ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯಕಾಲದೊಳೆದ್ದು ಗೋಪಿಯು ದಧಿಯ ಮಥಿಸುವ ಎಂಬ ಸಮಯದಿ ಉದರಗಣ್ಣನು ಎದ್ದು ತೊಟ್ಟಿಲೊಳ್ ತೊದಲು ನುಡಿಗಳಿಂ ಕರೆದ ತಾಯಿಯ 1 ನುಡಿಯ ಲಾಲಿಸಿ ನಳಿನನೇತ್ರನು ಕರೆದ ಹಾಲನು ಕೊಡುವೆನೆಂದರೆ ಕೊಡುವೆನೆಂದರೆ ಕಣ್ಣಮುಚ್ಚನು ಒಡನೆ ಮಲಗುವ ಮಲಗದೇಳುವ 2 ನಿದ್ರೆ ತೀರದೆ ನೀ ಎದ್ದ ಕಾರಣ ಬುದ್ಧಿ ಸಾಲದು ಮುದ್ದು ಮಗುವಿಗೆ ಒದ್ದು ಕೆಲಸವ ತಿದ್ದಿ ಉನ್ಮತ ಅಮ್ಮ ಬಾರೆಲೆ ಎನ್ನಗಲಬೇಡವೆ 3 ಗುಮ್ಮ ಬರುತದೆ ಗುಸುಗುಸೆನುತದೆ ಶ್ರೀದವಿಠಲನಾ ಶ್ರೀಲತಾಂಗಿಯು ಮೋದಪಡಿಸುವ ಮಾನವೀಯಳೇ ವೇದಗೋಚರ ನೀ ಏಳಬೇಡವೋ ಪಾದಕೆರಗುವೆ ಪವಡಿಸೆಂದಳು 4
--------------
ಶ್ರೀದವಿಠಲರು
ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ಪತಿಯೆ ಪರದೇವತೆಯು ಸತಿಯರಿಗೆ ಜಗದಿ ಮತಿಯರಿತು ಭಜಿಸಿ ಪರಗತಿಯ ಸಾರುವುದು ಪ. ಉದಯಕಾಲದೊಳೆದ್ದು ಸದಮಲ ಶುಧ್ಧಿಯಲಿ ಪಾದ ಮನದಿ ಸ್ಮರಿಸುತಲಿ ಪತಿ ಹೃದಯದಲಿರುವನು ಎಂದು ಪತಿ ಪದಕರ್ಪಿಸುವುದು 1 ಆದರದಲಿ ಪತಿಯ ಪಾದವನೆ ತೊಳೆದು ಆ ಸ್ವಾದೋದಕವ ಪಾನಗೈದು ಸುಖಿಸುವುದು ವೇದಗೋಚರ ಹರಿಯೆ ನೀ ದಯವ ಮಾಡೆಂದು ಆದರದಿ ಪತಿಯ ಮನವರಿತು ನುಡಿಯುವುದು 2 ಸ್ವಚ್ಛದಲ್ಲಿ ಮನದ ತುಚ್ಛ ವಿಷಯವ ತೊರೆದು ಇಚ್ಛೆಯಿಂದಲಿ ಹರಿಯ ನಾಮಗಳ ಭಜಿಸಿ ಅಚ್ಯುತಾನಂತ ಗೋವಿಂದನೆನ್ನುತ ಸತತ ಮಚ್ಚಾದ್ಯನೇಕ ಅವತಾರ ನೆನೆಯುವುದು 3 ಪತಿಯೆ ಹರಿಯೆಂದರಿತು ಪತಿಯೆ ಗುರುವೆಂದರಿತು ಪತಿಯ ಪೂಜೆಯನು ಅತಿ ಹಿತದಿ ಗೈಯ್ಯುವುದು ಪತಿಯಂತರ್ಗತನೆ ಎನ್ನತಿಶಯದಿ ಪೊರೆಯೆಂದು ಪತಿವ್ರತವ ನಡೆಸುತಲಿ ಹಿತದಿ ಬಾಳುವುದು 4 ಪತಿಯ ನಿಂದಕಳಿಗೆ ಗತಿಯಿಲ್ಲ ಪರದಲ್ಲಿ ಅತಿ ಬಾಧೆಪಡಿಸುವನು ಯಮನು ನಿರ್ದಯದಿ ಪತಿವ್ರತವ ಸಾಧಿಸುವ ಸತಿಯರಿಗೆ ಅನವರತ ಚ್ಯುತರಹಿತ ಪದವೀವ ಗೋಪಾಲಕೃಷ್ಣವಿಠಲ5
--------------
ಅಂಬಾಬಾಯಿ