ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು ಕೋಪಾಟೋಪದಲಿಂದ ದಂಡಿಸಿ ತಮಸಿನ ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಪ ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು ತಡಿಯದಲೆ ಮುಡಿಸುತ್ತಲಿ ಕಕ್ಕಸ ಕುಚ ವಡನೊಡನೆ ನೋಡಿ ಸುಖಬಡುತಾ ಬಿಡದೆ ಕಾಳ್ಯಾಡುವುದು ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ 1 ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ ಕುಂಟವಾರ್ತೆಯ ಕೇಳಿ ಬಂಟನು ನಾನೆಂದು ತೊಂಟತನ ಬಗೆ ತೋರುತಾ ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ 2 ಇಂದು ನಮ್ಮನೆ ಪ್ರಸ್ತÀವೆಂದು ಆರಾದರೂ ಬಂದು ಪೇಳಲು ಊರ ಹಂದಿಯಂತೆ ಕಾಯಿದು ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ ಸಂಧ್ಯಾಕಾಲ ವಾನರಾಗುತ್ತ ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು ತಂದೆ ತಾಯಿ ಕಡೆ ಬಂಧುಬಳಗವೆಂದೂ ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ3 ನಾಡಾಡಿ ಚಾಡಿ ಮಾತಾಡಬೇಕಾದರೆ ಖೋಡಿ ನಾಲಿಗೆ ದೊಡತಾಗಿ ಬಾಹಿನೀ ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ ಮೂಢ ಗಾರ್ಧಬನಂತೆ ಓಡಾಡಿ ಬಳಲಿ ನಾಡಾಡಿ ಸುದ್ದಿಗಳಿಗೆ ಬಿಡಿ ಬಿಡಿಂದಾ ತಿರುಗುವಾ ಹೀನ ಮರುಳೇ 4 ಸಂಸಾರವೆಂಬಾ ಸಾರಾ ಸಾಗರ ಮಧ್ಯ ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ ಸಂಶಯವಿಲ್ಲದಲೆ ನಂಬಿ ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ5
--------------
ವಿಜಯದಾಸ
