ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಂಗೆ ಮಂಗಳ ತರಂಗೆ | ಕರುಣಾಂತರಂಗೆ ರಂಗನಾಥನ ಪದಭೃಂಗೆ ಪ. ಅಂಗಜಪಿತನ ಅಂಗದಿ ಉದ್ಭವೆ ಭವ ಭಂಗ ಹರಿಸೆ ಅಂಗನೆ ಎನ್ನಂತರಂಗದಿ ಹರಿಪಾ- ದಂಗಳ ತೋರಿಸೆ ಶೃಂಗೆ ಶುಭಾಂಗೆ ಅ.ಪ. ಆದಿ ದೈತ್ಯನು ಖತಿಯಲಿ | ಮೇದಿನಿಯ ಸುತ್ತಿ ಒಯ್ದು ಪಾತಳ ಪುರದಲಿ ಮಾಧವ ಕರುಣದಿ ಆದಿವರಾಹನೆಂದೀ ಧರೆಯೊಳು ಬಂದು ಮೇದಿನಿ ಪೊರೆಯಲು ಶ್ರೀದನ ದಾಡೆಯಿಂ ನೀನುದುಭವಿಸಿದೆ 1 ಸ್ನಾನಪಾನದಿ ನರರನು | ಪಾವನಗೈವ ಮಾನಿನಿ ನಿನ್ನ ಕಂಡೆನು ನಾನಾ ದುಷ್ಕøತಗಳ ನೀನೋಡಿಸಿ ಮತ್ತೆ ನಾನು ಎಂಬುವ ನುಡಿ ನಾಲಗೆಗೀಯದೆ ಮಾನವ ಕಾಯೆ ಶ್ರೀನಾಥನ ಪದಧ್ಯಾನವನೀಯೆ 2 ಹರನ ಪೆಸರಿನ ಪುರದಲಿ | ಹರಿದು ಬಂದು ವರ ಶ್ರೀ ಕೂಡಲಿ ಸ್ಥಳದಲಿ ಭರದಿ ಭದ್ರೆಯ ಕೂಡಿ ಪರಿದಲ್ಲಿಂದಲಿ ಹರಿಹರ ಕ್ಷೇತ್ರವ ಬಳಸಿ ಮಂತ್ರಾಲಯ ಪುರಮಾರ್ಗದಿ ಸಾಗರವನೆ ಸೇರಿ ವರ ಗೋಪಾಲಕೃಷ್ಣವಿಠ್ಠಲನೆ ಧ್ಯಾನಿಪೆ 3
--------------
ಅಂಬಾಬಾಯಿ