ಕೆ ಬಾಲ್ಯ ಯೌವನ ಮುಪ್ಪಿನಂತೆದೇಹಾಂತರ ಪ್ರಾಪ್ತಿಯೇ ಮರಣಗೀತೆ 42'ದ್ಯಾರ್ಥಿ ಬಡವನಿದ್ದರೆ ಭಿಕ್ಷೆನೀಡುಅಶನಾರ್ಥಿ ಟೊಣಪನಿದ್ದರೆ ದೂರ ಮಾಡುಹಸಿವೆ ಚೆನ್ನಾಗಿ ಇದ್ದರೆ ಊಟ ಮಾಡುಹಸಿಯು ಸಾಕಷ್ಟು ಇದ್ದರೆ ಬಿತ್ತಿನೋಡು43ಶುದ್ಧ ಆಚರೆಣೆುದ್ದರೆ ಮಾತನಾಡುಬುದ್ಧಿ ಬಲು ಚುರುಕು ಇದ್ದರೆ ವಾದ ಮಡುದುಡ್ಡು ರಗಡಿದ್ದರೆ ಘಡಾಮೋಡ ಮಾಡುಜಡ್ಡು ಇದ್ದರೆ ಪಥ್ಯದುಪವಾಸ ಮಾಡು 44ಹಾಳುಹರಟೆಯ ಬಿಟ್ಟು ಶ್ರೀ ಹರಿಯ ಸ್ಮರಿಸುಕಾಲುವನು ನೋಡಿ ಸತ್ಕರ್ಮ ಆಚರಿಸುನಾಳೆ ಮಾಡುವೆನೆಂಬ ಮಾತು ದೂರಿರಿಸುನಾಳೆ ಮಾಡುವ ಧರ್ಮ ಇಂದು ನೀ ಮುಗಿಸು 45ಮನ ಮುಟ್ಟಿ ಸ್ಮರಣೆ ಸಂತತ ಮಾಡಬೇಕುಮನಸು ಓಡಲು ಮತ್ತೆ ಜಗ್ಗಿ ತರಬೇಕುಅನುಭವವು ಬಂದಂತೆ ಮನಸು ಕರಗುವದುಮನಸು ಕರಗಿದರೆ ವಾಸನೆಯು ಅಳಿಯುವದು 46ಎಲ್ಲ ಕಡೆಯಲಿ ಇರುವನೊಬ್ಬನೇ ದೇವಎಲ್ಲ ನಾಮಗಳಿಂದಲೂ ಕರೆಸಿಕೊಳುವಾಯಾವ ಬೇಕಾದ ಹೆಸರಿನ ದೇವರನ್ನುಭಕ್ತಿುಂ ಭಜಿಸಿದರೆ ಬಂದು ಪೊರೆಯುವನು47ಧನಕನಕದಾಶೆಯನು ತೊರೆದವನು ಸಂತವನಿತೆಯರ ಬಲೆಯೊಳಗೆ ಸಿಗದವನು ಸಂತಮನದಿ ಮಹಾದೇವನನು ಕಂಡವನು ಸಂತಜನರೊಳು ಜನಾರ್ಧನನ ನೋಡುವನು ಸಂತ 48ಘೋರ ಯುದ್ಧದಿ ನರನ ರಥವ ನಡೆಸಿಹನುಸೀರೆಯಾಗುತ ಸತಿಯ ಮಾನ ಉಳಿಸಿದನುನೀರಿನವನಾಗಿ ಎಂಜಲವ ಬಳಿದಿಹನುಪರಮ ಪುರುಷನ ಕರುಣೆಗೆಣಿಯು ಉಂಟೇನು 49ಹೃದಯ ದೊಳಗಿದ್ದ ಶ್ರೀಹರಿಯ ಮರೇತುಕಡುದ್ಯೆನ್ಯ ಬಿಡಬೇಡ 'ಷಯದೊಳು ಬೆರೆತುಕಾಮಧೇನು'ನ ಕೆಚ್ಚಲೊಳಿದ್ದ ನೀನುಅಮೃತವನು ಬಿಟ್ಟು ರತ್ನವನು ಕುಡಿವೆಯೇನು 50ಸರ್ವ ದುಃಖಗಳು ನಿರ್ಮೂಲವಾಗುವದುಸಂಸಾರ ಪರಮಾರ್ಥ ಕೂಡಿ ನಡೆಯುವವುಪ್ರಭು ರಾಮಚಂದ್ರನ ಪ್ರಸಾದ ಮ'ಮೆಯನುಪಠಿಸಿ ಆಚರಿಸಿದರೆ ಸುಖದಿ ಬಾಳುವನು 51ಜಯಜಯತು ಆರ್ಯ ಭೂಮತೆ 'ಖ್ಯಾತೆಜಯತು ಭಾರತಮಾತೆ ಸರ್ವಜನ ತ್ರಾತೆಜಯಜಯತು ಜಯ'ಂದ ಜನನಿ ಕಡು ಕರುಣಿಜಯ ಜಯತು ಸರ್ವ ಸಂಸ್ಕøತಿಯ ಮುಕುಟಮಣಿ 52ಅತಿಥಿ ಬಂದರೆ ಮನ ದೊಡ್ಡದಿರಲಿಒಣಹೆಮ್ಮೆ ಬೇಡ ಆದರದ ಮಾತಿರಲಿಮಾತು ಕೃತಿ ನಿಜ ಪ್ರೇಮ ತುಂಬಿರಲಿಊಟ ಉಪಚಾರದಿಂದ ಸಂತೋಷಗೊಳಲಿ 53ಗುಡಿಯೇಕೆ ಬೇಕು ಮನದೊಳಗೆ ಹರಿಯುಂಟುಅದರ ಕದ ತೆಗೆಯ ಪ್ರತಿಬಂಧವೇನುಂಟುಗುಡಿಯೊಳಗೆ ಹೊಗಿಸಬೇಕೆಂಬುವುದು ಛಲವುಛಲ 'ದ್ದರೇನದಕೆ ಆಧ್ಯಾತ್ಮ ಬೆಲೆಯು54ಮನ ಪ'ತ್ರ'ದ್ದರೆ ದೇವ ಒಲಿವಾಮನಸು ಅಪ'ತ್ರ'ದ್ದರೆ ದೇವ ಕುದಿವಾಮನ ಸುಪ್ರಸನ್ನ'ದ್ದರೆ ದೇವ ಒಲಿವಾಮನಸು ಧುಸುಮುಸು ಇದ್ದರೆ ದೇವ ಕುದಿವಾ 55ಮನಸು ನಿರ್ಭಯ'ದ್ದರಾ ದೇವ ಒಲಿವಾಮನಸು ನಿರ್ಮಲ'ದ್ದರಾ ದೇವ ಒಲಿವಾಮನಸು ನಿರಹಂಕಾರವಾದಾಗ ಬರುವಾಮನಸು ನಿಷ್ಕಪಟವಾದರೆ ಬಂದು ಪೊರೆವಾ 56ಅನ್ಯರಿಗೆ ನಿನ್ನ ಭಾರವ ಹಾಕಬೇಢನಿನ್ನ ಯೋಗ್ಯತೆ'ುೀರಿ ಭಾರ ಹೊರಬೇಡನಿನ್ನ ಮನೆತನದ ಜಗಳ ಬೈಲಿಗಿಡಬೇಡಹೆಣ್ಣು ಮಕ್ಕಳ ಮೇಲೆ ಕ್ಕೆ-ಎತ್ತಬೇಡ 57ನಿನ್ನ 'ರಿಮೆಯನು ನೀ ಹೇಳಬೇಡಅನ್ಯರನು ಕೀಳೆಣಿಸಿ ಮಾತಾಡಬೇಡಕಣ್ಮುಚ್ಚಿ ಇನ್ನೊಬ್ಬರನುಕರಣೆ ಬೇಡನಿನ್ನ ಸಂಸ್ಕøತಿಯ ವೈಶಿಷ್ಟ್ಯ ಬಿಡಬೇಡ 58ಸು'ಚಾರದಿಂದ ಧ್ಯೇಯವ ಗೊತ್ತುಪಡಿಸುಗೊತ್ತುಪಡಿಸಿದ ಧ್ಯೇಯವನ್ನು ನಿತ್ಯಸ್ಮರಿಸುಮುಟ್ಟಲಾ ಧ್ಯೇಯವನು ಶಕ್ತಿ ಸಂಗ್ರ'ಸುಶಕ್ತಿಯನು ಚಾತುರ್ಯದಿಂದ ನೀ ಬಳಿಸು 59ಸಮಯ ಪ್ರತಿಕೂಲ'ರೆ ವೈರಿಗಳ ನ'ುಸುನ'ುಸಿ ಒಳಹೊಕ್ಕವರ ಬಲವ ಹದಗೆಡಿಸುಶ್ರಮಪಟ್ಟು ಅ'ುತಬಲ ಗುಪಿತದಿಂ ಬೆಳಿಸುಸಮಯ ಸಾಧಿಸಿ ದುಷ್ಟಜನರನು ಸಂಹರಿಸು60ದೇಹದೊಳು ನೀನುಂಟು ದೇಹ ನೀನಲ್ಲನಾ ಎಂಬ ಜ್ಞಾನ ನಿನಗುಂಟು ಆದಕಿಲ್ಲನೀನು ಈ ದೇಹದಿಂದ ಹೊರಬೀಳಲಾಗಹೆಣವೆಂದು ಕರೆಯುವರು ದೇಹವನು ಬೇಗ 61ಹುಟ್ಟುವವ ನೀನಲ್ಲ ಹುಟ್ಟುವದು ದೇಹಬೆಳೆಯುವವ ನೀನಲ್ಲ ಬೆಳೆಯುವದು ದೇಹಸಾಯುವವ ನೀನಲ್ಲ ಸಾಯುವದು ದೇಹರೂಢಿಯೊಳು ನಿನಗಿದನು ಹಚ್ಚುವದು ಮೋಹ62ಖೋಡಿ ಮನವನು 'ಡಿದು ಸಾಧು ಮಡುವದುಸಾಧು ಮಾಡುತ ನಾಮ - ಘೋಷ ಹಚ್ಚುವದುಓಡಿ ಹೋಗಲು ಮತ್ತೆ ಎಳೆದೆಳೆದು ತಂದುಬೋಧಿಸುತ ನಾಮ ಜಪದೊಳು ಸೇರಿಸೆಂದು 63ಒಮ್ಮೆ ಹರಿನಾಮದೊಳು ಮನಸು ಸೇರಿದರೆಅದಕೆ ಆಗುವ ಸುಖವು ಆ ರುಚಿಯು ಬೇರೆಆ ರುಚಿಯ ಆ ಸುಖವು ಹತ್ತಿದರೆ ಮನಕೆತಿರುಗಿ ಎಂದಿಗೂ ಅದು ಹೋಗದದು 'ಷಯಸುಖಕೆ64ಚಿತ್ತ ಸ್ಥಿರ'ಲ್ಲದಿರೆ ಬುದ್ಧಿ ಸ್ಥಿರ'ಲ್ಲಬುದ್ಧಿ ಸ್ಥಿರ'ಲ್ಲದಿರೆ ಭಾವನೆಯು ಇಲ್ಲಭಾವನೆಯು ಇಲ್ಲದಿದ್ದರೆ ಶಾಂತಿುಲ್ಲ ಶಾಂತಿಯೇ ಇಲ್ಲದವ ಸುಖವೇನು ಬಲ್ಲ 65ಅನುಕೂಲ ಮತ ಮಾತ್ರ ನೀ ಎಣಿಸಬೇಡಪ್ರತಿಕೂಲ ಮತ ಉಪೇಕ್ಷೆಯ ಮಾಡಬೇಡಅನುಕೂಲ ಪ್ರತಿಕೂಲಗಳನು ತಿಳಿ ತಿಳಿದುಏನಾದರೊಂದು ಸಾಹಸ ಕಾರ್ಯ ಮಾಡು 66ಉದ್ಯೋಗದೊಳು ಸದಾ ಆನಂದ ಉಂಟುಉದ್ಯೋಗದೊಳಗೆ ಲಕ್ಷ್ಮಿಯ ವಾಸವುಂಟುಉದ್ಯೋಗವನು ಮಾಡಿ ದೇವರನು ಬೇಡುಉದ್ಯೋಗ ಬಿಟ್ಟು ಕುಳಿತರೆ ನಿನಗೆ ಕೇಡು 67ದೀರ್ಘ ಯೋಚನೆಯ ಮಾಡುತ ನೀ ಕೂಡಬೇಡಯೋಗ್ಯ ಮುಂಬೆಳಕು ಇಲ್ಲದೆ ಧುಮುಕಬೇಡ'ಗ್ಗಿ ಮೈಮರೆಯದಿರು ದೈವ ತೆರೆದಾಗಕುಗ್ಗಿ ಎದೆ ಒಡೆಯದಿರು 'ಧಿ ಕಾಡುವಾಗ 68ದೈವವನಕೂಲ'ದ್ದಾಗ ಎಚ್ಚರಿಕೆಗರ್ವ ಸೇರುವದು ತಿಳಿಯದಲೆ ಎಚ್ಚರಿಕೆಗರ್ವದಿ ಸ್ಮøತಿಗೆ ಸಮ್ಮೋಹವೆಚ್ಚರಿಕೆಸಮ್ಮೋಹದಿಂದ ಸರ್ವನಾಶ ಎಚ್ಚರಿಕೆ 69ದೈವ ಯತ್ನಗಳ ಗತಿ ಗಹನವಾಗಿಹುದುಒಬ್ಬೊಬ್ಬರನುಭವವು ಒಂದೊಂದು