ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ನಿನ್ನ ಮನಸಿಗೆ ಬಂತೆ ಪ್ರಾಣನಾಥಾ ಚಿಣ್ಣನೆಂದು ನೋಡದಲೆ ಕರಿಯಲಟ್ಟಿದೆ ವೇಗ ಪ ಸಾಕಿದೆನು ನಿನ್ನ ದಾಸನೆಂದು ತಿಳಿದು ವಿ- | ವೇಕದಿಂದಲಿ ಉಪನಯನ ಮಾಡೀ | ಲೋಕದೊಳಗೆ ಬೆಳಸಿ ಮುದುವೆಯ ಮಾಡಿ ಅ- ನೇಕ ತೀರ್ಥಯಾತ್ರೆ ತಿರುಗಿದವನಾ ಇಂದೆ 1 ಉದ್ಧಾರವಾಗುವೆನು ಕುಲಕೋಟಿ ಸಹಿತೆಂದು ಪದ್ದಿಟ್ಟುಕೊಂಡಿವೈ ಈ ತರಳನ ಸುದ್ದಿ ತಿಳಿಯಗೊಡದೆ ವಿಯೋಗ ಮಾಡಿಸಿದೆ ಇಂದು 2 ಪಾದ ಭಜಿಸುವರಿಗೆ ಭಾಗ್ಯ ಹೆಚ್ಚುಗೊಡದಿಪ್ಪನೆಂದು ಬಿರುದು ಧರಿಸಿ ನಿಚ್ಚ ಮೆರೆವಾ ಮಹಿಮ ವಿಜಯವಿಠ್ಠಲರೇಯ ಅಚ್ಚ ಭಕುತರ ಪ್ರಿಯ ವೈಕುಂಠಕೆ ಇಂದೆ 3
--------------
ವಿಜಯದಾಸ
ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ ಕುಲವೆ ಉದ್ಧಾರವಾಗುವ ಕಾಲವೊ ಪ ಕೊಲೆ ಅನೃತ ಕಳವು(ದಶಬಾರ ಪಟ್ಟಾರ) [?] ಸಲೆ ಬಯಸಿ ಸರ್ವರಲಿ ನೆನೆವುತಿದ್ದೆ ಒಲಿದು ವೈಕುಂಠಪತಿ ಒಮ್ಮೆ ನೆನೆದರೆ ಮನಕೆ ಬಲು ಹರುಷವಾಗುವ ಭಾಗ್ಯವೆಲ್ಯೊದಗಿತೊ 1 ಸತ್ಕರ್ಮಗಳ ಲೇಶ ಸ್ವಪ್ನದಲಿ ತಿಳಿಯದು ಮತ್ತತನದಲಿ ನಡೆದ ಮೂರ್ಖನಿಗೆ ಎತ್ತಲಿಂದೊದಗಿತೊ ಎನಗೆ ತಿಳಿಯದು ದೇವ ಉತ್ತಮನ ನೆನೆನೆನೆದು ಉಬ್ಬೇರುತಿಹದೊ 2 ಬಂದ ಕಾರ್ಯವ ಬಿಟ್ಟು ಮಂದಮತಿತನದಿಂದ ಬೆಂದ ದುರ್ವಿಷಯದಲಿ ಬಳಲುತಿದ್ದೆ ತಂದೆ ಕದರುಂಡಲುಗಿ ಹನುಮಯ್ಯನಾ ಪಾದ ಹೊಂದಿದಾ ನೆವದಿಂದ ಹೊಸ ಪರಿಯ ಕಂಡೆ 3
--------------
ಕದರುಂಡಲಗಿ ಹನುಮಯ್ಯ