ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರಸುಖ ಸುನೀತಿಯಿಲ್ಲದ ಮಹ ಪಾತಕ ಹೊಲೆಯರಿಗೆ ಪ ಭೂತಳದಲಿ ಬಂದ ರೀತಿಯನರಿಯದೆ ಆತುರದಲಿ ಬಿದ್ದ ನೀತಿಗಡುಕರಿಗೆ ಅ.ಪ ಉತ್ತಮರ್ವಚನದ ಅರ್ಥವನರಿಯದೆ ಕತ್ತೆಯಂತೆ ಕೂಗಿ ಚಿತ್ತಕ್ಕೆ ಬಂದಂತೆ ವರ್ತಿಸಿ ಭವದಿ ಅನರ್ಥಕ್ಕೆ ಗುರಿಯಾಗಿ ಸತ್ಯಜನಕೆ ಕುಂದುತ್ತರಗಳನ್ನಿತ್ತು ಮೃತ್ಯು ಬಲೆಗೆ ಬೀಳ್ವ ಕತ್ತೆ ಮನುಜರಿಗೆ 1 ನಶಿಸಿ ಪೋಗೋ ಮಾಯ ವಿಷಯಲಂಪಟವೆಂಬ ಮುಸುಕಿನೊಳಗೆ ಸೊರಗಿ ನಿಶಿದಿವಯೆನ್ನದೆ ಪುಸಿಯ ಸಂಸಾರವೆಂಬ ವ್ಯಸನದೊಳಗೆ ಕೊರಗಿ ವಸುಧೆಸುಖಕೆ ಮೆಚ್ಚಿ ಮಸಣ ಬುದ್ಧಿಯಿಂದ ಪುಸಿಯ ಬಳಸಿ ಕಾಲನೊಶವಾಗುವವರಿಗೆ 2 ಶೋಧಿಸಿ ನಿಜಪದ ಸಾಧನೆಯೊಳಗಿರ್ದು ಸುಜನ ಸು ಬೋಧ ಪಡೆದು ಭವಬಾಧೆ ರಹಿತರಾಗಿ ಭೇದರಹಿತ ಮಹದಾದಿ ಶ್ರೀರಾಮನ ಪಾದ ನಂಬಿ ಮುಕ್ತಿ ಸಂಪಾದಿಸದವರಿಗೆ 3
--------------
ರಾಮದಾಸರು