ಒಟ್ಟು 9 ಕಡೆಗಳಲ್ಲಿ , 5 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಯ್ಯ ವಾರಿಜನಯನಾ | ಎನ್ನನುದ್ದರಿಸಲಾರೆಯಾ | ದೀನಾನಾಥ ದಯಾಂಬುಧಿಯಂಬಾ | ಶ್ರೀನಾಮದ ಬಿರುದಿನ ಮಹಾಮಹಿಮನಾ ಪ ಪಾತಕ | ತಾ ಮೊದಲಿಗೆ ಇಲ್ಲವೋ ಎನುತಾ | ಆ ಮಹಾಶೃತಿ ಸಾರುತಲಿರೆ ದುಷ್ಕ್ರತ | ನಾ ಮಾಡಿದ ಘನವಾಯಿತೇ ದೇವಾ1 ಗಜಗಣಿಕಾ ಅಜಮಿಳನಹಲ್ಯಾ | ವೃಜಗೋವಳ ವ್ಯಾಧರ ಮೊದಲು | ಭಜನಿಯಿರಲಿ ಇರದಿರಲಿ ಸನಾತನ | ನಿಜಪದದೋರಿದ ಪರಮ ಉದಾರಾ2 ನೀನೇ ಗತಿ ಎಂದಾನತೆ ನಾದೆ | ಇನ್ನೇನು ನೋಡುವಿ ಅಂತವಾ | ನ್ಯೊನವಾರಿಸದೆವೆ ತಾರಿಸು ಪಾಮರ | ವಣನವನನು ಗುರು ಮಹಿಪತಿ ಸ್ವಾಮಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೋ ಪ್ರಾಣಿ ಪ ಏನೋ ಪ್ರಾಣಿ ಮುಂದಗಣೀ | ಹೀನಗುಣಗಳ ಶ್ರೇಣಿ | ತಾ ನಳಿಯಂದದಿ ಮಾಣಿ ನೀ ನುಡಿನಮ್ರತವಾಣಿ | ಸ್ವಾನಂದ ಜನ್ಮಕ ಬಂದೆನಿಸಿ ಕೊಂಬುದು | ವಿಹಿದುತ್ತಮ ಜ್ಞಾನಿ 1 ಕೇಳು ಕೇಳಿಧಾಂಗ ಬಲು ಹೇಳಿದಾಂಗ ಮೇಳು | ತಿಳಿಗುರು ಭಕ್ತಿಯ ಮೇಲು ಬಲು ವಿವೇಕವ ತಾಳು | ಛಲದ ಮದಮತ್ಸರ ಶೀಳು ತಳಿಮನ ದುರ್ವತ್ತಿಗಳು | ಇಳಯೊಳು ಶ್ರೀ ಗುರುಪಾದಕ ನಂಬಿ | ವಿಡಿಯೋ ಪಂಥವಾ ಸೇರು 2 ಜರಿ ಹಂ ಮಮತೆಯ ದೂರಾ ಸರಿ ನಗಿ ಆರಿ ಮಿತ್ರರಾ | ಮರೆಯೋ ನಿಂದೆಯ ಪರರಾ ತೋರದೇ ವಾಗ್ವಿಸ್ತಾರಾ | ಪರಿ ನುಡಿಯಲಿ | ಮಹಿಪತಿಸುತ ಪ್ರಭು ಉದಾರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧುರ ಧೀರಾ ಉದಾರಾ ಗಂಭೀರ ಕುಮಾರ ಪ ಕಂದರ್ಪ ರೂಪಾರ್ಧ ಚಂದ್ರಫಾಲಾ ಗುಣಮಾಲಾ ಜನಲೋಲಾ ಉಮೆ ಬಾಲಾ ಸುಶೀಲ 1 ನಿಗಮಾಳಿ ಪೊಗಳುವ ಖಗಧ್ವಜ ಮಿತ್ರಾ | ಜಗಪಾವನ ಶಶಿಮೊಗ ಕಂಜನೇತ್ರಾ ತ್ರಿನೇತ್ರಾ ಪ್ರಿಯಮಿತ್ರಾ ಸುಚರಿತ್ರಾ ಪವಿತ್ರಾ 2 ಪಾವನ ಮೂರುತಿ ಪಾವಂಜೆ ವಾಸಾ | ಕೋವಿದರೊಡೆಯ ರಕ್ಷಕ ದಾಸಾ ಗುಹೇಶಾ ಸರ್ವೇಶಾ ಸೇನೇಶಾ ಜಗದೀಶಾ 3
--------------
ಬೆಳ್ಳೆ ದಾಸಪ್ಪಯ್ಯ
ಪ್ರಣಾಮ ಗಣರಾಯಾ ಪ್ರ'ೀಣಾ ಪಪ್ರಥಮ ಪ್ರಣಾಮವ ಮೂಡಿ ಬೇಡುವೆ'ಘ್ನರಾಜ ನೀ ನೀಡೆಮಗಭಯಾಅ.ಪಪಾಶಾಂಕುಶಧರ ಮೂಷಕವಾಹನಕೇಶರಗಂಧ 'ಭೂತಾಂಗನೇಶೇಷೋದರ ಉಮೇಶನಂದನಾಯಶವ ನೀಡು ಸತ್ಕಾರ್ಯಗಳಲ್ಲಿ 1ಏಕ'ಂಶತಿ ಮೋದಕ ಪ್ರೀಯಾಏಕದಂತ ಗಜವದನ ಉದಾರಾಕಾಕುಬುದ್ಧಿಗಳ ಬಿಡಿಸಿ ಬೇಗನೇಶ್ರೀಕಾಂತನಲಿ ಏಕಾಂತಭಕುತಿ ಕೊಡು 2ಸಿದ್ಧಿ 'ನಾಯಕಾ 'ದ್ಯಾಸಮುದ್ರಾಬುದ್ಧಿ ಪ್ರದಾಯಕ ಮುದ್ದು ಗಜಾನನಾಶುದ್ಧ ಜ್ಞಾನ ವೈರಾಗ್ಯ ಭಕುತಿಕೊಟ್ಟುಉದ್ಧರಿಸೈ ಭೂಪತಿ'ಠ್ಠಲಪ್ರಿಯಾ 3
--------------
ಭೂಪತಿ ವಿಠಲರು
ಬಾರೋ ಬಾರೋ ರಂಗಾ ಪ ಬಾರೈಯ್ಯಾ ಯದುವೀರಾ | ಈರೇಳು ಭುವನಾಧಾರಾ | ಶ್ರೀ ರಮಣಿಯ ಮನೋಹರಾ | ವಾರಣ ಭಯ ನಿವಾರಾ | ಕರುಣಾಕರಾ | ದೀನೋದ್ಧಾರಾ | ಸರ್ವಾಧಾರಾ | ಪರಮ ಉದಾರಾ | ಸುರಸಹತಾರಾ | ದಯಾಸಾಗರ 1 ಒದಗುವೆ ಸ್ಮರಣೆಗೆ ನೇಮಾ | ಮದನಜನಕ ಮಹಮಹಿಮಾ | ಜೀಮೂತ ಶಾಮಾ | ಸದ್ಗುಣ ಧಾಮಾ | ಪೂರಿತ ಕಾಮಾ | ತ್ರಿವಿಕ್ರಮಾ | ಅನಂತ ನಾಮಾ | ಲೋಕಾಭಿರಾವi 2 ಅಸುರ ಕುಲ ಸಂಹರಣಾ | ಬಿಸರುಹ ಸಖ ಶತ ಕಿರಣಾ | ಅಸಮನೆ ಮಹಿಪತಿ ಸುತನಾ | ಪೋಷಿಸುವೆ ನೀ ಪರಿಪೂರ್ಣ ಖಗವರ ಗಮನಾ | ಮೃದುತರ ಚರಣಾ | ಅಹಲ್ಯೋದ್ಧರಣಾ | ಕನPsÀರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ಸಲಹಯ್ಯ ಪುಣ್ಯನಾಮ | ಶ್ರೀ ರಾಘವೇಂದ್ರಾ ಪೂರಿತಕಾಮಾ ನೇಮಾ | ಶಾಮ ಪರಮಾ ಗುಣರತ್ನ ಧಾಮಾ ಪ ವನಜಾಂಬಕ ಕುಂದರದನಾ | ಅನುಪಮ ಸುಂದರ ವದನಾ | ರಣದಲಿ ಜಿತ ದಶವದನಾ | ಅನಂತವದನಾ ಲಾವಣ್ಯ ಸದನಾ 1 ಕರುಣಾ ಶರಣಾ ಭರಣಾ | ಧರಣಿ ಧರಣೋದ್ಧರಣಾ | ಸ್ಪುರಣ ಕಿರಣ ದೋರಣ ಚರಣಾ | ಅರುಣಾಂಬುಜಾಲಯ ರಮಣಾ 2 ವೀರಾಗುಣ ಗಂಭೀರಾ | ಕ್ರೂರಾಸುರ ಸಂಹಾರಾ | ಶೂರಾ ಜನ್ಮ ವಿದೂರಾ | ಮಹಿಪತಿ ಧೀರಾ ಕೃಷ್ಣನೊಡೆಯ ಉದಾರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗುರುವೇ ನೀ ತೋರಿಸೋ ದಯದಿಂದ ಲೆನಗೆ | ಬೇಗದಿ ಬಂದೆನ್ನ ದೇವನೀಗ ಪ ತೈಲ ಯಂತ್ರ ದೊಳಿಪ ಪಶುವಿನಂದದಿ ಜೀಯಾ | ಹಲವು ಜನ್ಮವ ತಾಳಿದೆನಯ್ಯಾ 1 ನಿನ್ನ ಸ್ಮರಣೆ ಮರೆದು ನಾನಾ ಉಪಾಸನೆ ವಿಡಿದು | ಬನ್ನ ಬಟ್ಟೆನೋ ಯಚ್ಚರ ಜರಿದು2 ಭವ ಬಂಧನ ಹರಿವಾ | ಸೂರೆಗೊಳಲಿಲ್ಲಾ ಭಕ್ತಿ ಸುಖವಾ3 ಸರ್ವಾಪರಾಧವಾ ಕ್ಷಮಿಸಿ ಯನ್ನುದ್ಧಾರವಾ | ಉರ್ವಿಲಿ ಮಾಡು ಪಿಡಿದು ಕರವಾ 4 ಇಹಪರ ಸಹಕಾರ ಕರುಣಾಬ್ದಿ ಪಾರಾವಾರಾ | ಮಹಿಪತಿ ಸುತ ಪ್ರಭು ಉದಾರಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಪಾದರಾಯ ನಿಮ್ಮ | ಆಪಾದ ಮೌಳಿ ಭಜಿಪಾಪಾಪಿಯಾದರು ಅವ | ಪಾಪವನೆಲ್ಲ ಕಳೆವಾ ಪ ಧೃತ - ಶ್ರೀಪತಿಯೊಲಿಮೆಯ | ಪ್ರಾಪಿಸುತೆನ್ನನುವ್ಯಾಪುತ ದರ್ಶಿಯ ಮಾಡೊ ಮಹಾತ್ಮಾ ಅ.ಪ. ವಾರಿಧಿ ಭವ ತರಣ ||ಕೀರುತಿ ತವ ಸ್ಮರಣ | ಬಾರಿಬಾರಿಗೆ ಶ್ರವಣಸೂರೆಗೊಂಬುವ ನರನ | ಸಾರಿ ಉದ್ಧರಿಪೆ ಅವನಾ ||ಧೃತ - ವಾರವಾರಕೆ ನಿನ ಪರಿವಾರದಲಿಡುಸೂರಿ ಸುವರ್ಣರ ಕರಜ ಉದಾರಾ 1 ಮೋದ ಮಾಧವ ಪ್ರಿಯ ನಿನಪಾದವ ನಂಬಿದೆ | ಬುಧ ಜನ ವಂದ್ಯಾ 2 ಚಾರು ಚರಿತೆಯ ನಾನಾಪರಿಪರಿಯಲಿ ಗಾನಾ | ವಿರಚಿಸಿ ಜನರ ಅಜ್ಞಾನಾ ||ಹರಿಸಿ ಅವರಿಗೆ ಜ್ಞಾನಾ |ಭರಣ ಪಾಲಿಸಿ ಕರುಣಬೀರಿದೆ ಸುಸಾಧನ | ಗುರು ಪರಮ ಪಾವನಾ ||ಧೃತ - ಗುರುಗೋವಿಂದ ವಿಠಲನ | ಚರಣವ ಭಜಿಸುವವರಧೃವ ಮೂರುತಿ | ನಿರುತದಿ ಕೀರ್ತಿ 3
--------------
ಗುರುಗೋವಿಂದವಿಠಲರು
ಹೆಚ್ಚುಕಡಿಮೆಯೆಂದು ಹೆಣಗಾಡಬೇಡಿ ಸಚ್ಚಿದಾನಂದ ಬ್ರಹ್ಮನ ಗುಟ್ಟು ನೋಡಿ ಪ ಪರಮಾತ್ಮ ಕಾಯದೊಳಿರುತಿರ್ಪತನಕಾ ಪರಿಪರಿ ಹೆಸರಿಂದ ಕರಿವರು ಅನಕಾ ಶರೀರ ಭೋಗವ ತೀರಿಸಿಕೊಂಡು ಹೋಹಾಗೆ ಲ್ಲರಿಗೊಂದೆ ಪೆಸರಿಂದ ಕರೆಯುವರಾಗಾ 1 ಅರಸು ಮಂತ್ರಿ ಕರಣೀಕ ತಳವಾರಾ ಕವಿ ಶಾಸ್ತ್ರಿ ಉದಾರಾ ಪರಿಯ ನಾಮಗಳಿಂದ ಉಪಾಧಿಯೋಗಾ ಪರಮಾತ್ಮ ತೊಲಗಲು ಹೆಣವೆಂಬರಾಗಾ 2 ಪರಮಾತ್ಮನಾಟದ ಲೀಲೆ ಇದೆಲ್ಲಾ ಗುರುಪುತ್ರನಾದ ಮಹಾತ್ಮನೆ ಬಲ್ಲಾ ಗುರು ವಿಮಲಾನಂದ ಶರಧಿಯೊಳಾಡಿ ಹಿರಿದು ಕಿರಿದು ಯಾವಲ್ಯುಂಟೆಂದು ನೋಡಿ 3
--------------
ಭಟಕಳ ಅಪ್ಪಯ್ಯ