ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ನಾಲ್ಕು ಮೃಗಯಾಯೈ ಹಯಾರೂಢಂ ಗಹನೆ ಹಸ್ತಿನಾಹೃತಂ ಪದ್ಮಾವತೀ ಕಟಾಕ್ಷೇಷು ತಾಡಿತಂ ನËಮಿ ಶ್ರೀಪತಂ ವಚನ ಅಂದಿಗಾವೇಂಕಟನು ಇಂದು ಪೋಗಲಿಬೇಕೆಂದು ಸ್ಮರಿಸಿದ ಆ ಕ್ಷಣದಿ ಚೆಂದಾದ ಮೈ ಬಣ್ಣದಿಂದ ಇರುವುದು ಸ್ವರ್ಣ ಬಿಂದುಗಳು ಅಲ್ಲಲ್ಲೆ ಮೇಲ್ಗರಿಯಂ ಒಂದೊಂದು ಚಂದದರÀಳಲೆಯು ದೂರದಿಂದ ಹೊಳೆಯುವುದು 1 ಮತ್ತೆ ಸರಗಳನೆಲ್ಲ ಮತ್ತೆ ಪರಿಮಿತಿಯಿಲ್ಲ ಉತ್ತಮಾಶ್ವವ ತಾನು ಮತ್ತೆ ಮೇಲೆ ಸುತ್ತಿದನು ಕೌಸ್ತುಭ ಶಕ್ತವಸ್ತ್ರಾ2 ಊಧ್ರ್ವಪುಂಡ್ರಾಂಕಿತನು ಆಗಿ ಅಕಳಂಕಕೇಸರ ಕುಂಕುಮಾಂಕಿತ ಶ್ರೀಗಂಧ ಪೊಂಕದಲ್ಲಿ ಪಂಕಜಗಳಿಗೆ ಟೊಂಕದಲಿ ಏಲೆ ಅಡಿಕೆಸಣ್ಣ ಕೊಂಕು ಇಲ್ಲದ ಕನ್ನಡಿ ಕಟ್ಟಿದನು ವಸ್ತ್ರಾದಿಂದÀ 3 ಕಂಠದಲಿ ಇಟ್ಟು ಜರತಾರಿ ಒಂಟಿ ಚಾದರವನ್ನು ಕಂಠದಲಿ ಚಲ್ಲರಿಪುಕಂಟ- ಕಾಗಿರುವಂಥ ಒಂಟಿ ಬಂಟನಾಗಿ ಅಂಟರಾ ಬಿಗಿದು ನೂರೆಂಟು ವೈಕುಂಠನಾಥನು ಎಂಬ ಬಂಟನ ಕುದುರೆ ಹೊರಗ್ಹೊಂಟಿತಾಗ 4 ವೇಂಕಟನು ವನದಲ್ಲಿ ಘನವಾದ ಮದ್ದಾನೆಯನು ಹತ್ತಿ ನಡೆದ ವನಜ ಓಡುತ್ತ ಮುಂದೆ ಸಮ್ಮುಖವಾಗಿ ವಿನಯದಿಂದಲಿ ಸೊಂಡೆಯನು ಮೇಲೆತ್ತಿ ಗರ್ಜನವ ಮಾಡುತಲೆ 5 ಕಂಡು ಗಡಬಡಿಸಿದರು ಮುಗ್ಗುತಲೆ ಒಡಗೂಡಿ ಅಡಗಿದರು ಬೇಗ ದೃಢಭಕ್ತಿ ನಡೆದು ಅಲ್ಲಿಂದ ಹಣಹಣಿಕೆ ನೋಡ್ಯಡಗಿದರು ನಡೆಸಿದನು ಕುದರೆ 6 ಒದರಿದಳು ಅಮ್ಮಯ್ಯ ಏರಿ ನಮ್ಮೆದುರಿಗೆ ಚದುರನಾಗಿ ಮಧುರ ಹೆದರೆ ಬೇಡಿರಿ ನೀವು ಚದುರ ವೃತ್ತಾಂತವನು