ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮನದ ಡೊಂಕ ತಿದ್ದಯ್ಯಾ ಗೋಪಾಲಕೃಷ್ಣ ಪ ಎನ್ನ ಮನದ ಡೊಂಕ ತಿದ್ದಿ ಮುನ್ನ ಮನ್ನಿಸದಿ[ರೆ]ತಿದ್ದಿಬನ್ನ ಪಡಲಾರೆ ಭವಾಬ್ಧಿಯನ್ನೆ ದಾಟಿಸೊ ಅಪಾರಮಹಿಮ ಅ.ಪ. ಉದಯವಾದರೆ ಊಟದ ಚಿಂತೆ ಉಂಡಮೇಲೆ ಭೋಗದ ಚಿಂತೆದರಮೇಲೆ ಹದಿನಾಲ್ಕು ಲೋಕಂಗಳನೆ ಆಳ್ವ ಚಿಂತೆ 1 ಸುಖವು ಬಂದರೆ ನಾನೆ ಸಮರ್ಥ ದುಃಖವು ಬಂದರೆ ಹರಿಯುಮಾಡ್ದರೊಕ್ಕ ಬಂದರೆ ನಾನೆ ಧನಿಕ ಸಿಕ್ಕಿಬಿದ್ದರೆ ಹರಿಯ ವ್ಯಾಪಾರ 2 ತಿಳಿದು ತಿಳಿದು ಪತಂಗದ್ಹುಳವು ಕಿಚ್ಚಿನಲ್ಲಿ ಬೀಳೋಹಾಂಗೆಕಾಲಕಳೆದೆ ಮೂಕನಂತೆ ಮುದ್ದು ಹಯವದನನೆ 3
--------------
ವಾದಿರಾಜ
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು