ಶ್ರೀ ಸತ್ಯ ಬೋಧರು
ನಿಂದಿಸೋರಿಗೆ ನಿಂದೆಯನು ಕೊಡುವಾ
ಕೊನೆಕಾಮರಿಗೆ [?] ಕೊನೆಯನು ಕೊಡುವಾ
ಘನ ಮಹಿಮಾ ನಮ್ಮ ಸತ್ಯಬೋಧಗುರು
ಅನುದಿನ ನೆನೆಯಲಭೀಷ್ಟವ ಕೊಡುವಾ ಪ
ರಾಮದೇವಾರ್ಚನೆ ನೇಮದಿಂದಲಿ ಗೈದು
ಕಾಮಿತ ಫಲಪ್ರದ ಬಲವೈಯ್ದಿದಾ
ಶೀಮಿಶೀಮಿಯೊಳು ಕಾಮನೈಯ್ಯನ ಜನ
ಕಾಮಪ್ರದಾನೆಂಬುದೆ ಸಾರಿದಾ
ಧೀಮಾನ್ ಶ್ರೀಮಾನ್ ಕಾಮಿತೇಷ್ಟದಾ
ಕಾಮನೆಂದು ತಾ ಪೊಗಳಿಸಿದಾ
ವಾಮದೆ ವಗುರು ರಾಮಭಕುತನೆಂದು
ಭೂಮಿಯೊಳ್ಡಂಗುರ ಹೊಡಿಸಿದಾ 1
ತತ್ವ ತಿಳಿದು ನೋಡಿ ಸತ್ಯ ಸತ್ಯ ಹರಿ
ಮತ್ತುವನಿಗೆ ಭೃತ್ಯವಾದ ಸೂನು
ಉತ್ತಮರೆಲ್ಲರು ಸತ್ಸಮಯವಂತೆ
ಸತ್ಯ ಪ್ರಮಾಣವ ಪೇಳಿದನು
¸ತ್ಯಬೋಧ ರವಿ ಮಿಥ್ಯಾಗತ್ತಲೆಗೆ ತಾ
ಕತ್ತರಿಯೆಂದರುಹಿದನು ¸ತ್ಯ ಬೋಧನೆಯನು
ಸತ್ವರಿಂಗೆ ಮಾಡಿ ಮತ್ತವರುದ್ಧಾರ ಮಾಡಿದನು 2
ವರಸದ್ಗುಣಗಣ ನಿಲಯನೆನಿಸಿ ತಾ
ವರ ಶಿಷ್ಟಾನ್ವಿತ ಮೇಣ್ ವಂದ್ಯನಾದ
ಶಿರಿವರ ಪಾದಾನುಗ್ರಹ ಪಡೆದು ತಾ
ಹರಿಜನಾರ್ತಿತಯ ಛೇದಿಸಿದಾ
ದುರಿತ ತಮರಾಶಿಗಗ್ನಿಯೆನಿಸಿದಾ
ಶರಣರ ಸಂಘ ಬೂದಿಗೈದಾ
ನರಸಿಂಹವಿಠಲನ ಕರಣವ ಪಡೆದು ತಾ
ಗುರುವರ ವರಪ್ರದನೆನಿಸಿದಾ 3