ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ಸಿದ್ಧಗುರುತ್ರಿಪುರಾಂತಕ
ಹ್ಯಾಗೆ ಸದ್ಗತಿ ಆಗುವುದೆನಗೆ ಯೋಗಿಗಳ ಒಡೆಯ ಹರಿಯೆ ಈಗಾಗಲೆ ತಿಳಿಸಿ ಸಾಗುವಂತೆ ಸಾಧನ ಬ್ಯಾಗ ಮಾಡಿಕೊ ನಾಗತಲ್ಪನೆ ಪ ಮೇಲಧಿಕಾರಿಯು ಕೊಂಡಾಡಲು ಕುಲ ಉದ್ಧಾರವೆಂದು ಹಿಗ್ಗುವೆ ಕಲುಷ ಕಂಡಾಗÀಲು ಅಳುತ ಧರೆಗೆ ಇಳಿವೆನೊ ನಾನು 1 ಶಿಕ್ಷ ರಕ್ಷ ಸಧ್ಯಕ್ಷ ಲಕ್ಷ್ಮೀಪತಿಯೆಂದರಿಯದೆ ಕುಕ್ಷಿ ಭರಣಕೆ ಯೋಚಿಸುವೆ ಪಕ್ಷಿವಾಹನನಲ್ಲಿ ಲಕ್ಷ್ಯವಿಲ್ಲದೆ ಬಕ ಪಕ್ಷಿಯಂತೆ ಧೇನಿಸುವೆ ನಾ 2 ನಷ್ಟ ದೇಹ ಪುಷ್ಟಿಗಾಗಿ ದುಷ್ಟರಿಗೆ ಎನ್ನ ಕಷ್ಟ ಪೇಳಲು ದೃಷ್ಟಿಸಿ ನೋಡಿದರೆ ಬೆಟ್ಟ ಮೇಲಿದ್ದಂತೆ ಕಂ ಗೆಟ್ಟು ಮೊರೆಯಿಸುವೆ 3 ಒಂದು ಲಾಭವಿಲ್ಲದೆ ಮಂದಿ ನೆರಹಿ ಸಂದಿಗೊಂದ್ಹರಿದ್ಯಾಡಿ ಸಂದು ಹೋಯಿತÀು ಹೊತ್ತಯೆಂದು ಆಸ್ಥಾನಕೆ ಮಿಂದು ಬ್ಯಾಗನ್ನ ತಿಂದೋಡುವೆನೊ 4 ಮಾನನೀರ ಚೆಲ್ವಿಕೆಗೆ ಮನಸೋತು ನೆನೆನೆನೆದು ಬೆಂಡಾಗುವೆ ಹೀನರಾ ಕೂಡಿಕೊಂಡು ದೀನರಾ ಬಾಯಿಬಡಿದು ಧನ ಸಾಧಿಸಿದ್ದು ಕೊನೆಗೆ ಸಾಯುವ ನರಗೆ 5 ಉದಯದಲೆದ್ದು ನದಿಗೆ ಪೋಗಿ ನಾ ಮುದದಿಂದ ಮಿಂದು ಉದಯಾರ್ಕಗಘ್ಯ ಒದಗೀಸಿ ಕೊಡದ ಮದಡನಾಗಿದ್ದವಗೆ 6 ವರ ಸುದರ್ಶನ ಗ್ರಂಥಗಳ ಗುರುಗಳಲ್ಲಿ ನಿರುತ ಪಠಿಸಲಿಲ್ಲ ಭಾಗವತ ಪುರಾಣಗಳು ಪರಮ ಭಕ್ತೀಲಿ ಕೇಳಲಿಲ್ಲ 7 ಭಾವ ಶುದ್ಧಿಯಿಂದ ದೇವತಾರ್ಚನೆ ಆವ ಕಾಲಕು ಮಾಡಲಿಲ್ಲ ಪವನಸಖ ಮಖದೊಳಾಹುತಿನಿತ್ತು ಕವಿಗಳಿಗನ್ನ ಕೊಟ್ಟವನಲ್ಲ 8 ಧ್ಯಾನ ಮಾಡುವುದನ್ನು ಮೌನಿಗಳ ಕೇಳಿ ಮನನ ಮಾಡಲಿಲ್ಲ ಪಾದ ಕನಸಿನಲಾದರೂ ಒಮ್ಮೆ ನೋಡಲಿಲ್ಲ 9
--------------
ವಿಜಯ ರಾಮಚಂದ್ರವಿಠಲ
