ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ 1 ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ 2 ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೇ 3
--------------
ವಿಜಯದಾಸ
ಜಾಹ್ನವಿ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ ಪ ಅಜನ ಸಭೆಯಲಿ ವರುಣಗೆ ಶಾಪವು ಬರಲು ಪ್ರಜಪಾಲನಾದ ಶಂತುನ ನಾಮದೀ ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ1 ಸಗರರಾಯನ ವಂಶವನ್ನೆ ಉದ್ಧಾರೆ ಅಗಣಿತೋದಯ ಪಾರಂವಾರೆ ಶುಭಶರೀರೆ ಮುಗುವೆನು ಕರವೆತ್ತಿ ಸಂತತ ವಾರಂವಾರೆ 2 ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿಜ್ಞಾನಪೂರ್ವಕ ವೊಲಿದು ಭಕುತಿ ಕೊಡು ಎನಗೆ 3
--------------
ವಿಜಯದಾಸ