ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಿನ್ನಪಾದ ಸನ್ನಿಧಿಯ ಘನ್ನ ದರುಶನದಿಂದಲಿಪ ಮುನ್ನ ದುರಿತಗಳೆಲ್ಲವು ಛಿನ್ನಛಿನ್ನವುಮಾಡಿ ಬನ್ನಬಡಿಸದೆ ಎಮ್ಮ ಸಲಹುವಸ್ವಾಮಿ ಅ.ಪ ಸುಮನಸರೊಡೆಯ ಕಾಲನಾಮಕನಾಗಿಪ್ಪ ಮೋದ ನಾಮ ವತ್ಸರದಿ ವಿಮ¯ ಚೈತ್ರಕೃಷ್ಣಪಕ್ಷದಶಮಿ ಸೌಮ್ಯವಾಸರದಿ ದ್ಯುಮಣಿ ಉದಯಕಾಲದಲಿ ಮಮಕುಲಸ್ವಾಮಿಯೆ ಎನ್ನ ವಂಶಜಾಪ್ತರ ಅಮಿತಶ್ರಮ ಪರಿಹರಿಸಿ ಈಗ ಶ್ರೀಮನೋಹರ ನಿನ್ನ ವಿಶ್ವರೂಪವ ತೋರ್ದೆ ಪ್ರೇಮ ಇಂದಿಗೆ ಆಯಿತೆ ಅಮಿತಜನ ಬಂಧು 1 ನಿನ್ನ ದರುಶನವೆಂದಿಗಂದಿಗಾಗಲಿ ಎಂದು ನಿನ್ನ ಧ್ಯಾನವನೆ ಮಾಡಲು ಸನ್ನುತಾಂಗನೆ ನೀನೆ ಘನ್ನ ಕರುಣವು ಮಾಡಿ ಎನ್ನ ಯತ್ನವು ಇಲ್ಲದೆ ನಿನ್ನ ದರುಶನಕ್ಕಾಗಿ ಅನ್ಯರಿಂದ ಪ್ರೇರಿಸಿ ಎನ್ನಲ್ಲಿ ಮನವು ಪುಟ್ಟಿಸಿದೆ ಪನ್ನಗಾಚಲನಿಲಯ ನಿನ್ನ ಮಹಿಮೆ ಎಂತುಂಟೋ ಎನ್ನನಿಲ್ಲಿಗೆ ತಂದು ಘನ್ನ ದರುಶನವಿತ್ತೆ 2 ಪಂಕಜೋದ್ಭವನಯ್ಯ ಮಂಕುಕವಿಸಿದೆ ಪಯಣ ಶಂಕೆಯ ಪರಿಹರಿಸಿ ಸಂಕಟಹರಿಸಿ ನಿನ್ನ ಕಿಂಕರರೊಳು ಸೇರಿಸಿ ಬಿಂಕದಲಿ ಗಿರಿಯನೇರಿಸಿ ಪಂಕಜನಾಭ ಮುಕುಂದ ಗೋವಿಂದ ಶಂಕರನುತಪೂಜಿತ ಶಂಖತೂರ್ಯಾದಿ ವಾದ್ಯಗಳಿಂದಲಿ ಶ್ರೀ ವೇಂಕಟೇಶ ನಿನ್ನ ನೋಡಿದೆ ಬಿಡದೇ 3
--------------
ಉರಗಾದ್ರಿವಾಸವಿಠಲದಾಸರು
ಕಾಲಕಾಲದಲಿ ಕೇಶವನೆನ್ನಿರೊ ಬಾಲ ಮುಕುಂದ ಮಾಧವನೆನ್ನಿರೊ ಧ್ರುವ ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾ¨sನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾ ಕಾಲದಲಿ ಶ್ರೀ ಹರಿಯೆನ್ನಿರೊ 1 ಏಳುತ ಮಚ್ಛಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರನೆನ್ನಿ ಕೇಳುತ ಕೃಷ್ಣಾವತಾರನೆನ್ನಿ 2 ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಯಣನೆನ್ನಿರೊ ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ3 ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ ಪಾಡುತ ಪರಮಾತ್ಮನೆನ್ನಿರೊ 4 ಉದ್ಯೋಗದಲಿ ಸಹಕಾರನಿರುದ್ದನೆನ್ನಿ ಉದರ ಕಾಯದಲಿ ಉಪೇಂದ್ರನೆನ್ನಿ ಮೇದಿನೊಯೊಳು ಹರಿಮಧುಸೂದನನೆನ್ನಿ ಆದಿ ಅಂತಿಮ ಅಧೋಕ್ಷಜನೆನ್ನಿರೊ 5 ಹೃದಯಕಮಲದೊಳು ಹೃಷೀಕೇಶನು ಎನ್ನಿ ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ ಅದಿಅನಾದಿ ಗೋವಿಂದನೆನ್ನಿ 6 ಅನುದಿನ ಮನದೊಳು ಘನಮಹಿಮನು ಎನ್ನಿ ತನುವಿನೊಳು ಪುರುಷೋತ್ತಮ ನಾನೆನ್ನಿ ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ ಘನಭೂಷಣದಿ ಸಂಕರುಷಣನೆನ್ನಿ 7 ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ ಪತಿತಪಾವನ ಪರಬ್ರಹ್ಮನೆನ್ನಿ ಭಕ್ತವತ್ಸಲ ನರಸಿಂಹಾವತಾರನೆನ್ನಿ ಮುಕ್ತಿದಾಯಕ ದೇವೋತ್ತಮನೆನ್ನಿರೊ 8 ಪಾವನಮೂರುತಿ ಪರಶುರಾಮನೆನ್ನಿ ಜೀವಸಂಜೀವ ಶ್ರೀ ರಾಮನೆನ್ನಿ ಭವಭಯನಾಶ ಕಲ್ಕ್ಯಾವತಾರನೆನ್ನಿ ಮಹಿಪತಿಗುರು ವಾಸುದೇವನೆನ್ನಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು