ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ಪ. ಎಂಥಾದ್ದೊ ತಿರುಪತಿ ಕ್ಷೇತ್ರ | ಸ ತ್ಪಾಂಥರಿಗಿಲ್ಲಿ ಸುಗಾತ್ರ | ಆಹ ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ ಅ.ಪ. ನಾಗಾದ್ರಿಗಿರಿಯ ಮೆಟ್ಟುಗಳು | ಅ ಯೊಗ್ಯರಿಗಿದು ದುರ್ಲಭಗಳು | ಅಲ್ಲಿ ಭಾಗವತರ ಸಮ್ಮೇಳಗಳು | ಶಿರ ಬಾಗಿ ವಂದಿಪರು ಜನರುಗಳು | ಆಹ ಪೋಗುತ ಗಾಳಿಗೋಪುರವ ಕಂಡೆರಗಿ ಮುಂ ದ್ಯಾಗುತ ಸಜ್ಜನ ನೀಗುವರು ದುಃಖ1 ಹರಿಮಂದಿರ ಮಹಾದ್ವಾರ | ಬಹು ಜ ನರು ಕೂಡಿಹರು ವಿಸ್ತಾರ | ಬೀದಿ ನಡೆದು ಪದ್ರಕ್ಷಿಣಾಕಾರ | ಭೂ ವರಹನ ಸ್ವಾಮಿ ಕಾಸಾರ | ಆಹ ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ ದರುಶನಕಾಗಿ ಹಾರೈಸುವ ಜನತತಿ 2 ಸ್ವಾಮಿಪುಷ್ಕರಣಿಯ ಸ್ನಾನ | ಮನ ಕಾನಂದಪ್ರದ ಸುಜ್ಞಾನ | ಭಾನು ತಾನುದಿಸುವನು ಮುಂದಿನ | ಸುಖ ಕೇನೆಂಬೆ ಹರಿಯ ದರ್ಶನ | ಆಹ ನೀನೆ ಗತಿಯೆಂದು ನಂಬಿದವರ ಪೊರೆವ ಭಾನುಪ್ರಕಾಶ ಹಣ ಕಾಣೀಕೆ ಕೈಕೊಂಬ 3 ಗರುಡ ಸ್ಥಂಭವನೆ ಕಾಣುತ್ತ | ಬಾಗಿ ಕರಮುಗಿದು ಒಳದ್ವಾರ ಪೊಗುತ | ವಿಮಾನ ಗಿರಿ ಶ್ರೀನಿವಾಸಗೆರಗುತ್ತ | ಬಂದು ವರ ತೊಟ್ಟಿ ತೀರ್ಥ ಕೊಳ್ಳುತ್ತ | ಆಹಾ ತರತರದ ಕಾಣಿಕೆ ಕೊಪ್ಪರಿಗೆಗೆ ಸುರಿಯುತ್ತ ನಿರುತ ನೀ ಸಲಹೆಂದು ಮೊರೆಯಿಡೆ ಭಕ್ತರು 4 ಗರುಡನ ಎದುರೊಳು ನಿಂದು | ಸ್ವಾಮಿ ಗರುವ ರಹಿತ ತಾ ಬಂದು | ಬಂದ ವರಭಕ್ತರನೆ ಕಾಯ್ವ ಬಿರುದು | ಇಂಥ ಹರಿಗೆ ಅಮೃತೋದಕವೆರೆದು | ಆಹಾ ಜರಿಯ ಪೀತಾಂಬರ ಉಡಿಸಿ ಸರ್ವಾಭರಣ ಹರಿಗೆ ಶೃಂಗರಿಸಿಪ್ಪ ಪರಿಯ ವರ್ಣಿಸಲಳವೆ 5 ಶಿರದಲಿ ಪೊಳೆವ ಕಿರೀಟ | ಕ ಸ್ತೂರಿ ತಿಲಕವು ಸುಲಲಾಟ | ಸುರ ನರರ ಪಾಲಿಪ ವಾರೆ ನೋಟ | ಕರ್ಣದಿ ಕುಂಡಲ ಮಾಟ | ಆಹ ವರ ಸಂಪಿಗೆಯ ಪೋಲ್ವ ನಾಸಿಕದ ಕದಪುಗಳ್ ಮೆರೆಯೆ ಕನ್ನಡಿಯಂತೆ ಮುಗುಳು ನಗೆಯ ಚೆಲ್ವ 6 ಸಿರಿವತ್ಸ ಕೌಸ್ತುಭಹಾರ | ಕಂಠ ಕರಶಂಖ ಚಕ್ರವಪಾರ | ಸುರ ನರರಿಗಭಯ ತೋರ್ಪಧೀರ | ಕರ ದ್ವರವ ಕೊಡುವಂಥ ಉದಾರ | ಆಹ ತರತರದ ಪುಷ್ಪಗಳ್ ನವರತ್ನ ತುಳಸಿಯ ಮೆರೆವೊ ಹಾರಗಳನು ಧರಿಸಿರ್ಪ ಗಂಭೀರ 7 ವಕ್ಷಸ್ಥಳದಲ್ಲಿ ಲಕುಮಿ | ಹರಿ ಅವನಿ | ಜಗ ರಕ್ಷಿಪ ಮಮಕುಲಸ್ವಾಮಿ | ಸರ್ವ ಸಾಕ್ಷಿಯಾಗಿದ್ದು ತಾ ಪ್ರೇಮಿ | ಆಹ ಪಕ್ಷಿವಾಹನ ಸುರಾಧ್ಯಕ್ಷ ಖಳ ಶಿಕ್ಷ ಪಕ್ಷವಹಿಸಿ ಸುರರ ರಕ್ಷಿಪ ಸರ್ವದ 8 ನಡುವಿನ ನಾಭಿ ವಡ್ಯಾಣ | ಮೇಲೆ ಕುಂದಣ | ನೆರೆ ಪಿಡಿದುಟ್ಟ ಪೀತಾಂಬ್ರವರ್ಣ | ಕಾ ಲ್ಕಡಗ ರುಳಿಯು ಗೆಜ್ಜೆ ಪೂರ್ಣ | ಆಹ ಮಡದಿಯರುಭಯದಿ ಪರಿಶೋಭಿಸುತಿರೆ ಪಾದ ದೃಢಭಕ್ತರನೆ ಪೊರೆವ 9 ನೋಟಕತಿ ಚಲುವ ಗಂಭೀರ | ಭಕ್ತ ಕೂಟದಿ ಮೆರೆಯುತಪಾರ | ಉತ್ಸ ಸಾರ | ಭೋಕ್ತ ಸಾಟಿರಹಿತ ಬರುವ ಧೀರ | ಆಹ ಕೋಟಿದೇವತೆಗಳ ನೋಟದಿಂ ಪೊರೆಯುವ ದಾಟಿಸುವ ಭವನಾಟಕಧರದೇವ 10 ಮಚ್ಛಾದ್ಯನೇಕ ಅವತಾರ | ಬಹು ಇಚ್ಛೆಯಿಂದಲಿ ಭಜಿಸುವರ | ಕಾಯ್ವ ಮೆಚ್ಚುತ ಮನದಲಿ ನಾರ | ಸಿಂಹ ಸ್ವೇಚ್ಛೆÉ್ಛಯಿಂ ಮೆರೆವ ಜಗತ್ಸಾರ | ಆಹ ತುಚ್ಛಕರು ವಸನ ಬಿಚ್ಚಿ ಸೆಳೆಯುತಿರೆ ಇಚ್ಛೆಯರಿತು ಲಲನೆ ರಕ್ಷಿಸೆನಲು ಪೊರೆದ 11 ಎಲ್ಲೆಲ್ಲಿ ನೋಡಲು ಭಕ್ತ | ಜನ ರಲ್ಲಲ್ಲಿ ನೆರೆಯುತ ಮುಕ್ತಾ | ಧೀಶ ನಲ್ಲದಿನ್ನಿಲ್ಲೆಂದು ಸ್ತುತಿಸುತ್ತ | ಶ್ರೀಶ ಇಲ್ಲೆ ಬಾರೆಂದು ಕರೆಯುತ್ತ | ಆಹ ಸೊಲ್ಲು ಲಾಲಿಸೊ ಎನಲು ಬಲ್ಲಿದ ಭಕ್ತರ ಸೊಲ್ಲಿಗೆ ಒಲಿಯುವ 12 ಬುತ್ತಿ ಪೊಂಗಲು ಮಾರುವರು | ಜನ ರರ್ಥಿಯಿಂದದನು ಕೊಂಬುವರು | ಗೀತ ನೃತ್ಯ ವಾದ್ಯಗಳಿಂ ಕುಣಿಯುವರು | ಅನ್ನ ಅರ್ಥಿಯಿಂ ದಾನ ಮಾಡುವರು | ಆಹ ಎತ್ತ ನೋಡಲು ಮನಕತ್ಯಂತ ಆನಂದ ನಿತ್ಯ ಉತ್ಸವಗಳು ಸತ್ಯಾತ್ಮ ಕೈಗೊಂಬ 13 ಇಂತು ಮೆರೆವೊ ಕ್ಷೇತ್ರ ಘನವು | ನೋಡಿ ನಿಂತು ವರ್ಣಿಸಲಸದಲವು | ಜಗ ದಂತರಾತ್ಮಕನ ವೈಭವವು | ಗುರು ಅಂತರ್ಯಾಮಿ ಶ್ರೀನಿಧಿಯು | ಆಹ ಇಂತು ಬ್ರಹ್ಮೋತ್ಸವ ನಿಂತು ರಥದಿ ಬರುವ ಕಂತುಪಿತ ಶ್ರೀ ಭೂಮಿಕಾಂತೇರ ಒಡಗೂಡಿ14 ಶ್ರೀಪತಿ ಜಲದೊಳಾಡೀದ | ಕೂರ್ಮ ರೂಪದಿಂ ಗಿರಿಯನೆತ್ತಿದ | ಬಹು ಪಾಪಿ ಕನಕಾಕ್ಷನ ಕೊಂದ | ನೃಹರಿ ರೂಪ ವಾಮನ ಭೃಗುಜನಾದ | ಆಹ ಚಾಪಖಂಡನ ಕೃಷ್ಣಚರಿಸಿ ಬತ್ತಲೆ ಕಲ್ಕಿ ಗೋಪಾಲಕೃಷ್ಣವಿಠ್ಠಲನ ಮಹಾಕ್ಷೇತ್ರ15
--------------
ಅಂಬಾಬಾಯಿ
ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ 1 ಸುಜನ ಜನರಂದೂ 2 ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ 3 ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ 4 ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ 5 ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ6 ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ 7 ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ 8 ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ 9
