ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವುದು ಖರೆಯೆಲೊ ಜೀವನೆ ಆವುದು ನಿಜವೆಲೊ ಪ ಆವುದು ಖರೆಯಲೋ ಜೀವ ಜಗದ ಸುಖ ಮಾಯದೆಲ್ಲನು ಭಾವಿಸಿ ನೋಡೋಅ.ಪ ಬಡತನ ನಿಜವೇನೋ ನಿನಗೀ ಕಡುಸಿರಿ ಸ್ಥಿರವೇನು ಮಡದಿ ಮಕ್ಕಳು ನಿನ್ನ ಸಂಗಡ ಕಡೆತನಕಿಹ್ಯರೇನೊ ಹೆಡತಲೆ ಮೃತ್ಯು ಬಂದು ಪಿಡಿದು ಎಳೆಯುವಾಗ ಅಡರಿಕೊಂಡು ನಿನ್ನ ಬಿಡಿಸಿಕೊಂಬುರೇನು 1 ರಾಜ್ಯ ಭಂಡಾರವೆಲ್ಲ ನಿನಗೆ ಸಹಜವಾದದ್ದಲ್ಲ ಗೋಜುಪ್ರಪಂಚ ನಿಖಿಲವಂ ದಿನಮಾಜಿಹೋಗುವುದೆಲೊ ಸೋಜಿಗವಾಗಿ ಮಿಂಚು ತೇಜದಡಗುವಂತೆ ಈ ಜಗ ಸಮಾಜ ನಿಜವಿನಿತಿಲ್ಲೆಲೊ 2 ಕತ್ತೆಯಂತೆ ಕೂಗಿ ಜನ್ಮವ್ಯರ್ಥ ಕಳೆಯಬೇಡೊ ಉತ್ತಮರಿಗೆ ಬಾಗಿ ಸತ್ಯಪಥಕೆ ಹೊಂದು ಪಾಡೊ ನಿತ್ಯ ನಿರ್ಮಲ ಸರ್ವೋತ್ತಮ ಶ್ರೀರಾಮಪಾದ ಭಕ್ತಿಯಿಂ ಪಾಡಿ ಮುಕ್ತಿಯ ಪಡೆಯೊ3
--------------
ರಾಮದಾಸರು
ಗುರುವಿಗೆ ಒಂದು ಶರಣಾರ್ಥಿ ಗುರು ಭಕ್ತರಿಗೊಂದು ಶರಣಾರ್ಥಿ ಪ ಸಾಧನ ನಾಲ್ಕನು ಸಾಧಿಸುತಿರುತಿಹ ಸಾಧಕರಿಗೆ ಒಂದು ಶರಣಾರ್ಥಿವಾದವ ವರ್ಜಿಸಿ ವಸ್ತುವ ಧ್ಯಾನಿಪ ಉತ್ತಮರಿಗೆ ಒಂದು ಶರಣಾರ್ಥಿ1 ಯೋಗಗಳಿಂದಲೆ ಯೋಗ್ಯರಾಗಿಹ ಯೋಗೀಶರಿಗೊಂದು ಶರಣಾರ್ಥಿರಾಗ ಪೋಗಿ ರಂಜಿಸುತಿರುತಿಹ ರಂಜಕರಿಗೆ ಒಂದು ಶರಣಾರ್ಥಿ 2 ದೂಷಣ ಭೂಷಣ ದೂರ ಮಾಡಿಹ ದೃಢವಂತರಿಗೆ ಒಂದು ಶರಣಾರ್ಥಿಆಸೆಗಳೆಂಬ ಅಳಿದು ಇರುತಿಹ ಆನಂದರಿಗೊಂದು ಶರಣಾರ್ಥಿ3 ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ ಪಂಡಿತರಿಗೆ ಒಂದು ಶರಣಾರ್ಥಿತಾಪವನೀಗಿ ತಮ್ಮನೆ ಮರೆತಿಹ ತಾಪಸರಿಗೆ ಒಂದು ಶರಣಾರ್ಥಿ4 ಜನನ ಮರಣಗಳ ಜಡರನೆ ಕಳೆದಿಹ ಜನಪತಿಗಳಿಗೊಂದು ಶರಣಾರ್ಥಿಚಿನುಮಯಾತ್ಮಕ ಚಿದಾನಂದನ ಬೆರೆದಿಹ ಚಿದ್ರೂಪರಿಗೆ ಒಂದು ಶರಣಾರ್ಥಿ 5