ಇಹುದುವಾದದಿಂ ಬಗೆಹರಿಯದಂಥ 'ಷಯ'ದುಇದರ ಹದ ತಿಳಿದು ಯತ್ನವಂ ಮಾಡುವದು 70ಜೋಲು ಮೋರೆಯ ಹಾಕಿ ನೀ ಕೂಡಬೇಡಕಾಲು ಅಪ್ಪಳಿಸಿ ಕೆಲಸಕೆ ಹತ್ತಬೇಡಸ್ಟೈಲು ಉಡುಗೆಯ ಉಟ್ಟುಕೊಂಡೋಡಬೇಡಮೈಲಿಗೆಯ ಮನದಿಂದ ಜಪ-ಮಾಡಬೇಡ 71ಕಾರ್ಯ ಮಾಡುವ ಜನಕೆ ಮರ್ಯಾದೆ ಮಡುಬಾಯಬಡುಕ ಜನರ ಕೃತಿಯನು ತಿಳಿದು ನೋಡುಧೈರ್ಯದಿಂ ದುರ್ಜನರ ಕೂಡ ಹೋರಾಡುಆರ್ಯ ಸಂಸ್ಕøತಿಯ ಸಂರಕ್ಷಣೆಯ ಮಾತು 72ಗುಣ ಕರ್ಮಗಳ ನೋಡಿ ಮಾನವನು ಮಾಡುಒಣ ಜನ್ಮ ಜಾತಿ ತುಸು ದುರ್ಲಕ್ಷ ಮಾಡುಗುಣ ಕರ್ಮದಿಂದ ಅತಿ ನೀಚನಾದವನುಜನುಮ ಮಾತ್ರದಿ ಹೇಗೆ ಶ್ರೇಷ್ಠನಾಗುವನು73ತಪ್ಪು ಇಲ್ಲದೆ ಕ್ಷಮೆಯ ಬೇಡುವವ ಮೂರ್ಖತಪ್ಪಿದರು ಒಪ್ಪಿದವನು ಕಡುಮೂರ್ಖತಪ್ಪು ಆಗುವದು ಮಾನವನ ಸಹಜಗುಣತಪ್ಪು ಒಪ್ಪುತ ತಿದ್ದಿಕೊಳ್ಳುವದು ಸುಗುಣ 74ನಿನ್ನ ಬಂಧುಗಳೆ ನಿನಗಾಗುವರು ಕೊನರೆಗೆಅನ್ಯರಿಗೆ ಆ ಕರುಳು ಬರುವದು ಹೇಗೆನಿನ್ನ ಬಂಧುಗಳೆಲ್ಲ ಮೂರ್ಖರೆನಬೇಡಅನ್ಯರಿಂದ ನೀ ಮೂರ್ಖನೆನಿಸಿಕೊಳಬೇಡ 75ಜನರ ಮನೆಗಳು ಬಹಳ ದಿವಸ ಇರಬೇಡಇರುವದೇ ಆದರವರಿಗೆ ಭಾರ ಬೇಡಅರಿತವರ ಕೆಲಸಗಳ ಮನೆಯಂತೆಮಡುಗೃಹದ ರೀತಿರಿವಾಜು ಕೆಡದಂತೆ ನೋಡು 76ದುಡ್ಡು ಇದ್ದಾಗ ಎಲ್ಲರ ಪ್ರೀತಿಯುಂಟುದುಡ್ಡು ಕಳಕೊಂಡು ಹೋದರೆ ಮೋರೆಗಂಟುದುಡ್ಡಿನಿಂದಲೆ ಜನರ ಬೆಲೆ ಕಟ್ಟಬೇಡದೊಡ್ಡ ಗುಣಗಳನರಿತು ನ'ುಸದಿರಬೇಡ 77ಧನದ 'ಷಯದಿ ಖಂಡ ತುಂಡ ಇರಬೇಕುಮನಬಿಚ್ಚಿ ಮೊದಲಿಗೆ ಮಾತಾಡಬೇಕುಒಣ ಮಬ್ಬುತನ ಮನದಮಂಡಿಗೆಯು ಬೇಡಕೊನೆಗೆ ಗುಣಗುಟ್ಟುತಲಿ ಹಳಹಳಿಸಬೇಡ 78ಯಂತ್ರಮಯ ಜೀವನದ ಯುಗವು ನಡೆದಿಹುದುಸ್ವಾತಂತ್ರ್ಯವೆಲ್ಲಿ ಬಡವರಿಗೆ ಉಳಿದಿಹುದುದ್ರವ್ಯಮಯವಾದ ವ್ಯವಹರ ಸಾಗಿಹುದುದೇವ ಧರ್ಮಕೆ ಅರ್ಧಚಂದ್ರ ಬಂದಿಹುದು 79ತಾಯ್ತನದ ಸುಖಕೆ ಸರಿಯಾದ ಸುಖ'ಲ್ಲತಾಯ್ತನದ ಕರುಳಿಂಗೆ ಬೆಲೆಯಂಬುದಿಲ್ಲತಾುಗಿಂದಧಿಕ ದೈವತವು ಬೇರಿಲ್ಲತಾಯ್ - ಸೇವೆಗಿಂದಧಿಕ ಪುಣ್ಯಾವೆ ಇಲ್ಲ 80ಚನ್ನಾಗಿ ಸಂಸಾರ ಮಾಡಬಲ್ಲವನುಸುಲಭದಿಂ ಪರಮಾರ್ಥವನು ಸಾಧಿಸುವನುಸಂಸಾರದೊಳಗಿದ್ದು ಸನ್ಯಾಸಿಯೆನಿಸುಸನ್ಯಾಸಿಯಾಗಿ ಸಂಸಾರದೊಳು ಈಸು81ಮನೆಯಲ್ಲಿಯೇ ಸ್ವರ್ಗ ಮನೆಯಲ್ಲಿಯೇ ನರಕಜಾಣರಿಗೆ ತಿಳಿಯುವದು ನೋಡಿದರೆ ಗಮಕಜಾಣ ಪ್ರೇಮಳ ಪತಿಯಮನೆ ಸತಿಗೆ ಸ್ವರ್ಗಕೋಣ ಕರ್ದಮ ಕಟುಕ ಪತಿುರಲು ನರಕ 82ಪತಿಯ ಮನ ಒಲಿಸಿ ಕೋತಿಯ ತೆರದಿ ಕುಣಿಸಿಅತ್ತೆ ಮಾವರು ಬಂಧುಬಳಗವನು ಹೊರನುಗಿಸಿಸ್ವೇಚ್ಛೆುಂ ಎದೆಮೆಟ್ಟಿ ಬೇರಿರುವ ಸೊಸೆಸೊಸೆಯಲ್ಲ ರಕ್ಕಸಿಯು ಕಿ'ಹೊಕ್ಕ ತೊಣಸಿ83ಸರ್ವದಾ ಸತ್ವಗುಣಿ ಶಾಂತ ನಿರುತಿಹನುರಾಜಸನ ಶಾಂತಿುಂ ಧಡಪಡಿಸುತಿಹನುಕಿರಿಕಿರಿಯು ತಾಮಸಿಗೆ ಬಿಟ್ಟುರುವದಿಲ್ಲಾತ್ರಿಗುಣಗಳ ದಾಟದಿದ್ದರೆ ಮೋಕ್ಷ'ಲ್ಲಾ 84ಅನ್ನದೊಳು ಮುಖ್ಯ ಸಾತ್ವಿಕ ಗುಣವು ಬೇಕುಸಂಪಾದನೆಯ ಮಾರ್ಗ ಸರಳ'ರಬೇಕುಸಂಸರ್ಗ ಸಂಸ್ಕಾರ ಸುಷ್ಟ'ರಬೇಕುಸಾತ್ವಿಕಾನಂದ ಮನದಿಂದ ಉಣಬೇಕು 85ಮೂಲ ಮನ'ಹುದು ಮೂರರೊಳೊಂದು ಪಾಲುಸನ್ನಿವೇಶಗಳಿಂದ ಮತ್ತೊಂದು ಪಾಲುತಿನ್ನುವಾ ಅನ್ನದಿಂದ ಉಳಿದೊಂದು ಪಾಲುಮೂರು ಕೂಡಿದ ಮನವೆ ನಿನಗೆ ಹರಿಗೋಲು86ಪ್ರಾರಬ್ಧವನುಭ'ಸಿ ತೀರಿಸಲು ಬೇಕುಅಪರೋಕ್ಷದಿಂದ ಸಂಚಿತ ಕಳಿಯಬೇಕುಸರ್ವದಾ ನಿರಪೇಕ್ಷ ಸತ್ಕರ್ಮ ಬೇಕುನಿರಭಿಮಾನದಿ ಕರ್ಮದ ಬೀಜ ಸುಡಬೇಕು87ದಯೆಯು ಧರ್ಮದಮೂಲ ದಯವಂತನಾಗುಭಯವು ದುಃಖದಮೂಲ ನಿರ್ಭಯನು ಆಗುಲೋಭ ಪಾಪದ ಮೂಲ ನಿರ್ಲೋಭಿಯಾಗುತ್ಯಾಗ ಪುಣ್ಯದ ಮೂಲ ತ್ಯಾಗಿ ನೀನಾಗು 88ನಿನ್ನ ಉದ್ಧಾರವನು ನೀ ಮೊದಲ ಮಾಡುಮನೆತನದ ಉನ್ನತಿಯಕಡೆಗೆ ನೀ ನೋಡುನಿನ್ನ ನೆರೆಹೊರೆ ಜನರ ಕಲ್ಯಾಣಮಾಡುಆಮೇಲೆ 'ಶ್ವದದ್ಧಾರ ಮಾತಾಡು 89ಹಳೆಯದಿದ್ದರೆ ಎಲ್ಲ ಒಳಿತು ಎನಬೇಡಹೊಸದೆಂಬ ಮಾತ್ರದಿಂದಲೆ ಹಳಿಯಬೇಡಒಳಿತು ಕೆಡಕುಗಳು ಎಲ್ಲದರಲ್ಲಿ ಇಹವುತಿಳಿದು ಉಪಯೋಗಿಸಿದರದು ಜಾಣತನವು 90ಕಾಲಮ'ಮೆಯ ಕಷ್ಟ ಬಂದಿತೆನಬೇಡಕಾಲಕ್ಕೆ ಹೆಚ್ಚಿನ ಮಹತ್ವ ಕೊಡಬೇಡಕಾಲ ನಿರ್ಮಾಣ 'ರಿಯರ ಕೈಯ್ಯೊಳಿಹುದುಎಂಥ 'ರಿಯರು ಅಂಥ ಕಾಲ ಬರುತಿಹುದು 91'ರಿಯರಾಚರಣಿಯಂ ಮನೆತನದ ಬೆಳಕು'ರಿಯರಾಚರಣೆುಂ ಮನೆತನಕೆ ಹುಳುಕು'ರಿಯರೇ ಕಾರಣರು ಮನೆಯ ಸುಸ್ಥಿತಿಗೆ'ರಿಯರೇ ಕಾರಣರು ಮನೆಯ ದುಸ್ಥಿತಿಗೆ 92ದೇಹವೇ ರಥವು ಸಾರಥಿಯು ಪರಮಾತ್ಮಜೀವ ಅರ್ಜುನ ಧರ್ಮ ಸಮ್ಮೂಡ ಆತ್ಮಸರ್ವ ಭಾವದಿ ಶರಣುಹೊಗು ಸಾರಥಿಗೆಸಾರಧಿಯು ಮುಟ್ಟಿಸುವ ನಿನ್ನ ಸದ್ಗತಿಗೆ 93ಜ್ಞಾನಪೂರ್ವಕ ''ತ ಕರ್ಮಗಳ ಮಾಡುಚಿತ್ತಶುದ್ಧಿಗೆ ಕರ್ಮಸಾಧನವು ನೋಡುಉದ್ದೇಶ ಪರಿಣಾಮಗಳ ತೂಕ ಮಾಡುಮೂಢತನ ರೂಢಿಗಳನರಿತು ಬಿಟ್ಟುಬಿಡು 94ಬಾಲಭಾವದಿ ದೇವರೊಳು ಹಟವಮಾಡುಬಾಲಭಾವದಿ ದೇವರೊಳು ಮಮತೆಮಾಡುಬಾಲಭಾವದಿ ದೇವರಿಗೆ ಬೇಡಿಕಾಡುಬಾಲಭಾವದಿ ನಿನ್ನ ಸರ್ವಸ್ವ ನೀಡು 95ಮಾತೃಭಾವದಿ ಅವನ ತೊಡೆಯ ಮೇಲಾಡುಮಾತೃಭಾವದಿ ನೀನು ವಾತ್ಸಲ್ಯ ಮಾಡುಮತೃಭಾವದಿ ತೂಗಿ ತೊಟ್ಟಿ ಮುದ್ದಾಡುಮಾತೃಭಾವದಿ ಬಿದ್ದು ಕಿರಿಕಿರಿಯಮಾಡು 96ಸಖ್ಯಭಾವದಿ ಹಾಲು ಮೊಸರೆರೆಯ ಬೇಕುಸಖ್ಯಭಾವದಿ ಬೆಣ್ಣೆ ಬಾಯ್ತುಂಬ ಬೇಕುಸಖ್ಯಭಾವದಿ ಕೊಳಲಿನೊಳು ಕುಣಿಯಬೇಕುಸಖನೆಂದು ಗೋಪಿಯಂದದಿ ಕುಣಿಸಬೇಕು 97ನಿನ್ನೊಳಗೆ ಆತನನು ನೀ ನೋಡಬೇಕುಅವನೊಳಗೆ ಸರ್ವವನು ನೀ ಕಾಣಬೇಕುತನ್ನತನ ಮರೆತು ಅವನೊಳು ಬೆರೆಯಬೇಕುಅವನ ಸೂತ್ರದ ಬೊಂಬೆ ನೀನಾಗಬೇಕು 98'ುೀನನಾದರೆ ಅವನ ಕಣ್ಣು ನೀನಾಗು ಕೂರ್ಮನಾದಾಗವನ ಬೆನ್ನು ನೀನಾಗುವರಾಹರೂಪದ ಹರಿಯ ಕೋರೆ ನೀನಾಗುನರಹರಿಗೆ ನೀ ಹದನವಾದ ನಖವಾಗು 100ವಟುವಾಮನಗೆ ಪಾದರಕ್ಷೆ ನೀನಾಗುದುಷ್ಟ ಸಂಹಾರಕನ ಪರಶು ನೀನಾಗುಅಟ'ವಾಸಗೆ ಬಿಲ್ಲುಬಾಣ ನೀನಾಗುದಿಟ್ಟ ಗೊಲ್ಲನ ಕರೆದ ಕೊಳಲು ನೀ ನಾಗು 101ಬುದ್ಧನಾದರೆ ಬುದ್ಧಿವಂತ ನೀನಾಗುಕಲ್ಕಿಯಾದರೆ ಚಲುವ ಕುದುರೆ ನೀನಾಗುಎಲ್ಲಿದ್ದರೂ ಅವನ ನೆರಳು ನೀನಾಗುಪ್ರಹ್ಲಾದ ದ್ರುವ ಅಂಬರೀಷ ನೀನಾಗು 102ಧನದೊಳಗೆ ಧನ ತವೋಧನನು ನೀನಾಗುಭಾಗ್ಯದೊಳು ವೈರಾಗ್ಯ ಭಾಗ್ಯವಂತನಾಗುಇಂದ್ರಿಯಂಗಳ ಜಯದಿ ನೀ ಶೂರನಾಗುಪಂಡಿತನು ತತ್ವದಾಚರಣೆಯೊಳು ಆಗು103ಸ್ವಾತಂತ್ರವೇ ಸ್ವರ್ಗ ಪರತಂತ್ರ ನರಕಮಾತೃಭೂ'ುಯ ಸೇವೆ ಮಡದವ ಶುನಕಪತಿತರುದ್ಧಾರ ಮಾಡುವದು ಸದ್ಧರ್ಮಪತಿತರನು ತುಳಿಯುವದು ಸೈತಾನಕರ್ಮ 104ಸಂಸಾರ ಸಾಗರವ ದಾಟಿಸಲು
--------------
ಭೂಪತಿ ವಿಠಲರು
ನಾರಾಯಣ ಪರಿಪಾಹಿ-ನರಹರಿಯೆ ಪ ನಿನ್ನೊಳು ನಿರುತನಾನಪರಾಧಿ ನಾರಾಯಣ ಅ.ಪ ಹೇಸಿಕೆಯಿಂದ ಮನಕಾಸುವೀಸಕೆ ಸೋತು ಮೋಸಹೋದೆ ನಿನ್ನ ನೆನೆಯದೆ ಕೇಶವ 1 ನಿರುತ ನಿನ್ನಯ ನಾಮಸ್ಮರಣೆಯ ಬಿಟ್ಟು ಘೋರನರಕಕ್ಕೆ ಗುರಿಯಾದೆ ಪೊರೆಯೊ ನಾರಾಯಣ2 ಮುದದಿಂದ ನಾ ಹದಿಬದೆಯರ ಮುಖನೋಡಿ ಮದದಿಂದ ನಿನ್ನನು ಮರೆದೆನೊ ಮಾಧವಾ3 ಸವನತ್ರಯದಿ ಅವ್ಯವಹಿತ ಕಾರ್ಯವ ಲವಲೇಶ ಬಿಡದೆ ನಾನೆಸಗಿದೆನೋ ಗೋವಿಂದ 4 ಕ್ಷಣ ಬಿಡದಲೆ ದುಷ್ಕರ್ಮದಿಂದಲಿ ದಣಿದು ತೃಣಕೆಣೆಯಾಗಿ ನಿರ್ವಿಣ್ಣನಾದೆ ಹೇವಿಷ್ಣು 5 ಹೃದಯದೊಳಿಲ್ಲದ ಮಧುರ ನುಡಿಗಳ ಮುದದಿ ನುಡಿದೆನೋ ಮಧುಸೂದನನೇ 6 ಅವನಿಯೊಳಗೆ ಎನಗೆಣೆಯಿಲ್ಲವೆನುತ ಅವಗುಣಪ್ರತಿಮೆ ನಾನಾದೆ ತ್ರಿವಿಕ್ರಮ 7 ಅನುದಿನ ನಿಂದಿಸಿ ಯಮನ ಮಂದಿರದಿ ನಾ ನಿಂದೆನೊ ವಾಮನ8 ಬುಧನೆಂದು ಮೆರೆದು ನಾ ಆಧಮರಸೇವಿಸಿ ಅಂಧತಮಕೆ ಗುರಿಯಾದೆನೋ ಶ್ರೀಧರ 9 ವಿಷಯವೆ ಜೀವನದ ಕೃಷಿಯಾಯಿತೆನಗೆ ತೃಷೆಯ ಮೀರದೆ ನಿನ್ನ ಮರೆದೆನೊ ಹೃಷಿಕೇಶನೆ 10 ಉದುಭವಿಸಿದೆ ಈ ವಸುಧೆ ಭಾರಕ್ಕಾಗಿ ಬಾಧಕನಾದೆನೊ ಪದುಮನಾಭನೆ 11 ತಾಮಸಕೃತ್ಯದಿಂದುದರ ಪೋಷಣೆಗಾಗಿ ಪ್ರೇಮದಿ ತಿರುಗಿದೆ ದಾಮೋದರ ದೇವ 12 ಶಂಕೆಯಿಲ್ಲದ ದುರುಳಕಿಂಕರಸೇವೆಯಿಂದ ಸಂಕಟಪಟ್ಟೆನೊ ಸಂಕುರುಷಣ ದೇವ 13 ಕಾಸಿನಾಶೆಗೆ ನಾ ಹೇಸಿಕಿಲ್ಲದೆ ಮನ ಹೇಸದೆ ಯಾಚಿಸಿದೆ ವಾಸುದೇವನೇ 14 ಸದ್ಯಫಲವೆ ಮುಖ್ಯವು ಉದ್ಯೋಗವೆಂದು ಉಬ್ಬಿ ಒದ್ಯಾಡುತಿಹೆ ಪ್ರದ್ಯುಮ್ನದೇವನೆ15 ಸತಿ ಅನುಗಾಲ ಬಂಧು ಎಂದು ಅನವರತ ನಂಬಿದೆನು ಅನಿರುದ್ಧದೇವನೆ 16 