ಭಾರತೀ ಪತಿನುತ ವಿಠಲ ನೀನಿವಳ ಉದ್ಧಾರ ಮಾಡುವುದು ಹರಿಯೇ ಪ ತಾರಕನು ನಿನಗನ್ಯ ಉಂಟೇ ಈರೇಳು ಲೋಕದಲಿ ಧೊರೆಯೇ ಅ.ಪ. ಜನ್ಮಜನ್ಮದಲಿ ಬಲುನೊಂದು ಸತ್ಪುಣ್ಯಗಳನೇ ಮಾಡಿಜನ್ಮಪೊಂದುತಲಿ ಸತ್ಕುಲದಿ ಸನ್ಮತದವನ ಕೈಯ ಪಿಡಿದು |ಸನ್ಮಧ್ವಮತ ದೀಕ್ಷೆಗಳ - ಒಮ್ಮನದಿ ತಾಳುತ್ತನಿಮ್ಮಡಿಯ ನಾಶ್ರಯಿಸಿ ಬಂದಿಹಳ ಸಲಹುವುದು 1 ತರತಮ ಜ್ಞಾನದಲಿ - ಉರುತರೋತ್ಸುಕತೆಯನುನಿರತ ಹರಿಗುರುಗಳಲಿ ಉರುತರದ ಭಕ್ತಿಯನೂ |ಹಿರಿಯರನು ವಿನಯದಿಂ ಪರಿಚರಿಪ ಮತಿಯನ್ನುಕರುಣಿಸೀ ಸಲಹಯ್ಯ ಮರುತಾಂತರಾತ್ಮಾ 2 ಪಂಚಭೇಧದ ಜ್ಞಾನ ಸಂಚಿಂತನೆಯನೇ ಕೊಟ್ಟುಮಿಂಚಿನಂದದಿ ತೋರೊ - ಹೃತ್ಪಂಕಜನಲೀಅಂಚೆವಹಪಿತ ನಿನ್ನ ಪದಕಮಲ ಭಜಿಪಳಿಗೆವಾಂಛಿತಾರ್ಥದನಾಗಿ - ಸಲಹ ಬೇಕಿವಳಾ 3 ಪತಿ ನೀನೆ ಎಂಬಂಥಮತಿಯಿತ್ತು ಭವಗಳನ ಉತ್ತರಿಸು ಹರಿಯೇ 4 ನಿನ್ನ ಪದ ಕಮಲದಲಿ ಜ್ಞಾನಭಕುತಿಗಳಿತ್ತುನನ್ನೆ ಯಿಂದಿವಳ ಚೆನ್ನಾಗಿ ಸಲಹೊ ಹರಿಯೇ |ಸನ್ನುತಿಸಿ ಪ್ರಾರ್ಥಿಸುವೆ - ಮನ್ನಿಸೆನ ಬಿನ್ನಪವಘನ್ನ ಮಹಿಮನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವ ಚಿತ್ತ ವೃತ್ತಿಯು ನಿನಗೆ ಸರ್ವÀತ್ರದಿ ಪ ಉತ್ತಮೋತ್ತಮ ನೀನೆಗತಿ ಎಂ- ಉತ್ತರಿಸು ಭವಶರಧಿಯಲಿ ಎತ್ತಿ ಕಡೆಹಾಯಿಸುವುದೀಗಲೆ ಅ.ಪ ಜಗದಾಖ್ಯವೃಕ್ಷಕ್ಕೆ ಆದಿಕಾರಣನಾಗಿ ಜಗದೇಕವಂದ್ಯ ನೀನಾಧಾರನೋ ತ್ವಗಾದಿ ಜ್ಞಾನೇಂದ್ರಿಯಗಳೆಂಬೀ ಐದು ಬಿಳಲುಗಳೂ ಪಡೂರ್ಮಿಗಳೂ ಮೇಧ ಹೊದಿಕೆಗಳು ಪಂ ಮನ ಅಹಂಕಾರವೆಂದು ಪೊಟ್ಟರೆಗಳು 1 ಪ್ರಾಣಾದಿಪಂಚಕವು ಕೂರ್ಮ ಕೃಕಳಾದಿ ಪಂಚವಾಯುಗಳು ಪರ್ಣಗಳು ಹತ್ತೆನಿಸಿ ವೃಕ್ಷಕೆ ದುಃಖ ಸುಖವೆಂಬೆರಡು ಮೋಕ್ಷಗಳೆಂಬÉೂ ರಸಗಳು ಪಕ್ಷಿಗಳು ವಿಹರಿಸುತಲಿಹವು ಕರ್ಮಫÀಲವನು ಕಟಾಕ್ಷವಿಲ್ಲದೆ 2 ಅಡಿ ಮೇಲಾಗಿಹ ಗಿಡದೊಡೆಯ ನೀ ಗಿಡದೊಳು ಅಡಿಗಡಿಗೆ ಜೀವರೊಡಗೂಡಿ ಬಂದವರನು ನಿನ್ನೊಡಗೂಡಿ ಒಂದೇ- ಕಡೆಯಾಡುತಿಹ ಬಡಜೀವಿ ನಾನಯ್ಯ ಪಡೆದ ಫಲವದು ಬೆಂಬಿಡದೆ ಭೋಗಕೆ ಬರುತಲಿಹುದಯ್ಯ ಬಡಿದು ಉಣಿಸುವೆಯೊ ಬಿಡದಿರುವೆ ಎನ್ನೊಡೆಯಾ ಒಡೆಯ ನಿನ್ನೆದುರಿನಲಿ ನಾ ಪರಿಹರಿಸಿ ರಕ್ಷಿಸೊ ಮೃಡನುತ ಶ್ರೀ ವೇಂಕಟೇಶಾ 3
--------------
ಉರಗಾದ್ರಿವಾಸವಿಠಲದಾಸರು
ಸಿರಿ ಸರಸ್ವತಿಯೇ ಪ ಏಳಲವ ಮಾಡದಲೆ | ಭಕುತಿ ಭಿಕ್ಷೆಯ ನೀಡೇ ಅ.ಪ. ಹೃದಯ ಬರಿದಾಗಿಹುದು | ಮಧುಮಥನಸೂನಾಮಸುಧೆಯನುಣಿಸುತ ದಿವ್ಯ | ಯದುವರನ ರೂಪಾ |ಸದಯದಲಿ ನಿಲ್ಲಿಸುವುದು | ಹೃದಯ ಗಹ್ವರದಲ್ಲಿವಿಧಿ ಸತಿಯೆ ಹರಿಸುತೆಯೆ | ಬುಧಜನಾನತೆಯೆ 1 ಪಾದ ಭವ ಉತ್ತರಿಸುಮಾರಾರಿ ವಂದಿತಳೆ | ಚಾರುತರ ಗಾತ್ರೇ 2 ಅರಸಿ ನೋಡಲು ನಿನಗೆ | ಸರಿಯುಂಟೆ ಭುವನ ಮೂ-ರರ ವಳಗೆ ಗುಣಶ್ರೇಣಿ | ವರ ನೀಲವೇಣೀ |ಗುರುವಂತರಾತ್ಮ ಗುರು | ಗೋವಿಂದ ವಿಠ್ಠಲನ |ಪರಿಪರಿಯ ಚರಿತೆಗಳ | ಸ್ಫುರಿಸುವುದು ಸತತಾ 3
--------------
ಗುರುಗೋವಿಂದವಿಠಲರು
ಸಂಗವಿಡಿಸು ರಂಗಾ ವಿಬುಧರಹಿಂಗದೆ ನಿನ್ನಯ ನಾಮ ಪಾಡ್ವ ಭಕುತರ ಪ.ಸಂಗವಿಡಿಯೆಭವಹಿಂಗುವ ಲೆಕ್ಕದಅಂಗವಣೆಯನರಿತಂಗವಿವೇಕದಿಲಿಂಗವಪುವಿಭಂಗ ವಿಚಾರಕೆರಂಗಿ ವಿಷಯಭಯ ನುಂಗುವರ 1ಹರಿದಿನ ನಿಶಿಜಾಗರದ್ಯಶನಂಗಳಮರೆದಂಬುಜಾಕ್ಷನ ಬಿರುದೊಕ್ಕಣಿಸುತಮರುದಂಶರ ಮತವರಿದಿತರಾಗಮಜರಿದುವಿರತಿಯಲಿ ಪಿರಿದಪ್ಪರ2ಬೆನ್ನಬಿಡದೆ ಊರು ಬನ್ನವಬಡಿಸಲುತನ್ನ ವಿಮಲಮತಿಯನ್ನು ಬಿಸಾಡದೆಅನ್ಯವಧುವಿಗೆ ಬಿನ್ನವಿಸದೆ ಪಾವನ್ನವ ಮಾಳ್ಪ ಮಾನವರ 3ಸರಿಸ ಸಮನಿಹ ಹರುಷಪಡೆನುತಲಿಸುರಸಂಪದಕೆ ಮನವಿರಿಸಿ ಪರಂಪರಾಅರಸಪದವಿ ಓಕರಿಸಿ ಪರೇಶನಸ್ಮರಿಸಿ ಪದಾಬ್ಜವ ಸ್ಮರಿಸಿಪ್ಪರ 4ಅರಿಸಖರೊಳು ಸಮವೆರಸಿ ನೋಡುತಹರಿಯಿರಿಸಿದೊಲಂಗೀಕರಿಸಿ ನಿರಂತರಪರಸನ್ನ ವೆಂಕಟಗಿರೀಶ ನಾಮಾಸ್ತ್ರವಧರಿಸಿ ಸಂಸಾರವ ಉತ್ತರಿಸುವರ 5
--------------
ಪ್ರಸನ್ನವೆಂಕಟದಾಸರು