ಭವ ಎತ್ತಲಾರೆ ಚಿತ್ತಜಪಿತನೆ
ನಿತ್ಯ ಮುಕ್ತಿಸುಖವ ನೀಡೊ ಪ
ಮರ್ತು ಇಂದಿನತನಕ ನಿಮ್ಮ
ನಿತ್ಯನಿರ್ಮಲಪಾದ ಎಂ
ಬತ್ತುನಾಲ್ಕುಲಕ್ಷ ಜನುಮ
ಗುರ್ತಿಲ್ಲದೆ ತಾಳಿದ್ದೆ ಸಾಕೊ 1
ಉತ್ತಮಸಂಗ ಮರೆದು ಮದೋ
ನ್ಮತ್ತನಾಗಿ ಚರಿಸಿ ಮತ್ತೆ
ಕತ್ತೆಯಂತೆ ಇಹ್ಯಕೆ ಪರಕೆ
ಸುತ್ತಿ ಸುತ್ತಿ ಬೇಸತ್ತದ್ದೆ ಸಾಕೊ 2
ಚಿತ್ತಭ್ರಾಂತನಾಗಿ ಸತತ
ಸತ್ಯಮಾರ್ಗದಪ್ಪಿ ಕೆಡುವ
ಭಕ್ತನ ತಪ್ಪುಕ್ಷಮಿಸಿ ಕರುಣ
ದೆತ್ತಿ ಸಲಹೊ ಸಿರಿಯರಾಮ 3