ನೀದಯಮಾಡಿ ಸಲಹೊ ಎನ್ನ ಪರಮಾತ್ಮ ಭವ
ತೊಡರು ಬಿಡಿಸೊ ಪರಮಾತ್ಮ ಪ
-----ಸಂಖ್ಯಾನೂರು ಬಳಲುತಿರೆ ಪರಮಾತ್ಮ ಇವರ
ಸಂಚಿತವು ಏನೋ ಕಾಣೆನು ಪರಮಾತ್ಮ
ಕೋಟಿ ಉದ್ಯೋಗದವರು ---- ಪರಮಾತ್ಮ
ಪ್ರಪಂಚಕ್ಕೆ ಸರಿ ಕಾಣಲಿಲ್ಲ ಪರಮಾತ್ಮ 1
ನಾನಾ ಪರಿಯಿಂದ ನಡೆದೆ ಕಷ್ಟದಿಂದ ಪರಮಾತ್ಮ
ನಿಮ್ಮ ಧ್ಯಾನವು ಎನ್ನ ಮನಕೆ ನಿಲಕದು ಪರಮಾತ್ಮ
------- ಜೀವಕೆ ಇನ್ನು ಪರಮಾತ್ಮ
ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ 2
ಸಾರಜಗವ ರಕ್ಷಿಸುವಂಥ ಪರಮಾತ್ಮ ನಿ-
ಸ್ಸಾರ ಮಾಡುವರೆ ಎನ್ನ ಪರಮಾತ್ಮ
ವೀರ ' ಹೊನ್ನ ವಿಠ್ಠಲಾ’ ಶ್ರೀ ಪರಮಾತ್ಮ ಗುಣ
ಗಂಭೀರ ಪುಣ್ಯಪರುಷ ಕೇಳೊ ಪರಮಾತ್ಮ 3