--------------
ಗುರುಗೋವಿಂದವಿಠಲರು
ವಿಶೇಷೆÀ ಸಂದರ್ಭಗಳ ಹಾಡುಗಳು 1. ಶ್ರೀರಂಗ ಮಹಾತ್ಮ್ಯಮ್ (ಶ್ರೀರಂಗದ ವಿವಿಧ ಉತ್ಸವಗಳನ್ನು ಕುರಿತ ಕೀರ್ತನೆಗಳು) 29 ಶರಣು ಶರಣು ಶ್ರೀಪರಮಪುರುಷಗೆ ಶರಣು ವರಲಕ್ಷ್ಮೀದೇವಿಗೆ ಶರಣು ಶಠಕೋಪಾದಿಮುನಿಗಳಿಗೆ ಶರಣು ಅಸ್ಮದ್ಗುರುವಿಗೆ ಪ ಶರಣು ತುರಂಗಮುಖನಿಗೆ ಶರಣು ಹಂಸಾವತಾರಗೆ ಮತ್ಸ್ಯ ಕೂರ್ಮ ವರಾಹಗೆ ಶರಣು ನರಸಿಂಹರೂಪಿಗೆ 1 ಶರಣು ವಾಮನ ಭಾರ್ಗವರಾಮಗೆ ಶರಣು ರಾಮ ಬಲರಾಮಗೆ ಶರಣು ಶ್ರೀಕೃಷ್ಣ ಕಲ್ಕಿರೂಪಗೆ ಶರಣು ಕರುಣಾಳು ರಂಗಗೆ* 2
--------------
ಯದುಗಿರಿಯಮ್ಮ
ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ ಉದಿಸಿದ ಶ್ರೀನಿವಾಸಾರ್ಯರೆಂಬ ಪ್ರಚಲಿತ ನಾಮದ ದಾಸಾರ್ಯರ ಚರಿತೆ ಗುರುಗಳ ದಯದಿಂದ ಅರಿತಷ್ಟು ಪೇಳುವೆ ಬುಧ ಜನರು ನಿಷ್ಕಪಟ ಭಾವದಿಂದಲಿ ಕೇಳಿ ಸಿರಿಗುರುತಂದೆವರದಗೋಪಾಲವಿಠ್ಠಲನ ಭಕ್ತರೊಳಗಿವರೊಬ್ಬರು ಕಾಣಿರೊ 1 ಶ್ರೀ ರಮೇಶಕೃಷ್ಣನು ತನ್ನ ಪರಿವಾರ ಸಹಿತಾಗಿ ಓಲಗದಿ ಕುಳಿತಿರಲು ಸಾವಧಾನದಿ ತಾನು ಶ್ರೀದೇವಿ ಋಷಿಯಾಜ್ಞೆಯಿಂದಲಿ ಬಂದು ಶಿರಬಾಗಿ ಧರಣಿಯೊಳು ಭಾಗವತರ ಮಹಿಮೆತಿಳಿದು ಸಾಧನೆಗೈಯ್ಯಬೇಕೆಂಬ ಕುತೂಹಲದಿಂದ ದೇವಾಂಶರ ಬಿಡದೆ ಅವತಾರ ಮಾಡಿದ ಪವಿತ್ರವಂಶದಿ ಬಹುಕಾಲ ಪುತ್ರಾಪೇಕ್ಷೆಯಿಂದಲಿ ಶ್ರೀನಿವಾಸನ ಸೇವೆಗೈದ ಮಾತೆ ಶ್ರೀ ರುಕ್ಮಿಣೀದೇವಿ ಪಿತ ರಾಘವೇಂದ್ರರ ಉದರದಿಂದಲಿ ಜನಿಸಿ ಬಾಲತ್ವ ಕೆಲಕಾಲ ಕಳೆದು ತದನಂತರದಿ ಭೂವೈಕುಂಠಪುರದಲ್ಲಿ ದ್ವಿಜತ್ವವನೆ ಪಡೆದು ಲೌಕಿಕ ವಿದ್ಯೆಗಳನೆಲ್ಲ ಕಲಿಸಿ ಬಳಿಕ ಸಂಗೀತ ವಿದ್ಯೆಯ ಸಾಧನಕೆ ಮಿಗಿಲೆಂದು ಸಾಧಿಸಿ ಬಿಡದೆಲೆ ಪ್ರಾವೀಣ್ಯತೆಯ ಪಡೆದು ಅತಿ ಗೌಪ್ಯದಿಂದಲಿ ಶಿರಿಗುರು ತಂದೆವರದಗೋಪಾಲವಿಠ್ಠಲನ ಸ್ತುತಿಸಿ ಮನದಿ ಅತಿ ಹಿಗ್ಗುತಲಿರ್ದ ಬಗೆ ಕೇಳಿ 2 ಗುರು ಕಾಳಿಮರ್ದನ ಕೃಷ್ಣಾಖ್ಯದಾಸರ ಸಹವಾಸದಿಂದಲಿ ಲೌಕಿಕದಿ ಹುರುಳಿಲ್ಲವೆಂಬ ಮರ್ಮವ ತಿಳಿದು ಮನದಿ ವಿಚಾರಿಸುತಿರಲು ಕಾಲವಶದ ಸೋತ್ತುಮ ರಾಜ್ಯದಿ ಸ್ವರೂಪ ಕ್ರಿಯೆಗಳಾಚರಣೆಗೆ ಮನಮಾಡುತಲಿಹ ಓರ್ವ ದ್ವಿಜನ ಮರ್ಮವ ತಿಳಿಯದೆ ನಿಂದಿಸುವ ಮನವ ಮಾಡೆ ಶ್ರೀವದ್ವಿಜಯರಾಯರುತಮ್ಮ ವಂಶಜನಿವನೆಂದು ಶ್ರೀಮತ್ ರಾಘವೇಂದ್ರ ಮುನಿಗೆ ಬಹು ವಿಧ ಪ್ರಾರ್ಥಿಸಿ ಫಲ ಮಂತ್ರಾಕ್ಷತೆಯನಿತ್ತು ಧ್ಯಾನಕ್ಕೆ ತೊಡಗಿಸಿ ಶ್ರೀಮದ್ ಭಾವಿ ಸಮೀರ ಪದರಜವೇ ಬಹು ಭಾಗ್ಯವೆಂದು ಧೇನಿಪ ಭಕ್ತವರ್ಯರಾದ ತಂದೆವರದಗೋಪಾಲ ವಿಠಲದಾಸರಾಯರ ಪದಪದ್ಮಂಗಳಿಗೊಪ್ಪಿಸಿ ಅಪರಾಧಗಳನ್ನೆಲ್ಲ ದೃಷ್ಟಿ ಮಾತ್ರದಿ ದಹಿಸಿ ಫಣಿಗೆ ಮೃತ್ತಿಕೆ ತಡೆದು ಗುರುಗಳನೆ ಅರುಹಿ ನಿಜ ಮಾರ್ಗದಿಂದ ಶಿರಿಗುರುತಂದೆವರದಗೋಪಾಲವಿಠ್ಠಲನ ಕರುಣಿ ಪಡೆವ ಮಾರ್ಗವನೆ ಪಿಡಿದರು ಜವದಿ 3 ಭವದೊಳು ಬಳಲುವ ಭೌತಿಕ ಜೀವಿಗಳ ಬಹು ಬೇಗದಿಂದಲಿ ಉದ್ಧರಿಸಲೋಸುಗ ಬೋಧಮುನಿ ಕೃತ ಗ್ರಂಥಸಾರವ ಬೋಧಿಪ ಮುನಿಗಳ ದರ್ಶನಗೋಸುಗ ಪೊರಟ ಸಮಯದಲಿ ಶ್ರೀಗುರು ವಾದಿರಾಜ ಮುನಿವರ್ಯ ತನ್ನಯ ಪುತ್ರನ ಮೊರೆಕೇಳಿ ಶ್ರೀಲಕ್ಷ್ಮೀಹಯವದನನ ಮೂರ್ತಿಯ ಪ್ರಾರ್ಥಿಸೆ ರೌಪ್ಯಪೀಠ ಪುರವಾಸಿ ಶ್ರೀಕೃಷ್ಣನ ಕರದಿ ಶೋಭಿಪ ವಸ್ತುವಿನ ಪುರದಿ ಸ್ವಪ್ನದಿ ಬಂದು ತಂದೆವರದವಿಠ್ಠಲನೆಂಬ ಅಂಕಿತವನಿತ್ತು ಅದೇ ಸುಂದರ ರೂಪವ ತೋರಿ ನೈಜಗುರುಗಳ ದ್ವಾರಾ ಭಜಿಸೆಂದು ಬೋಧಿಸಿದ ನಂತರದಿ ಬಹು ಸಂಭ್ರಮದಿಂದಲಿ ಉಬ್ಬುಬ್ಬಿ ತನ್ನ ತನುಮನಧನ ಮನೆ ಮಕ್ಕಳನೆಲ್ಲ ನಿನ್ನ ಚರಣಾಲಯಕೆ ಅರ್ಪಿತವೆಂದು ಅರ್ಪಿಸಿ ಗುರುಗಳ ದ್ವಾರಾ ಸಿರಿಗುರು ತಂದೆವರದಗೋಪಾಲಗೆ ಸದಾ ಧೇನಿಸುತ ಮೈಮರೆತಿರ್ದನೀ ದಾಸವರ್ಯ 4 ಪಾದ ಕರವ ಮುಗಿದು ಸ್ವಾಮಿ ಶ್ರೀಗುರುರಾಜಾತ್ವದ್ದಾಸವರ್ಗಕೆಸೇರಿದ ಬಾಲಕ ದಾಸನೀತಾ ಕರುಣದಿಂದಲಿ ಜವದಿ ಕರುಣ ಕಟಾಕ್ಷದಿ ಈಕ್ಷಿಸಿ ಉದ್ಧರಿಸಬೇಕೆಂದು ಬಹುವಿಧ ಪ್ರಾರ್ಥಿಸಲು ಪರಮ ಕರುಣಾನಿಧಿ ಋಜುವರ್ಯ ಶ್ರೀ ವಾದಿರಾಜಾರ್ಯ ತನ್ನ ಹಂಸರೂಪಿಣಿ ಶ್ರೀ ಭಾವೀ ಭಾರತಿಯಿಂದೊಡಗೂಡಿ ಬಹು ಆನಂದದಿಂದಲಿ ಪಂಚ ಬೃಂದಾವನ ರೂಪದಿ ಮೆರೆವ ತನ್ನಯ ರೂಪವ ತೋರಿ ತುತಿಸಿಕೊಂಡು ಬಹು ಆನಂದಭರಿತರಾಗಿ ಬಹು ಬೇಗ ಸಾಧಿಸುವ ಗೈಸಲೋಸುಗ ಶಿರಿಗುರು ತಂದೆವರದಗೋಪಲವಿಠಲನ ಪ್ರಾರ್ಥಿಸಿ ಸಕಲ ಉತ್ಸವಗಳ ತೋರಿ ಶ್ರೀಮದ್ವಿಶ್ವೇಂದ್ರರ ದ್ವಾರಾ ತವ ಪಾದರೇಣು ಫಲ ಮಂತ್ರಾಕ್ಷತೆಯನಿತ್ತು ಬಗೆಯನೆಂತು ವರ್ಣಿಸಲಿ ಪಾಮರ ನರಾಧಮನು ನಾನು 5 ಕೇವಲ ಲೌಕಿಕ ಜನರಂತೆ ಆಧುನಿಕ ಪದ್ಧತಿಗನುಸರಿಸಿ ದಿನಚರ್ಯವನೆ ತೋರುತಲಿ ಭಾರತೀಶನ ಪ್ರಿಯವಾಗಿಹ ಕರ್ಮಗಳನೊಂದನೂ ಬಿಡದೆ ತಿಳಿದು ಮನದಿ ಮಾಡುತಲಿ ಮಂಕುಗಳಿಗೆ ಮೋಹಗೊಳಿಸಿ ಮಮಕಾರ ರಹಿತನಾಗಿ ದಿನಾಚರಣೆಗೈದು ಶ್ರೀ ಶುಕಮುನಿ ಆವೇಶಯುತರಾದ ಸದ್ವಂಶಜಾತ ಶ್ರೀಕೃಷ್ಣನ ಸೇವೆಗೋಸುಗ ಅವತರಿಸಿದ ವಾಯುದೇವ ಪೆಸರಿನಿಂದಲಿ ಶೋಭಿಪ ಕುಲಪುರೋಹಿತರ ಬಳಿಯಲಿ ಬಹು ವಿನಯದಿಂದಲಿ ಶ್ರೀ ನಿಜತತ್ವಗಳ ಮರ್ಮಗಳ ಕೇಳಿಕೊಂಡು ಮನದಿ ವಿಚಾರಿಸಿ ದೃಢೀಕರಣ ಪೂರ್ವಕ ಪಕ್ವವಾದ ಮನದಿಂದಲಿ ಶ್ರೀಶಶ್ರೀ ಮಧ್ವಮುನಿ ಶ್ರೀಗುರುಗಳ ಕರಣವನೆ ಕ್ಷಣಕ್ಷಣಕೆ ಬಿಡದೆ ಸ್ಮರಿಸುತಾನಂದ ಭಾಷ್ಯೆಗಳ ಸುರಿಸುತ ಭಾಗವತರ ಸಮ್ಮೇಳನದಿ ತತ್ವಗಳ ವಿಚಾರಿಸುತ ಶ್ರೀ ದಾಸಾರ್ಯರಾ ಉಕ್ತಿಗಳ ಆಧಾರವನೆ ಪೇಳುತಲಿ ಮನದಿ ಗುರುಗಳ ಸನ್ನಿಧಿಗೆ ಅರ್ಪಿಸಿ ತತ್ವದ್ವಾರ ತಿಳಿದುಪೂರ್ಣ ಸಾಧನವಗೈದು ಶ್ರೀ ಪ್ರಲ್ಹಾದ ಬಲಿ ಮಾಂಧಾತ ಕರಿರಾಜ ಶಿಬಿಮೊದಲಾದ ಚಕ್ರವರ್ತಿಗಳಲಿ ಬಹುಬೇಗ ಸಾಧನವ ಗೈದರು ಇವರಾರೊ ನಾ ಕಾಣೆ ಶಿರಿ ಗುರುತಂದೆವರದ-ಗೋಪಾಲವಿಠಲನ ಆಣೆ 6 ಸತಿ ವತ್ಸರ ವತ್ಸರ ಸತಿ ಮಾಯಾ ಶುಭ ದಿನದಿ ಸಂಖ್ಯಾ ಕಾಲದಿ ಪ್ರಥಮ ಯಾಮವೆಮಿಗಿಲೆಂದು ಮನದಿ ಲಯ ಚಿಂತನೆಯ ಬಿಡದೆ ಮಾಡುತದೇವತೆಗಳ ದುಂದುಭಿ ವಾದ್ಯಗಾಯನಗಳ ರಭಸದಿಶ್ರೀ ಲಕುಮಿ ದೇವಿಯ ಸೌಮ್ಯ ದುರ್ಗಾ ರೂಪಕೆನಮೋ ನಮೋ ಎಂದು ಶಿರಿಗುರುತಂದೆವರದಗೋಪಾಲ ವಿಠಲನಪುರಕೆ ಪುಷ್ಪಕ ವಿಮಾನ ರೋಹಿಣಿಯನೆ ಮಾಡಿನಲಿನಲಿದಾಡುವ ತೆರಳಿ ಪೋದಾರಿವರು 7 ಜತೆ :ಸತಿದೇವಿ ರಮಣನ ಭಕ್ತನೇ ನಿನ್ನಯಸುಖತನವೆಂದಿಗೂ ಕೊಡಲೆಂದು ಬೇಡಿಕೊಂಬೆಸಿರಿಗುರುತಂದೆವರದಗೋಪಾಲ ವಿಠಲನಿಗೆ 8
--------------
ಸಿರಿಗುರುತಂದೆವರದವಿಠಲರು