ಕೆದರಿ ಕೇಳಿರಿ ಅವನ ಇದರಿಗ್ಹೋಗಿ 7 ಬಂದು ಪುರುಷನ ನೋಡಿ ಇಂದು ಇಲ್ಲಿಗೆ ನೀನು ಬಂದ ಗಮನ ತಂದೆತಾಯಿಗಳ್ಯಾರು ಬಂಧು ಮಂದಿ ಎಲ್ಲರು ಏನೆಂದು ಕರೆವರು ನಿನಗೆ ಚಂದಾಗಿ ಕುಲಗೋತ್ರ ಒಂದು ಬಿಡದಲೆ ನಮ್ಮ ಮುಂದೆ ನೀಪೇಳು 8 ಇಂದು ನಮ್ಮ ಮುಂದೆ ಕೇಳಿರಿ ನಮ್ಮ ಕ್ರಮದಿಂದ ಹೇಳುವೆನು ಬಂಧು ತಾ ಬಲರಾಮ ಇಂದು ಸುಭದ್ರೆಯೆಂದೆನಿಸುವಳು ತಂಗಿ ಸುಂದರಾರ್ಜುನ ನಮ್ಮ ಹೊಂದಿರ್ದ ಬೀಗ 9 ಕೃಷ್ಣ ಪಕ್ಷದಲ್ಲಿ ನಾ ಕರೆವರು ಯೆನಗೆ ಕಿವಿಯಲ್ಲಿ ಇಟ್ಟು ಬಹುಸಂತೋಷ ಪೇಳಿರಿ ಎನಲು ಥಟ್ಟನೆ ನುಡಿದಳು ದಿಟ್ಟಪದ್ಮಾವತಿಯು ಸ್ಪಷ್ಟತಾನೆ 10 ಸುವಿವೇಕದ ವೃತ್ತಾಂತ ಶ್ರೀಕರಾತ್ರಿಯ ಗೋತ್ರ ಧರಣೀ ದೇವಿ ವಸುಧಾನ ತಾ ಖೂನ ಪದ್ಮಾವತಿಯು ನೀ ಕೇಳಿ ಆಕೆಯಮೇಲೆ ಸ್ವಲ್ಪ ಪುತ್ರಿ ತಾ ಕೋಪವನು ಎಂದಳಾ ಕಾಲದಲಿ ಹರಿ ವಿವೇಕದಲಿನುಡಿದ11 ಧ್ವನಿ ರಾಗ :ಶಂಕರಾಭರಣ ಭಿಲಂದಿತಾಳ ಇಷ್ಟು ಎನ್ನ ಮೇಲೆ ಏಕೆ ಸಿಟ್ಟು ಮಾಡುವಿ ಬಟ್ಟ ಕುಚದ ಬಾಲೆ ಬಹಳ ನಿಷ್ಠುರಾಡುವಿ 1 ಧಿಟ್ಟ ಪುರುಷ ನೀನು ನಡತೆಗೆಟ್ಟು ಇರುವರೆ ಖೊಟ್ಟಿ ಕುದುರೆಯೇರಿ ಮೈಯ ಮುಟ್ಟ ಬರುವರೆ 2 ಮೆಚ್ಚಿ ಬಂದೆ ನಿನಗೆ ನಾನು ಹೆಚ್ಚಿನ್ಹೆಂಗಳೆ ಇಚ್ಛೆ ಪೂರ್ಣಮಾಡು ನೀನು ಮಚ್ಚಕಂಗಳೆ 3 ಹೆಚ್ಚು ಕಡಿಮೆ ಆಡದೀರು ಹೆಚ್ಚಿನಾತನೆ ಎಚ್ಚರಿಲ್ಲ ಮೈಯ ಮೇಲೆ ಹುಚ್ಚು ಪುರಷನೆ4 ಏನು ಹೆಚ್ಚು ಕಡಿಮೆ ಆಡಿದೇನು ಅನುಚಿತ ನೀನು ಕನ್ಯಾ ನಾನು ವರನು ಏನು ಅನುಚಿತ 5 ಮೂಢನೀನು ಇಂಥ ಮಾತು ಆಡೋದುಚಿತವೆ ಬೇಡ ಅರಸಗ್ಹೇಳಿ ನಿನಗೆ ಬೇಡಿ ಬಿಗಿಸುವೆ 6 ಮಡದಿ ನಿನ್ನ ಕಡೆಯುಗಣ್ಣು ಕುಡಿಯ ಹುಬ್ಬುಗಳ್ ಕಡಿಯದಂಥ ಬೇಡಿ ಎನಗೆ ಕಡೆಗೆ ಅಲ್ಲವೆ 7 ಇಂದು ಪ್ರಾಣವ ತಂದೆ ಕಂಡರೀಗ ನಿನ್ನ ಕೊಂದು ಹಾಕುವ 8 ಜಾಣೆ ನಿನ್ನ ಬಿಡೆನು ಎನ್ನ ಪ್ರಾಣ ಹೋದರೂ ಪ್ರಾಣದರಸಿ ಎನಿಸು ಪಟ್ಟರಾಣಿಯಾಗಿರು 9 ಇಂದು ವ್ಯರ್ಥವು ಹಂದಿನಾಯಿ ಹದ್ದು ಕಾಗೆ ತಿಂದು ಬಿಡುವವು 10 ಎನ್ನ ಫಣಿಯಲ್ಲಿದ್ದ ಲಿಖಿತ ಮುನ್ನ ತಪ್ಪದು ಚನ್ನವಾಗಿ ನಿನ್ನಕೂಡಿ ಇನ್ನು ಇರುವುದು11 ಸೊಲ್ಲ ಕೇಳಿ ಸಿಟ್ಟಿನಿಂದ ನಿಲ್ಲೋ ಎಂದಳು ಎಲ್ಲ ಗೆಳತೆರಿಂದ ಕೂಡಿಕಲ್ಲು ಒಗೆದಳು 12 ಕಲ್ಲು ತಾಗಿ ಕುದುರೆ ಭೂಮಿಯಲ್ಲಿ ಬಿದ್ದಿತು ಬಲ್ಲಿ ದಾನಂತಾದ್ರೀಶನಲ್ಲಿ ಸ್ಮರಿಸಿತು 13 ವಚನ ಆ ಕುದುರೆಯನು ಆಗುತ ವಿವೇಕದಲಿ ಪರಿ ಆಯಿತೀಕಾಲದಲ್ಲೀ ಲೋಕದಲಿ ಕಾಲಬೀಳದಲೆ ಆಕಾಲ ದಲಿ ಹೊರಟೆ ಆ ಕಾರಣದಿಂದೆನಗೆ ಸಂಕಟವು ಸೋಕಿತಿ ಮಾಡಿದ ಕರ್ಮಫಲ ದೊರೆಯದಿರದು 1 ಗಿರಿಯೇರುತಲೆ ತಾನು ಮೂಕತನದಲಿ ಶೇಷಾಯಿಯಂತೆ ಮುಂದಕೆ ಅನೇಕ ಕರೆದು ಕೊಡುವವನ ಶ್ರೀ ಕರುಣದಿ ಆಯಿತು ನಾಲ್ಕು ಅಧ್ಯಾಯ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಅನಿಮಿಷ ರೂಪದಿಂದಾಗಮವನು ತಂದ ರಾಮಚಂದ್ರ ಘನಕೂರ್ಮರೂಪದಿಂ ಗಿರಿಯ ಬೆನ್ನೊಳಗಾಂತ ರಾಮಚಂದ್ರ ಕನಕಾಕ್ಷನನು ಕೊಂದ ಧರಿಣಿದೇವಿಯ ರಮಣ ರಾಮಚಂದ್ರ ಹಿರಣ್ಯಕನ ಕರುಳನು ಕೊರಳೊಳು ಧರಿಸಿದ ರಾಮಚಂದ್ರ ತರಳ ಪ್ರಹ್ಲಾದನ ಕರೆದಾದರಿಸಿದ ರಾಮಚಂದ್ರ ವಟುರೂಪದಿಂ ಬಂದು ವಸುಧೆಯ ಬೇಡಿದ ರಾಮಚಂದ್ರ ದಾನಕೊಟ್ಟವಗೆ ಪಾತಾಳ ಪಟ್ಟವ ಕಟ್ಟಿದ ರಾಮಚಂದ್ರ ಕ್ಷತ್ರಿಯರ ಕುಲಬೇರ ಕತ್ತರಿಸಿದ ದೇವ ರಾಮಚಂದ್ರ ಧರಿತ್ರಿಯ ಭಾರವ ಪರಿಹರಿಸಿದ ದೇವ ರಾಮಚಂದ್ರ ವಸುದೇವನಂದನನೆಂದೆನಿಸಿ ಮೆರೆದೆಯೋ ರಾಮಚಂದ್ರ ಮತ್ತೆಕಾಮಿನಿಯರ ಚಿತ್ತವ ಕಲಕಿದ ರಾಮಚಂದ್ರ ಉತ್ತಮಾಶ್ವವನೇರಿ ಕಲ್ಕಿಯೆನಿಸಿದ ರಾಮಚಂದ್ರ ಆದಿಮಧ್ಯಾಂತ ಸ್ವರೂಪ ಸುಂದರರೂಪ ರಾಮಚಂದ್ರ ವೇದವೇದ್ಯನೆ ನಿನ್ನ ಪಾದವೇ ಗತಿಯೆನಗೆ ರಾಮಚಂದ್ರ ರಘುಕುಲತಿಲಕನೆ ರಮ್ಯಚರಿತ್ರನೆ ರಾಮಚಂದ್ರ ಅಘಹರ ಪುರವೈರಿ ಸಂಸ್ತುತಿಪಾತ್ರನೆ ರಾಮಚಂದ್ರ ಮಾನಾಭಿಮಾನ ನಿನ್ನಾಧೀನಮೆಂಬೆನೈ ರಾಮಚಂದ್ರ ಏನೊಂದನರಿಯದ ಅಜ್ಞಾನಿ ನಾನಯ್ಯ ರಾಮಚಂದ್ರ ನೀನಲ್ಲದೆ ಮತ್ತನ್ಯರಾರಿಹರೈ ರಾಮಚಂದ್ರ ದೀನಪಾಲಕ ನಿನ್ನುಳಿದಾರ ನೆರೆಯೆ ರಾಮಚಂದ್ರ ವರಶೇಷಗಿರಿದೊರೆ ಮರೆಹೊಕ್ಕು ಬೇಡುವೆ ರಾಮಚಂದ್ರ ಕರುಣಾಳು ನೀನೆಂಬ ಬಿರುದುಳಿಸೆನ್ನುವೆ ರಾಮಚಂದ್ರ
--------------
ನಂಜನಗೂಡು ತಿರುಮಲಾಂಬಾ
ಅವತಾರ ಸಿರಿವರ ಘನ ಕರುಣಾಕರ ಪೊರೆಯೈ ಪ. ನಿಗಮಚೋರನನ್ನು ಕೊಂದು ನಗವಪೊತ್ತನೆ ವಿಗಡದೈತ್ಯನನ್ನ ಸೀಳಿ ಜಗವನಾಂತನೇ 1 ಘುಡುಘುಡಿಸಿ ಕಂಬವನು ಒಡೆದುಬಂದನೆ ಪಿಡಿದು ಖಳನ ಕರುಳಬಗೆದು ಕೊರಳೊಳಾಂತನೆ2 ಇಂದ್ರಗನುಜನಾಗಿ ದಾನವೇಂದ್ರ ಗೊಲಿದು ನೀಂ ನಿಂದು ಬಾಗಿಲಕಾವ ಗೊಲ್ಲನಂದಮೇನಿದೈ 3 ಹಡೆದತಾಯ ಶಿರವಪಿಡಿದು ಕಡೆದ ಭಾರ್ಗವ ಮಡದಿಚೋರನನ್ನು ಕೊಂದ ಒಡೆಯ ರಾಘವ 4 ಮಾವ ಕಂಸನ ಕೊಂದ ವಸುದೇವನಂದನ ಮಾಧವ 5 ಮತ್ತೆ ತ್ರಿಪುರ ಸತಿಯರ ಚಿತ್ತಕಲಕಿದ ಉತ್ತಮಾಶ್ವವನ್ನೆ ಹತ್ತಿ ಕಲ್ಕಿಯೆನಿಸಿದ 6 ಉರಗಶಯನ ಗರುಡಗಮನ ಪರಮಪಾವನ ವರದ ಶೇಷಶಿಖರಧಾಮ ಶ್ರೀನಿಕೇತನ 7
--------------
ನಂಜನಗೂಡು ತಿರುಮಲಾಂಬಾ
ಏನೆಂದು ಬಣ್ಣಿಪೆನೆ ಈ ನವ್ಯವಿಗ್ರಹನೆ ಮನದನ್ನನಾದನೆ ವನಜನಯನೆ ತೊಳೆದಕೆಂಡದ ಕಾಂತಿ ಮೊಳದುದ್ದ ಮೋರೆಯು ಕೊಳಗುಳದ ಮನವಿತ್ತು ಮೊಳಗುತಿಹನು ಕತ್ತಿಯನು ಪಿಡಿದೆತ್ತಿ ಉತ್ತಮಾಶ್ವವ ಹತ್ತಿ ಅತ್ಯಂತ ರೋಷದಿಂ ಸುತ್ತುತಿಹನು ಕೊಲೆಗೆ ಹೇಸದ ವÀರನೆ ಪಲಜನರ ಕಡಿದವನೆ ಕಲಿತಾನೆ ಎನುತಿಹನೆ ಕಲ್ಕಿಯಿವನೆ ಇಂತಿರ್ಪ ವರಗೆ ಮನಸೋತು ನಾನು ಕಾಂತನೆಂದಾಡಿದೆನು ಪೇಳ್ವುದೇನು ಶಾಂತಗುಣ ಶೇಷಾದ್ರಿನಿಲಯ ತಾನು ಸಂತತವು ಭಕ್ತರನು ಸಲಹನೇನು
--------------
ನಂಜನಗೂಡು ತಿರುಮಲಾಂಬಾ
ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |ಕೇಳಲೊಲ್ಲನು ಎನ್ನ ಮಾತನು ಪದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |ಬೆಟ್ಟಕೆ ಬೆನ್ನಾತು ನಿಂತನೆ ||ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ 1ಮೂರಡಿ ಭೂಮಿಯ ಬೇಡಿದನೆ-ನೃಪರ |ಬೇರನಳಿಯೆ ಕೊಡಲಿ ಪಿಡಿದನೆ ||ನಾರಮಡಿಯನುಟ್ಟು ಬಂದನೆ-ಅಹ |ಚೋರತನದಿ ಪಾಲ್ಬೆಣ್ಣೆಯ ತಿಂದನೆ 2ಬತ್ತಲೆ ನಾರಿಯರನಪ್ಪಿದ-ಹೋಗಿ ||ಉತ್ತಮಾಶ್ವವನು ಹತ್ತಿದ ||ಹತ್ತವತಾರವ ತಾಳಿದ-ನಮ್ಮ |ಭಕ್ತವತ್ಸಲ ಸ್ವಾಮಿ ಪುರಂದರವಿಠಲನು 3
--------------
ಪುರಂದರದಾಸರು