ರಕ್ಷಿಸೋ ವರದಯ್ಯನ ಕಣ್ಣಿಗೆ
ಸುಕ್ಷೇಮದಿ ದೃಷ್ಟಿಯಪ್ಪಂತೆ
ದಕ್ಷಿಣ ಕಾಶಿಯೆಂದೆನಿಪ ಕುಡುಮಪುರಾ
ಧ್ಯಕ್ಷನಾದ ಶ್ರೀ ಮಂಜುನಾಥ ದೇವಾ ಪ
ನಿನ್ನಡಿಸೇವೆಯ ಮಾಳ್ಪರಿಗೀಪರಿ
ಬನ್ನ ಬಡಿಸುವುದುಚಿತವೇ
ತನ್ನ ಮಕ್ಕಳು ತಪ್ಪಿ ನಡೆದರೆ ತಾಯ್ತಂದೆ
ಮುನ್ನ ಮರುತು ಸಲಹುವ ಪರಿಯಲಿ ಮುಂದೆ 1
ಬುದ್ಧಿಯಾಗಿರಲೆಂದು ಮಾಡಿದರೇನು
ಉದ್ಧರಿಸುವದನು ಮಾನವೆ
ಗಿದ್ದ ಮಹಾತ್ಮರೊಂದಾಗಿ ಮೋಹದಿ ಬೇಗ 2
ಮೋಡದ ರವಿ ಮೂಡುವಂದದಿ ದಯ
ಮಾಡುವ ಭಾರವು ನಿನ್ನದು
ರೂಢಿಯೊಳಧಿಕ ಶ್ರೀವರ ಮಂಜುನಾಥೇಶ
ಗಾಢದಿಂದಲಿ ವರದಯ್ಯ ಹೆಗಡೆಗೆ 3