ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ |ಭೃಕುಟಿ ಮಧ್ಯದಲಿ ಪ್ರಕಟವಾಗಿದೆ ಉದಯವಾಗಿ ರೂಪ ಪ ನಾಸಿಕಾಗ್ರದಲಿ ವಾಸವಾಗಿದೆ ಬೀಸುವ ಗಾಳಿಗೆ ಭಿನ್ನವಿಲ್ಲದೆ |ಏಸೇಸು ದಿನ ತಪವ ಮಾಡಿದರೂ ಯೋ- ಗೇಶ್ವರ ಮುನಿಗೆ ದುರ್ಲಭ 1 ಝೇಂಕರಿಸುವದಾ ನಾದ ನೆತ್ತಿಯೊಳು ಓಂಕಾರ ಶಬ್ದವು ಶೂನ್ಯವಾಗದೆ |ಶಂಕರ ಸ್ವರೂಪ ತಿಳಿದ ದತ್ತನ ಬೀಜಮಂತ್ರ ಅಂಕುರದಿಂದೆ2
--------------
ಭೀಮಾಶಂಕರ
ಇಂದಿನ ದಿನವೇ ಶುಭದಿನವು | ಇಂದಿರೇಶನ ಕೀರ್ತಿಯ ಕೊಂಡಾಡಿದೆವೆಂದು ಪ ಮುನ್ನ ಮಾಡಿದ ಜನ್ಮಾಂತರದ ದುಷ್ಕ್ರತವೆಂಬ | ಘನ್ನ ಕೆಸರಸೋಸಿ ಹೃದಯ ಶುದ್ದಾಯಿತೆಂದು 1 ತರಣಿ ಉದಯವಾಗಿ | ಪರಿಹಾರಾಯಿತು ಅಜ್ಞಾನವೆಂಬ ಕತ್ತಲೆಯಿಂದು 2 ಕಂದ ನೊಡೆಯ ತನ್ನ ಸ್ಮರಣೆ ಕೊಟ್ಟನೆಂದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು