ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶ ನಿನ್ನ ಚರಣದ್ವಂಧ್ವವನ್ನು ಬಿಡೆನೊ ಕರುಣಾ ನೊಂದಿರುವೆನೊ ಮನದಿ ಬಹಳ ಹಿಂದುಮುಂದು ತೋರದಿಹುದು ಬಂಧು ಬಳಗವೆಲ್ಲ ನೀನೆ ಎಂದಿಹೆನೊ ಅರವಿಂದಲೋಚನ ಅ.ಪ ಊರು ಊರು ಸುತ್ತಿ ದಣಿದು ಸಾರರಹಿತ ಶಾಸ್ತ್ರಗಳ ವಿ ಕಾಲ ಕಳೆದೆನೋ ಉದಾರಚರಿತ ಭೂರಿ ಕರಣದಿಂದ ನಿನ್ನ ಚಾರುಚರಣ ಸೇವೆ ರುಚಿಯು ತೋರಿ ಮನಕೆ ಸಂತಸದಿ ಮುರಾರಿ ಎನಗೆ ಗತಿಯೆನುತಲಿ 1 ದುರಿತ ಸ್ತೋಮಗಳಲಿ ಮುಳುಗಿ ಬಳಲಿದೆನೊ ನಿಸ್ಸೀಮ ಮಹಿಮ ನಾಮಸ್ಮರಣ ಮಾತ್ರದಿಂದ ಪಾಮರ ಜನರುಗಳ ಯೋಗ ಕ್ಷೇಮ ವಹಿಸಿ ಪೊರೆಯುವಂಥ ಕಾಮಧೇನು ನೀನೆಂದರಿತು 2 ಮಾತಿನಲ್ಲಿ ಮಲ್ಲರೆಂದು ಖ್ಯಾತಿ ಪಡೆದ ಜನಗಳಿರಲು ಯಾತರವನು ಇವನು ಎನ್ನದಿರು ದೂತ ಪ್ರಸನ್ನನೇ ಸೋತು ವಿವಿಧ ಕಾರ್ಯಗಳಲಿ ಆತುರದಲಿ ನಿನ್ನ ಪರಮ ಪ್ರೀತಿಯ ಪಡೆಯುವುದೇ ದೊಡ್ಡ ನೀತಿಯೆಂದು ಅರಿತು ಸತತ 3
--------------
ವಿದ್ಯಾಪ್ರಸನ್ನತೀರ್ಥರು
ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ 1 ಮರೆಯಬೇಡವೊ ಸಿರಿಯ ಅರಸನೆ ಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ 2 ರಂಗ ರಮಣನೆ ಭುಜಂಗಶಯನನೆ ಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ 3 ಮಾರಜನಕನೆ ಉದಾರಚರಿತನೆ ಭಾರವೇನೊ ದೀನಜನರುದ್ಧಾರ ಮಾಡುವುದು 4 ನಾಮಗಿರೀಶನೆ ನಿಸ್ಸೀಮ ಮಹಿಮನೆ ಪ್ರೇಮವಿಟ್ಟು ಪಾಲಿಸೆನ್ನ ಸ್ವಾಮಿ ನರಹರೆ 5
--------------
ವಿದ್ಯಾರತ್ನಾಕರತೀರ್ಥರು