ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಇಂದೀವರಾಕ್ಷಿ- ಸುಂದರಿ ಅರ- ವಿಂದ ಮಂದಿರೆ ಪೂರ್ಣೆ | ಪ ಇಂದುವದನೆ ಅಮರೇಂದ್ರ ವಂದಿತೆ | ಸಿಂಧುಸುತೆ ಆನಂದ ಫಲದೆ ಅಪ ರಾರರಮಣನ ಸೋಲಿಪ ನಖದಕಾಂತಿ | ಚಾರು ಚರಣತಳ ವಾರಿಜಾಂಕುಶ ಧ್ವಜ | ವಾರಣ ಕನಕ ಮಂಗಳರೇಖೆವೊಪ್ಪೆ | ನೂ- ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ | ಕಟಿ ನಾಭಿ ಉದರ ತ್ರಿವಳಿ | ಧಾರ ಶೋಭನವಾದ ಹೊನ್ನುಡಿ | ಧಾರ ಕಿಂಕಿಣಿ ತೋರಮುತ್ತಿನ- ಹಾರ ಉರವಿಸ್ತಾರ ಗುಣವಂತೆ 1 ಕಂಬು - ಗ್ರೀವ ಸರಿಗೆ ದಿವ್ಯಚಂದನ ಲೇಪಿಸಿ | ಕಂಚುಕ ಹಸ್ತಕಡಗ ಮುದ್ರೆ ಪ್ರವಳಮಣಿಯು ಕೇಯೂರ ದಂಡೆಯ ಸರ | ಬೇವಿನೆಸಳಂತೆ ಪುಬ್ಬು ಢಾಳಿಪ | ತಾವರೆಯ ಫಣೆಯೂ ಸಂಪಿಗೆ | ನಾಸಿಕ ವೇಣಿ | ಹಾವಿನಂದದಿ ಒಪ್ಪುತಿರೆ ದೇವಿ 2 ವಾಲೆಮೂಗುತಿ ಹೊನ್ನಹೂವು ತೂಗುವ ತುಂಬು | ಕದಪು ಮುಂಗೂದಲು | ಮೇಲೆ ರ್ಯಾಕಟೆ ಚೌರಿ ಮುಡಿದ ಕುಸುಮವು | ಸಾಲು ಮುತ್ತಿನ ಜಾಳಿಗೆ ಗೊಂಡ್ಯ ಶಿರದಲ್ಲಿ | ಪಾಲ ಸಾಗರ ಶಾಯಿ ವಿಜಯವಿ- ಠ್ಠಲರೇಯನ ಉತ್ಸಾಹದಲಿ | ತೋಳಿನಲ್ಲಿ ಬಿಗಿದಪ್ಪಿ ಪವಳಿಪ | ಶ್ರೀ ಲಕುಮಿ ತ್ರೈಲೋಕ್ಯ ಮಾತೆ 3
--------------
ವಿಜಯದಾಸ
ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ | ವಾಸುದೇವ ಮುನಿಯಿದ್ದ ಕಾರಣ ಪ ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು | ತೇಜದಲಿ ನೋಡೆ ಸೂರ್ಯನದೆ ಸೋಲು || ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು | ಭೋಜನದಲಿ ನೋಡೆ ಅಮೃತಕೆ ಮೇಲು 1 ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ | ಸತ್ಸಂಗತಿಯ ನೋಡೆ ಬುಧ ಸಂಗತಿ || ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ | ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ 2 ಓಲಗದಲಿ ನೋಡೆ ಸತ್ಯಲೋಕಕೆ ಸಮ | ಪೇಳುವ ಕೀರ್ತನೆ ನೋಡು ವೇದಸ್ತೋಮ || ಬಾಲ ಉಡುಪಿಯ ಕೃಷ್ಣ ವಿಜಯವಿಠ್ಠಲರೇಯನ | ತಿಳಿದ ಮಾನವಗೆ ಫಲವು ನಿಷ್ಕಾಮಾ3
--------------
ವಿಜಯದಾಸ
ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲಏನು ಹೇಳಿದರೇನು ವಿಷಯಮೆಚ್ಚಿದವಗೆ ಪ. ಕಂಡಕಂಡವರ ಅನ್ನಕೆ ಸಿಲುಕಿ ಅನುಗಾಲಭಂಡತನದಲಿ ಕಾಲವ ಕಳೆಯುತತಂಡ ತಂಡದಿ ಬಾಹ ಔತಣಕೆ ಮೈಯ್ಯುಬ್ಬಿಉಂಡು ಎನಗಿಂದಧಿಕ ಯೋಗ್ಯನಿಲ್ಲವೆಂದು 1 ಪರ್ವಕಾಲ ಪಿತೃದಿವ್ಸ ಗುರುಗÀಳ ಪುಣ್ಯದಿನಸರ್ವಕರ್ಮವ ತ್ಯಜಿಸಿ ಅತಿಥಿಗೀಯದೆಪರರ ಅನ್ನವ ಬಿಡದೆ ಉತ್ಸಾಹದಲಿ ಪೋಗಿನಲಿನಲಿದುಂಡು ಸ್ತೋತ್ರವ ಮಾಡಿ ದಿನಕಳೆವೆ 2 ಅನ್ಯರೊಡವೆಯು ತನಗೆ ಬಂದರೆ ಸಂತೋಷತನ್ನೊಡವೆ ಒಬ್ಬರಿಗೆ ಕೊಡಲು ಕ್ಲೇಶಉನ್ಮತ್ತನಾಗಿ ಉದರವ ಪೊರೆವ ಈ ದೋಷಮನ್ನಿಸಿ ದಯಮಾಡಿ ಸಲಹೋ ಹಯವದನ3
--------------
ವಾದಿರಾಜ
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು