ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸ್ತುತಿ ರಾಘವೇಂದ್ರ ಸಲಹೊ ಗುಣಸಾಂದ್ರ ಪ ಭಗವದ್ಗೀತಾ ವಿವರಣ ತಂತ್ರದೀಪ ನಿಗಮತತಿಗೆ ಖಂಡಾರ್ಥವ ರಚಿಸಿ ಖಗರ್ಥಗಳನು ಅತಿ ಸ್ಫುಟವಾಗಿ ವಿವರಿಸಿ ಖಗವಾಹನ ತೋರಪಡಿಸಿದ ಧೀರ 1 ಧರಣಿ ವಿಜರರಿಗೆ ವರಗಳ ಕೊಡುವಂಥ ಸುರತರುವೆ ನಿಂಗೆ ಕರಗಳ ಮುಗಿದು ಪರಮಪುರುಷ ಹರಿಚರಣ ಕಮಲದಲಿ ಸ್ಥಿರವಾದ ಭಕುತಿಯ ಬೇಡುವೆ ಧೀರ 2 ಚಂಡ ಕುಮತಗಳ ಖಂಡಿಸಿ ಬುಧಜನ ಮಂಡಲದೊಳಗೆ ಪ್ರಚಂಡನೆಂದೆನಿಸಿ ಕುಂಡಲಿಶಯನ ಪಾದಮಂಡಿತ ಹೃದಯ ಭೂ ಮಂಡಲದೊಳಗೆ ಅಖಂಡಲನಾದ 3 ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತ ಪದ್ಧತಿ ಬಿಡದಂತ ಬುದ್ಧಿಯನಿತ್ತು ಉದ್ಧರಿಸಯ್ಯ ಕೃಪಾಬ್ಧಿಯೇ ಬುಧಜನಾ ರಾದ್ಯಚರಣ ಪರಿಶುದ್ಧ ಚರಿತ್ರ 4 ಕಾಮಜನಕನಾದ ನಾಮಗಿರೀಶ್ವರಿ ಸ್ವಾಮಿ ನೃಹರಿಪಾದ ತಾಮರಸಂಗಳ ಪ್ರೇಮದಿ ಪೂಜಿಪೆನೆಂಬೊ ಕಾಮಿತವರ ನೀಡೊ ಶ್ರೀ ಮತ್ಸುಧೀಂದ್ರಕರ ತಾಮರಸಭವನೆ 5
--------------
ವಿದ್ಯಾರತ್ನಾಕರತೀರ್ಥರು
ಪಟ್ಟಿಯು ಬಂದಿಲ್ಲ ಕೃಷ್ಣ ಪಟ್ಟಿಯು ಬಂದಿಲ್ಲ ಪಟ್ಟಿಯು ಬಾರದೆ ಕಟ್ಟಲು ಸಾಧ್ಯವೆ ಪ ನಿಷ್ಠುರ ಮಾಡದೆ ಇಷ್ಟ ಬಂದುದ ಮಾಡೊ ಅ.ಪ ಬುದ್ಧಿಯು ಸಾಲದೆ ಬಿದ್ದೆನೋ ಸಾಂಕೆ ಬದ್ದನಾಗಿರುವೆನೋ ತೀರಿಸಲು ಇದ್ದು ಇಲ್ಲೆಂಬುವ ಸುದ್ದಿಯ ಪೇಳುವ ಕ್ಷುದ್ರ ನಾನಲ್ಲವೋ ಉದ್ಧರಿಸಯ್ಯ 1 ಕೊಟ್ಟ ಭಾಗ್ಯವನು ದೂಷ್ಯ ರೀತಿಯಲಿ ಕುಟ್ಟಿ ಕೋಲಾಹಲ ಮಾಡಿದೆನೊ ಇಷ್ಟು ದಿನವು ಬಡ್ಡಿ ಕಟ್ಟಲಿಲ್ಲವೆಂದು ಸಿಟ್ಟು ಮಾಡಿದರೆ ಕೆಟ್ಟು ಹೋಗುವೆನೊ 2 ಭೃತ್ಯರ ಸಲಹುವ ಸತ್ಯ ಸಂಕಲ್ಪನೆ ಭೃತ್ಯನಾಗಿ ನಾ ಸೇವೆಯ ಮಾಡುವೆ ಭಕ್ತರು ಈ ಜನ ಭಕ್ತ ಪ್ರಸನ್ನ ನಾ ನಿತ್ತ ಸಾಲಗಳು ಉತ್ತಾರಾಯಿತೆಂಬೊ 3
--------------
ವಿದ್ಯಾಪ್ರಸನ್ನತೀರ್ಥರು
ವರಾಹ ಹರಿ ವಿಠಲ | ಪೊರೆಯ ಬೇಕಿವಳ ಪ ಕರ ಪಿಡಿಯ ಬೇಕೋ ಅ.ಪ. ಕರ್ಮ ಅಘ | ಕಾನನಗೆ ದಾವಾಗ್ನಿನೀನೆ ಕೃಪೆ ನೋಟದಲಿ | ಮಾನಿನಿಯ ಸಲಹೋ 1 ತೀರ್ಥ ಪದ ನಿನ್ನ ಗುಣ | ಕೀರ್ತನೆಯ ನೊದಗಿಸುತಆರ್ತಳುದ್ಧರ ಕಾರ್ಯ | ಪ್ರಾರ್ಥಿಸುವೆ ಹರಿಯೇ |ಮೂರ್ತಿ ನಿನ್ನದು ಹೃದಯ | ಪಾತ್ರದಲಿ ಕಾಣಿಸುತಗೋತ್ರ ಉದ್ಧರಿಸಯ್ಯ | ಪೃಥ್ವಿ ಧರ ದೇವಾ 2 ಭವ ಶರಧಿ | ಪೋತನೀನೆನಿಸೋ 3 ನಿತ್ಯ ಮಂಗಳವಾ 4 ಸೃಷ್ಟೀಶ ಕ್ರೋಡೇಂದ್ರ | ಅಷ್ಟ ಸೌಭಾಗ್ಯದನೆಪ್ರೇಷ್ಟ ನೀನಾಗಿರಲು | ಕಷ್ಟವೆಲ್ಲಿಹುದೋವಿಷ್ಟರಶ್ರವ ಇವಳ | ಸುಷ್ಟು ಪೊರೆವುದು ಎನುತದಿಟ್ಟ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಶ್ರೀ ವಿದ್ಯಾಧೀಶರು ದಯಮಾಡೋ ಗುರುವೇ ವಿದ್ಯಾಧೀಶ ಪ ಅವಿದ್ಯಾ ನಿನ್ನ ಹೊರತು ನನಗನ್ಯ ಗತಿಯಿಲ್ಲ ಧನ್ಯನಿನ್ನಯ ಕುಲ ಮುನ್ನ ಉದ್ಧರಿಸಯ್ಯಾ 1 ತಾಪ ನಿನಗೆ ಇಲ್ಲಾಪೋತಗೆಲ್ಲರು ಬೋಧಾ ಯೋತಿ ಸಿಕ್ಕುವುದುಂಟೆ 2 ಹಾಕಿದ ಬೀಜವಾ ಬೀಕಲ ಮಾಡೋರೆತೋಕನಲ್ಲೆ ಕೃಪ ಯಾಕೆ ಮಾಡವಲ್ಲಿ3 ಅನವದ್ಯ ಕುಲದಿ ಪುಟ್ಟಿವಿದ್ಯಾರಹಿತನಾಗಿ ಹದ್ದಿನಂದದಿ ನಾನು4 ನಿಂದಿಸುವರೊ ನಿನ್ನ ವಂದಿತ ಕುಲವನ್ನುಮುಂದೆ ಮಾರ್ಗವ ಪೇಳಿಂದಿರೇಶನ ಪ್ರೀಯಾ 5
--------------
ಇಂದಿರೇಶರು
ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ ಬಡವನು ನಾನೈಯ್ಯ - ಕೊಡು ನಿನ್ನ ಸೇವೆಯ ಪ ಒಡಲಿಗೋಸುಗ ಪರರಡಿಗಳ ಪಿಡಿಯುತೆ ಭವ ಕಡಲಿನೊಳಗೆ ಅ.ಪ. ಪಡೆದು ವರಗಳನು ಕಡು ಖೂಳ ರಾವಣ ನಡುಗಿಸಿ ಸುರನರ ಭುಜಗರೊಡೆಯರನ್ನು ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ - ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು ಪೊಡಮಟ್ಟು ಬೇಡಲು ಕೊಡುತೆ ಅಭಯವನು ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ 1 ಸತಿ ಕೌಸಲ್ಯದೇವಿಯ ಬಸುರೊಳು ಸಂಜನಿಸಿ ದಶದಿಶದೊಳು ಯಶ ಪಸರಿಸಿ ಅಸುರೆಯ ಅಸುವನು ಹಾರಿಸಿ ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ ನಸುನಗುತಲಿ ಪದಸರಸಿಜ ಸೋಕಿಸಿ ಅಶಮವಾಗಿದ್ದ ಮುನಿಸತಿಯನುದ್ಧರಿಸಿ ಪಶುಪತಿ ಧನುಭಂಗವೆಸಗಿ ಸೀತೆಯ ಕರ ಬಿಸಜವ ನೊಶಗೈದ ಅಸಮ ಸಮರ್ಥ 2 ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು ಬಂದ ಕಾರ್ಯಕೆ ನೆವ ತಂದು ವನಕೆ ಬಂದು ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು ನೊಂದು ನೃಪನು ದಿನವನ್ನು ಹೊಂದಲು ಕರೆ- ತಂದು ಭರತನಿಗೆ ಅಂದು ರಾಜ್ಯವನೀಯೆ ಬಂದೊಲ್ಲದೆ ಬೇಗ ಬಂದು ವಂದಿಸೆ ಪದ ದ್ವಂದ್ವದ ಪಾದುಕವಂದದಿಂದೊಲಿದಿತ್ತೆ 3 ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ ಯುಕ್ತನು ನೀನಾಗಿ ಪೊರೆಯಲು ಇತ್ತು ಅಭಯವನ್ನು ಉತ್ತಮ ದಂಡಕದಿ ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ ತುತ್ತು ಮೂರಾಗಿಸಿದತ್ಯಂತ ಶಕ್ತ 4 ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ ಪಾತಕಿ ದಶಮುಖ ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ ಆತಗೆ ಸದ್ಗತಿಯಿತ್ತು ನಡೆದು ಖಳ ಪೋತಕ ಬಂಧನ ತೋಳ್ಗಳ ಖಂಡಿಸಿ ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ ವಾತಸುತನ ಮನ ಪ್ರಾರ್ಥನೆ ಸಲಿಸಿದೆ 5 ಚರಣದಿಂದೊಗೆದು ದುಂದುಭಿಯ ಶರೀರವನ್ನು ತರುಗಳೇಳನು ಒಂದೇ ಸರಳಿನಿಂದುರುಳಿಸಿ ತರಣಿಸುತನ ಭಯ ಹರಿಸಿ ವಾಲಿಯ ಗರ್ವ ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ ತರುಚರ ತತಿಗಳ ಕೆರಳಿಸಿ ಹರುಷದಿ ಪರನು ಭಕುತನನ್ನು ಕರೆದು ಕುರುಹುಗಳ ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ 6 ತಿಂಗಳು ಮೀರಿತೆಂದು ಅಂಗದ ಪ್ರಮುಖರು ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ - ರಂಗಿಣಿ ಪತಿಯನ್ನು ಲಂಘಿಸಿ ಹನುಮನು ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು ಭಂಗಿಸಿ ಲಂಕಿಣಿಯನು ಸೀತಾಂಗನೆ - ಗುಂಗುರವಿತ್ತುತ್ತಮಾಂಗದ ಮಣಿಯಾಂತು ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ ಪುಂಗವ ಬರೆ ನಿನ್ನಂಗ ಸಂಗವನಿತ್ತೆ 7 ಹರಿವರರನು ಕೂಡಿ ಶರಧಿಗೆ ಪಯಣಮಾಡಿ ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ ಪುರಕೆ ಉರಿಯನಿಕ್ಕಿ ಶರವರ್ಷಂಗಳ ಕರಿ ರಥಾ ತುರಗ ಪದಾತಿಗ- ಳುರುಳಿಸಿ ದಶಶಿರನುರವನು ಇರಿದು ಪರಮ ಸಾಧ್ವಿಯ ಕರಸರಸಿಜ ಪಿಡಿದೆ 8 ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ ಭಕ್ತನ ಕಳುಹಿ ಸದ್ವøತ್ತವ ಭರತಗೆ ಬಿತ್ತರಿಸಿ ಮಹದುತ್ಸವದಿ ಪುರ ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ 9
--------------
ಲಕ್ಷ್ಮೀನಾರಯಣರಾಯರು
ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.ಏಳುಗುರುರಾಘವೇಂದ್ರ ಏಳು ದಯಾಗುಣಸಾಂದ್ರಏಳು ವೈಷ್ಣವ ಕುಮುದಚಂದ್ರ ಶ್ರೀ ರಾಘವೇಂದ್ರ ಅ.ಪ.ಅಶನವಸನಗಳಿಲ್ಲವೆಂಬವ್ಯಸನಗಳಿಲ್ಲಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ 1ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವಕರ್ಮನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೊಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು 2ಅನ್ಯರ ಕೈಯಲ್ಲಿ ನಿನ್ನವರನಿರಿಸುವುದುಅನ್ಯಾಯವಾಯ್ತುಪಾವನ್ನಗುರುರಾಯಎನ್ನ ಮಾತಲ್ಲವಿದು ನಿನ್ನ ಮಾತೇ ಸರಿಮನ್ನಿಸಿ ಆಗು ಪ್ರಸನ್ನ ಗುರುರಾಯ 3ವೇದ ಶಾಸ್ತ್ತ್ರಗಳನ್ನು ಓದಿ ಪೇಳ್ದವನಲ್ಲಭೇದಾಭೇದವನು ತಿಳಿಯಲಿಲ್ಲಸಾಧು ಸಜ್ಜನರ ಸಹವಾಸ ಮೊದಲಿಲ್ಲಹಿಂದಾಗಿಮಾನಮಾರಿಸಿದಿ ಉಳಿಸಲಿಲ್ಲ4ಆಸೆಗೊಳಗಾದೆನೊ ಹೇಸಿ ಮನುಜನು ನಾನುಕ್ಲೇಶಭವಸಾಗರದೊಳೀಸುತಿಹೆನೊಏಸುಜನ್ಮದಿ ಎನ್ನಘಾಸಿಮಾಡಿದೆ ಮುನ್ನದಾಸನಾಗುವೆ ತೋರೊ ಪ್ರಸನ್ನವೆಂಕಟನ 5
--------------
ಪ್ರಸನ್ನವೆಂಕಟದಾಸರು