ಪರಿಪರಿ ಕ್ರೀಡೆಯಿಂ ಪರಪೀಡಕನಾಗಿ ಪರರನು ಸ್ತುತಿಸಿ ಬೆಳೆದೆ ಪುರುಷೋತ್ತಮ17 ಸಾಧು ಸಜ್ಜನರೊಳು ಭೇದ ವಂಚನೆ ಮಾಡಿ ಅಧೋಕ್ಷಜ ಮೂರ್ತೇ 18 ಬಾರಿಬಾರಿಗೆ ಪರಾನ್ನವನುಂಡು ಘೊರ ದುರಿತಕ್ಕೆ ಗುರಿಯಾದೆ ಶ್ರೀ ನರಸಿಂಹನೇ19 ಕೆಚ್ಚೆದೆಯಿಂದ ನಾನು ಸ್ವೇಚ್ಛೆಯಿಂದಲಿ ಚರಿಸಿ ಹುಚ್ಚು ಹಿಡಿದಂತಾದೆ ಅಚ್ಯುತಮೂರ್ತೇ20 ಮಾನಿಗಳಿಗೆ ಅವಮಾನ ಮಾಡಿ ನಾ ಜ್ಞಾನಿ ಎಂದೆನಿಸಿದೇ ಜನಾರ್ದನನೇ ಕಾಯೊ 21 ಕೋಪತಾಪಗಳಿಂ ಪಾಪಕೃತ್ಯವೆಸಗಿ ತಾಪ ಪಡುತಲಿಪ್ಪೆನಯ್ಯ ಉಪೇಂದ್ರನೆ 22 ಕರಚರಣಗಳಿಂದ ಕಳ್ಳನಾಗಿಹೆನು ತೊರೆದೆನೊ ಹರಿಗುರು ಯಾತ್ರೆಯ ಶ್ರೀಹರೇ 23 ಶಿಷ್ಟರನ್ನೆಲ್ಲ ನಿಕೃಷ್ಟತನದಿ ನೋಡಿ ಭ್ರಷ್ಟನಾಗೀಜಗದಿ ಮೆರೆದೆ ಶ್ರೀಕೃಷ್ಣನೇ 24 ಸಂಕಟಪಡುತಿಹ ಕಿಂಕರನೊಳಿಹ ಮಂಕು ಹರಿಸಿ ಕಾಯೋ ಶ್ರೀ ವೇಂಕಟೇಶನೇ25
--------------
ಉರಗಾದ್ರಿವಾಸವಿಠಲದಾಸರು
ಯೋಗಿ ದಿವಾಳಿ ತನ್ನಉದ್ಯೋಗವುಡುಗಿ ಕೈಗಂಟು ಮುಳುಗಲು ಪ ಕ್ಲೇಶ ಪಂಚಕವೆಂಬ ಕಡು ತವಕವದು ಹರಿಯಿತುಈಷಣತ್ರಯವೆಂಬ ಇಟ್ಟ ಉದ್ರಿನಿಂತಿತು1 ತಪ್ತನಾಲಕು ಒಡವೆ ತಾರದಲ ಹೋಯಿತುಲಿಪ್ತಿ ಇಂದ್ರಿಯ ಲಾಭ ಲಿಂಗಾರ್ಪಿತವಾಯಿತುಗುಪ್ತ ಜೀವವು ತಾನು ಗುರುತಿಲ್ಲದೆ ಮುಳುಗಿತು2 ದೇಣಿಗಾರನು ಚಿದಾನಂದನು ಒಂದೇ ಕುಳಿತುದೇಣಿಯ ಸಲಿಸೆಂದು ಗಾಣಗತಿಯನೆ ಮಾಡಿದೇಣಿಯಕೆ ಸರ್ವವೆಲ್ಲ ಧಾರೆಯನೆರೆದೆಮಾಣದಲೆ ತನ್ನಾಳು ಮಗನ ಮಾಡಿಕೊಂಡ3
--------------
ಚಿದಾನಂದ ಅವಧೂತರು
ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ 1 ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ 2 ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ ತೋರಿದರು 3 ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ | ಮಂಡಲಾಧಿಪನು ಕರೆದು ಮನ್ನಿಸಿ || ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ | ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು 4 ಘನವಾದ ಉದ್ಯೋಗ ದೊರಕಿತು ನನಗಿನ್ನು | ಅನುಮಾನವಿಲ್ಲವು ಎಂದೆಂದಿಗೂ || ದಿನದಿನಕೆ ಹರಿನಾಮವೆಂಬೊ ಲೆಖ್ಖ-| ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || 5 ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ | ಹರುಷದಿಂದಲಿ ಎನಗೆ ಸಂಬಳಕ್ಕೆ || ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ | ವರಹಗಳು ಎಂದಿಗಾದರು ಅಳಿವಿಲ್ಲದೆ || 6 ಈಸು ದಿನ ಉದ್ಯೋಗ ಹೀನನಾಗಿ ನೊಂದೆ | ದಾಸರಾ ದಯದಿಂದ ದೊರೆಕಿತಿಂದು || ಸಂಚಿತ ಕರ್ಮ ಓಡಿಸಿ |ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || 7
--------------
ವಿಜಯದಾಸ
ಶ್ರೀ ಜಗನ್ನಾಥದಾಸರ ಕೀರ್ತನೆ139ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರು ಗುಣಾರ್ಣವ ಜಗಜ್ಜನ್ಮಾದಿಕರ್ತನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಮೂಲಗುರುಅಗುರು ಶ್ರೀ ಹಂಸನಾಮಕ ಶ್ರೀಶಸಲಿಲಜಾಸನಸನಕದೂರ್ವಾಸಾದಿಗಳಪೀಳಿಗೆಯಲಿ ಬಂದ ಮರುದಂಶ ಮಧ್ವನಕಾಲಿಗೆ ಎರಗಿ ಶರಣಾದೆ ನಾ ಸತತ 1ಮಧ್ವಕರಕಂಜಭವಕಂಜನಾಭನೃಹರಿಮಾಧವಅಕ್ಷೋಭ್ಯ ಜಯತೀರ್ಥರಿಗೆ ನಮಿಪೆವಿದ್ಯಾಧಿರಾಜರಿಗೆ ರಾಜೇಂದ್ರತೀರ್ಥರಿಗೆಜಯಧ್ವಜರಿಗೆ ಮನೋ ಪುರುಷೋತ್ತಮರ್ಗೆ 2ಪುರುಷೋತ್ತಮ ಕುವರ ಬ್ರಹ್ಮಣ್ಯ ತೀರ್ಥರಿಗೆಸರಸೀರುಹನಾಭತೀರ್ಥಜರು ಲಕ್ಷ್ಮೀ -ಧರರ ಪರಂಪರೆ ಜಾತ ಸ್ವರ್ಣ ವರ್ಣರಕರಸರೋಜಭವಶ್ರೀ ಪಾದರಾಜರಿಗೆ ಶರಣು3ಸುಪುಣ್ಯ ಲಕ್ಷ್ಮೀ ನಾರಾಯಣ ತೀರ್ಥರಿಗೆಶ್ರೀಪಾದ ರಾಜತ್ವ ಯೋಗ್ಯತಾಲಿಂಗಶ್ರೀ ಭೂ ಸಮೇತ ಶ್ರೀ ರಂಗವಿಠ್ಠಲ ತಾನೆಈ ಪುಣ್ಯ ಶ್ಲೋಕರಲಿ ಬಂದು ನಿಂತಿಹನು 4ದಿನತೇಜಃ ಪುಂಜ ಬ್ರಹ್ಮಣ್ಯ ತೀರ್ಥರವನಜಕರಜರು ವ್ಯಾಸರಾಜಸ್ವಾಮಿಗಳುಘನಮಹಾ ಹರಿಭಕ್ತ ವಾದಿಗಳ ಸಿಂಹರುಆ ನಮಿಪೆ ಈ ಹರಿದಾಸಯತಿಗಳಿಗೆ 5ಪೂರ್ಣ ಪ್ರಜ್ಞಾನಂದ ತೀರ್ಥ ಮಧ್ವಾಚಾರ್ಯಕ್ಷೋಣಿಯ ಸಜ್ಜನರ ಉದ್ಧಾರಕಾಗಿಘನಮೂಲ ಗ್ರಂಥಗಳ ಸಹ ಪ್ರಾಕೃತದಲ್ಲೂಅನಘಲಕ್ಷ್ಮೀಶನ ಸ್ತೋತ್ರ ರಚಿಸಿಹರು6ಪೂರ್ಣಪ್ರಜÕರ ಜ್ಞಾನ ವಂಶಸ್ಥಯತಿಗಳುಕನ್ನಡದಿ ನುಡಿದಿರುವ ಕೀರ್ತನೆ ಪದ್ಯಗಳುಘನತರವು ಆ ರೀತಿಆದ್ಯಹರಿದಾಸರುಗಳುಕನ್ನಡದಿ ನುಡಿದಿಹರುಹರಿಪ್ರೀತಿಗಾಗಿ7ಸರ್ವದಾ ಶರಣಾದೆ ಎನ್ನ ಕಾಯುವ ತಂದೆದೇವ ಋಷಿ ನಾರದಪುರಂದರದಾಸರಲಿಶ್ರೀ ವ್ಯಾಸರಾಜರಲಿ ಉಪದೇಶ ಕೊಂಡಿಹರುನಿರ್ವಾಜ್ಯ ಭಕ್ತಿಮಾನ್ ಕಾರುಣ್ಯಶರಧಿ8ವಿಷ್ಣು ಸರ್ವೋತ್ತಮ ತದಂತರ ರಮಾದೇವಿವನು ರುಹಾಸನ ವಾಣಿ ತದಧೌ ಎಂದುತಾನೆ ನೇರಲ್ಲರಿತು ಲೋಕಕ್ಕೆ ಪೇಳಿದಘನದಯಾನಿಧಿ ಭೃಗುವೇ ವಿಜಯದಾಸಾರ್ಯ9ವಿಜಯದಾಸಾರ್ಯರರಾಜೀವಪದಯುಗಕೆನಿಜ ಭಕ್ತಿ ಪೂರ್ವಕ ಶರಣಾದೆ ಸತತವಿಜಯರಾಯರಗುರುಪುರಂದರದಾಸಾರ್ಯರುವಿಜಯರಾಯರ ಶಿಷ್ಯ ಗೋಪಾಲದಾಸರು 10ಪರಮಭಾಗವತರುಹರಿಭಕ್ತಾಗ್ರಣಿ ಕರುಣಿಹರಿಶಿರಿ ಒಲಿದಿಹ ದಾಸಮಹಂತವರವಾಯು ಗೋಪಾಲದಾಸರೊಳು ಸರ್ವದಾಸುಪ್ರಚುರನಾಗಿಹನು ಶರಣು ಗುರುವರ್ಯ 11ಕ್ಷಿಪ್ರಪ್ರಸಾದರು ವ್ಯಾಪ್ತೋಪಾಸಕರುಶ್ರೀಪತಿ ವೆಂಕಟ ಕೃಷ್ಣನಲಿರತರುಆಪತ್ತುಗಳ ಕಳೆದು ಕಾಮಿತಾರ್ಥಗಳೀವಕೃಪಾಳು ಇವರಲ್ಲಿ ನಾ ಶರಣು ಶರಣಾದೆ 12ಈ ನಮ್ಮ ಗುರುಗಳು ಗೋಪಾಲದಾಸಾರ್ಯರಲಿಘನವಿದ್ವಾಂಸರು ಬ್ಯಾಗವಟ್ಟ ಮನೆಯವರುಶ್ರೀನಿವಾಸಾಚಾರ್ಯ ಶರಣಾಗಿ ಜಗತ್ತಲ್ಲಿಜಗನ್ನಾಥ ದಾಸರು ಎಂದು ಜ್ವಲಿಸಿಹರು 13ಬ್ಯಾಗವಟ್ಟಿ ಗ್ರಾಮ ಮಾನವಿ ಎಂಬುವನಗರದ ಸಮೀಪವು ನವಾಬನಾಡಳಿತಆಗ್ರಾಮ ಶಾನಭೋಗ ನರಸಿಂಹಾಚಾರ್ಯರುಭಾಗವತಧರ್ಮವ ಆಚರಿಸುವವರು14ಹಣದಿಂದ ಶ್ರೀಮಂತರೋ ಬಡವರೋ ಹೇಗೋಗುಣದಿಂದ ಇವರು ಶ್ರೀಮಂತರು ಖರೆಯುಜ್ಞಾನಿವರ್ಯರು ಇವರು ಸುರವೃಂದದವರುಮನುಜ ಲೋಕದಿ ಜನ್ಮ ಹರಿಯ ನಿಯಮನದಿ 15ಜ್ಞಾನ ಭಕ್ತಿ ವೈರಾಗ್ಯ ಸಂಪನ್ನರುಶಾನುಭೋಗಿ ಉದ್ಯೋಗವ ತ್ಯಜಿಸಿಜ್ಞಾನಿತಿಮ್ಮಣ್ಣದಾಸಾರ್ಯರಲಿ ಉಪದೇಶಅನುಗ್ರಹನಾಮಾಂಕಿತ ಹೊಂದಿದರು ಮುದದಿ 16ನರಸಿಂಹಾಚಾರ್ಯ ಲಕ್ಷ್ಮಕ್ಕ ದಂಪತಿಯಪುತ್ರರತ್ನನು ಬುದ್ಧಿರ್ಮಾ ಶ್ರೀನಿವಾಸಸೂರಿವರವರದೇಂದ್ರ ತೀರ್ಥರ ಮುಖದಿಂದಪರಾಪರ ವಿದ್ಯೆಯ ಕಲಿತನು ತೀವ್ರ 17ವರದೆಂದ್ರರಲಿ ಓದಿ ದೊಡ್ಡ ಪಂಡಿತನಾಗಿನರಸಿಂಹದಾಸರು ತಂದೆ ದಿನ ಚರಿಪಹರಿದಾಸ ಪದ್ಧತಿ ಕೀರ್ತನಾರಾಧನಹರುಷದಲಿ ನೋಡಿ ಮುದಪುಳಕ ನಾಗುವನು 18ಗೃಹಸ್ಥ ಆಶ್ರಮ ಧರ್ಮ ಚೆನ್ನಾಗಿ ಆಚರಿಸುತ್ತಅಹರಹ ಸಚ್ಛಾಸ್ತ್ರ ಪಾಠ ಪೇಳುತ್ತಬಹುಕೀರ್ತಿ ಶ್ರೀನಿವಾಸಾಚಾರ್ಯರು ಹೊಂದಿಮಹಿಯಲ್ಲಿ ಪ್ರಖ್ಯಾತರಾಗಿ ಜ್ವಲಿಸಿಹರು 19ವಾರಿಜಾಸನ ಪಿತನು ಪೂರ್ಣಪ್ರಜÕರ ಹೃಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 20- ಪ್ರಥಮೋಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಹಂಚು ಬಲ್ಲುದೆ ಹಲ್ಲ ತೆಗೆದರಪಕಾರವನುಮಿಂಚುಳ್ಳ ಕಂಚು - ಕನ್ನಡಿಯಲ್ಲದೆ ಪ.ಕಳ್ಳ ಬಲ್ಲನೆ ತನ್ನ ಕರುಣದುಪಕಾರವನು ?ಕೊಳ್ಳಿ ಬಲ್ಲುದೆ ತನ್ನ ಮನೆಯೆಂಬುದ ?ಸುಳ್ಳಿ ಬಲ್ಲನೆ ಗ್ರಾಮದೊಳಗಣಾ ಸುದ್ದಿಯನು ?ಬಳ್ಳಿಬಲೆ ಬಲ್ಲುದೇ ತನ್ನ ವನವೆಂಬುದನು ? 1ಬಾಳಬಲ್ಲುದೆ ತಾನು ಮೇಲೊಗೆವ ಫಲಗಳನು ?ಸೂಳೆ ಬಲ್ಲುಳೆ ಮನೆಯ ಬಡತನಗಳ ?ಖೂಳ ಬಲ್ಲನೆ ಜಾಣರೊಳಗೊಂದು ಸವಿನುಡಿಯ ?ಕೇಳಬಲ್ಲನೆ ಕಿವುಡ ಏಕಾಂತವ ? 2ಯೋಗಿ ಬಲ್ಲನೆ ಭೋಗದೊಳಗಣಾ ಸುದ್ದಿಯನು ?ಭೋಗಿ ಬಲ್ಲನೆ ಕೆಲಸ - ಉದ್ಯೋಗವ ?ಕಾಗೆಬಲ್ಲುದೆ ಕೋಗಿಲಂತೆ ಸ್ವರಗೈವುದನು ?ಗೂಗೆ ಬಲ್ಲುದೆ ಹಗಲ ಹರಿದಾಟವ ? 3ಕೋಣ ಬಲ್ಲುದೆ ಕುದುರೆಯಂತೆ ವೈಹಾಳಿಯನು ?ಕಾಣಬಲ್ಲನೆ ಕುರುಡ ಕನ್ನಡಿಯನು ?ದೀನವತ್ಸಲ ನಮ್ಮ ಪುರಂದರವಿಠಲನನುಕಾಣಬಲ್ಲನೆ ಜಾÕನವಿಲ್ಲದವನು ? 4
--------------
ಪುರಂದರದಾಸರು