ಇದು ಏನೋ ನಿನ್ನ ಗುಡೀ ಗುಡೀ |ಒಳಗಿನ ಕಸವನು ಹೊಡೀ ಹೊಡೀ ಪ ಹಗಲಿರುಳೊ ನೀ ಬದುಕ ಮಾಡಿ |ಏನು ಗಳಿಸಿದ್ಯೋ ಹುಡೀ ಹುಡೀ ||ಜಗದೊಳು ದೇವನ ತಿಳಿಯಲೊಲ್ಲಿ |ತಿಳಿದೀತೊ ಅಲ್ಲಿಗೆ ನಡೀ ನಡೀ 1 ಹಸಿದು ಬಂದು ನೀ ವಸ್ತಿಯಾಗಿಳಿದರೆ |ಮತ್ತೇನಾರ ಕೊಡೂ ಕೊಡೂ ||ಅಸ್ತಮಯಾದಿತು ಉದಯದಲೆದ್ದು |ತಪ್ಪದೆ ಇಲ್ಲೆಂಬೊ ನುಡೀ ನುಡೀ 2 ನಾಕು ಕಾಯದೊಳು ಎರಡಿಟ್ಟನು ನೀ |ಎರಡನೆ ದೇವರಿಗೊಡೀ ಒಡೀ ||ಲೋಕಪಾಲಕ ಭವತಾರಕನಂಘ್ರಿಯ |ಈ ಕಾಯದಿ ದಯಾ ಪಡೀ ಪಡೀ 3
--------------
ಭಾವತರಕರು
ಉದಯದಲೆದ್ದು ಶ್ರೀಹರಿಯ ನಾಮಂಗಳನು | ವದನದಿಂದುಚ್ಚರಿಸಿ ಪಾಡುವ ನರರು ದುರಿ | ಮುದದಿಸದಮಲಾನಂದ ಸುಖವ ಪ ಕೃಷ್ಣ ಕಮಲೇಶ ಕಂಜಾಕ್ಷ ಕರುಣಾಬ್ಧಿ ಶ್ರೀ | ವಿಷ್ಣು ವಿರಂಚಿಪಿತ ವಿಮಲ ವಿಶ್ವೇಶ ಭ್ರಾ | ತುಷ್ಣಿಕರ ಕೋಟಿತೇಜಾ || ವೃಷ್ಣಿ ಕುಲತಿಲಕ ವೃಂದಾವನ ವಿಹಾರಿ ಗೃಹ | ಜಿಷ್ಣು ಸುರಸೇವೆ ಸಜ್ಜನ ಪ್ರಿಯ ಸರ್ವೇಶನ | ಅಭಿಮಾನಿ ಎಂದು1 ಪರಮ ಪುರುಷೋತ್ತಮ ಪರಂಧಾಮ ಪರಬ್ರಹ್ಮ | ಪರಮಾತ್ಮ ಪರಂಜ್ಯೋತಿ ಪರತರಾನಂದ ಗುಣ ಪರಿಪೂರ್ಣ | ಪದ್ಮನಾಭ | ಮುರಮಥನ ಮದನಮೋಹನ ಮುರಲಿಲೋಲ ಮಧು | ಹರಹಲಾಯುಧ ಹಯವದನ ಸ್ಮರಹರಾರ್ಚಿತ | ಚರಣ ಸಚರಾಚರ ವ್ಯಾಪ್ತ ಚಿದ್ವನರೂಪ ಚಾರುಚರಿತ ಚಲರದಹಿತನೆಂದು 2 ಕಾಮಜಿತರೂಪ ಕೌಸ್ತುಭಧಾರಿ ತ್ರಿ | ಧಾಮ ತ್ರಿವಿಕ್ರಮ ತ್ರಿಕಾಲಙ್ಞ ತ್ರಿಜಗನುತ | ಹರಣ || ಶುಭ | ನಾಮ ನಾರದ ಪ್ರಿಯ ನಾರಾಯಣ ಜನಕ | ಕಾಮಪೂರಿತನೆಂದ 3 ಅನಿರುದ್ಧ ಧೋ ಕ್ಷಜಾಕ್ಷರತೀತಕ್ಷಯ ಗದಾಂ | ಪವನಜ ಪ್ರಿಯ ನರಕಾಂತಕಾ | ಗಜಗತಿಪ್ರದ ಗರುಡಗಮನ ಗೋವಿಂದ ಗೊ | ವ್ರಜಪಾಲ ವನಮಾಲಿ ವಸುದೇವಸುತ ಶಾರಂಗಿ | ಕುಜಹರ ಕಿರೀಟಧರ ಜಂಭಾರಿಧೃತ ಚತುರ್ಭುಜ ಭುವನ ಭರಿತನೆಂದು4 ಶ್ರೀರಂಗ ಮುನಿಸಂಗ ಸುರತುಂಗ ಗೋಪಾಂಗ | ನಾರಿಮಣಿ ನೀಲಾಂಗ ಕಾಳಿಂಗ ಮದಭಂಗ | ಸಹಕಾರನೆಂದು | ನೂರೆಂಟು ನಾಮಾವಳಿಯ ರತ್ನಮಾಲಿಕೆಯ | ನಾರುಧರಿಸುವರವರ ಇಷ್ಟಾರ್ಥಗಳ ಕೊಟ್ಟು | ಸಹಕಾರ ನಿಜಪದವಿತ್ತು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಯ್ಯಾ | ಅಂದುಗೆ ಗೆಜ್ಜೆ | ಝಣ ಝಣ ಝಣ ಝಣ ರವದಿಂದಾ ಪ ಕಡೆಗಣ್ಣು ಹೊಳವನು | ಅಡಿಗಡಿಗೆ ದೋರುತಾ | ಎಡಬಲದೋಳಿಂದೊಲಿದು | ದುಡುದುಡು ದುಡು ನಲಿಯುತಾ 1 ಪದಹತಿಗೆ ಮಯೂರಾ | ವದನ ತಗ್ಗಿಸುವಂತೆ | ಮುದದಿ ಗೆಳೆಯರವೆರಸಿ | ಒದಗಿ ಧಿಗಿಧಿಗಿ ಧಿಗಿಲೆನುತಾ 2 ಅಂದು ಉದಯದಲೆದ್ದು | ಬಂದು ಬೆಣ್ಣೆಯ ಬೇಡೆ | ಕಂದಾ ನೀ ಕುಣಿಯೆನಲು | ನಿಂದು ತೋರಿದ ಭಾವದಿಂದ 3 ಬಿರಮುಗುಳ ನಗುತಾ | ಪೆರೆ ನೊಸಲೊಳು ಮೆರೆವಾ | ಕರ್ಣ ಕುಂಡಲಾ | ಭರದಿಂದಾ ಒಲಿಯುತಾ 4 ಗುರು ಮಹಿಪತಿ ಸ್ವಾಮಿ | ಹಾರೈಸುವಾ ನಯನಕ | ಹರುಷದಿ ತೃಪ್ತಿಗೈವಾ | ಕರುಣಾ ಸಾಕಾರದಿಂದಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಪ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ 1 ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ 2 ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ 3 ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ ಭಾವದಲಿ ಗುಣಿಸದೆ ನಿಕ್ಕರಿಸೀ ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ 4 ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ ಅನ್ಯಗಂಧಗಳಿಗೆ ಇಂಬುಗೊಡದೇ ಧನ್ಯರಾಗಿದ್ದವರ ಕರುಣ ಸಂಪಾದಿಸಿ ಪುಣ್ಯಭೂಮಿಯನು ಹಾರೈಸುವ ನಿತ್ಯಾ 5 ಅವೈಷ್ಣವನು ಹರಿ ಎಂದು ನುಡಿವಡೆ ತಾನು ಅವನಂತೆ ಸ್ಮರಿಸದೇ ಸುಮ್ಮನಿದ್ದೂ ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ ನಿತ್ಯ 6 ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು ರಾಶೆಯನು ಮಾಡಿ ನರರಾಶ್ರೈಸದೆ ಏಸೇಸು ವಿಪತ್ತು ಗುಣ ಮೇಲಟ್ಟಿದರು ನಿತ್ಯ 7 ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ 8 ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು ಮುಕುತಿ ನರಕವೆಂಬ ಯೋಚನ್ಯಾಕೆ ಸಿರಿ ವಿಠ್ಠಲನಲ್ಲಿ ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ 9
--------------
ವಿಜಯದಾಸ
ಮನವೇ ನೀ ಬರಿದೆಜನ್ಮ ವ್ಯರ್ಥಗಳೆವರೆ ಬಂಗಾರದಥಾ ಪ ಮನವೇ ನೀ ಬರಿದೇ ಜನ್ಮ ವ್ಯರ್ಥಗಳೆವರೆ ಬಂಗಾರದಂಥಾ | ಮರೆವ ದಿನಗಳ ಜರಿವರೇ ನರದೇಹವಿದು ಅ.ಪ ದೊರೆಯದಿನ್ನು ಮತ್ತ ತರುವರ ಏನಾದರೇನೀ | ಹರಿಯ ಸ್ಮರಣೆಯ ಬಿಡುವರೇ | ಅರಿವ ಪಂಥ ವಿಡಿದು ಜನ್ಮ ಮರಣ ಬಲಿಯಾ ತಪ್ಪಿಸದೇ | ತಿಗಳಿ ಹುಳುವಿನಂತೆ ಸಿಕ್ಕ ತನ್ನ ತಾ ಮರೆವರೇ 1 ಕೇಳೆಲೋ ನೀ ಪೊಡವಿಯೊಳಗಿದ್ದ ಸಾಯಸಾ | ಉದಯದಲೆದ್ದು ಬಿಡುವದೆ ಮಲಮೂತ್ರ ಕೆಲಸಾ | ಮಧ್ಯಾನ್ಹದಲಿ ವಡಲ ತುಂಬುವ ಕೆಲಸಾ | ನಿಶಿಕಾಲದಲ್ಲಿ ವಡನೆ ಮಲಗುವ ಕೆಲಸಾ | ಪಡೆದ ತಾಯಿಯವ್ವನೆಂಬ ದೃಢವನವಾ ಕಡಿಯಲು | ಕೊಡಲಿಯಂತೆ ಹುಟ್ಟಿ ಬಂದೆ ಮಡದಿ ಮಕ್ಕಳುದ್ದೇಶಾ 2 ಮನವೇ ನೀ ಹಿಂದಿನವ ಗುಣ ಜರಿದು ಸದ್ಭಾವ ಭಕು | ತಿಂದ ನಡುವಳಿ ಬಿರಿದು | ಸದ್ಗುರುವೀನ | ದ್ವಂದ್ವ ಪಾದಗಳ ವಿಡಿದು | ಅವರ ದಯ | ದಿಂದ ಗತಿ ಮುಕ್ತಿ ಪಡೆದು | ಇಂದು ಧನ್ಯನಾಗೆಲೋ ಮುಕುಂದ ನಾಮ ನೆನೆದು ನೀ | ತಂದೆ ಮಹಿಪತಿ ನಿಜನಂದನುಸುರಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ನರಸಿಂಹ