--------------
ಚಿದಾನಂದ ಅವಧೂತರು
ದತ್ತ ದತ್ತೆನ್ನಲು ಹತ್ತಿ ತಾಂ ಬಾಹನು ಚಿತ್ತದೊಳಾಗುವಾ ಮತ್ತ ಶಾಶ್ವತನು ದತ್ತ ಉಳ್ಳವನ ಹತ್ತಿಲೇ ಈಹನು ವೃತ್ತಿ ಒಂದಾದರೆ ಹಸ್ತಗುಡುವನು 1 ಎತ್ತ ನೋಡಿದರೆ ಮೊತ್ತವಾಗಿಹ ತಾಂ ಉತ್ತಮೊತ್ತಮತಾನೆತ್ತುತಾ ಈತಾ ಅತ್ತಲಿತ್ತಾಗದೆ ಹತ್ತಿಲೆ ಸೂಸುತ ಮುತ್ತಿನಂತಿಹ್ವನು ನೆಲಿಲೆ ಭಾಸುತಾ 2 ದತ್ತನೆಂದೆನ್ನಲು ಕತ್ತಲೆಣ್ಯೋಗುದು ಮೃತ್ಯು ಅಂಜುತಲಿ ಭೃತ್ಯನಾಗಿಹುದು ಉತ್ತಮರಿಗೆ ತಾ ಸತ್ಯ ಭಾಸುದು 3 ಒತ್ತಿ ಉನ್ಮನಿಯಾವಸ್ಥಿ ಯೊಳಾಡುವದು ಸ್ವಸ್ತಮನಾದರೆ ವಸ್ತು ಕೈಗೂಡುದು ಬಿತ್ತಿ ಮನ ಗುರುಭಕ್ತಿ ಮಾಡುವದು ದತ್ತ ತನ್ನೊಳು ತಾನೆವೆ ಭಾಸುವದು 4 ದತ್ತ ದತ್ತೆಂದು ತಾ ಅರ್ತ ಮಹಿಪತಿಯ ಬೆರ್ತ ನೋಡಿದ ಮನವು ಸುಮೂರ್ತಿಯು ಮರ್ತದೊಳಿದುವೆ ಸುಖವಿಶ್ರಾಂತಿಯು ಮರ್ತುಹೊಗುವದು ಮಾಯದ ಭ್ರಾಂತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶುಕಪಿತನ ಪದಕಂಜ ಪದುಪಾ | ಅಖಿಳ ಲೋಕದ ಗುರುವೆ ಸುಖ ತೀರ್ಥ ಮುನಿಪಾ ಪ ನಿತ್ಯ ನೈಮಿತ್ಯಗಳು | ಗತಿ ತಪ್ಪಿ ಪೋಗಿರಲು ಸರ್ವ ದೇವತೆಗಳು || ಪಥವ ಕಾಣದೆ ನೆರೆದು ಯೋಚಿಸಿ ತಮ್ಮೊಳು | ಅತಿಶಯದಿ ವೊದರಿ ಕೇಳು ಭವನದಾ | ಪತಿಯಾದ ಬೊಮ್ಮಗುಸರಿದರಂದು ಮೇಲು1 ತುತಿಸಲಾಕ್ಷಣ ಕೇಳಿ ಅಜನು ಶಿರದೂಗಿದನು | ಕೃತಭುಜರ ಸಹವಾಗಿ ಹರಿಪುರಕೆ ಸಾಗಿದನು | ನತನಾಗಿ ಶಿರಿಪತಿಯ ಪದಯುಗಕೆ ಬಾಗಿದನು | ಗತಿ ನೀನೆ ಎಂದು ಕೂಗಿದನು ಹರಿ ಕೇಳಿ | ಸತತ ನಿನ್ನನ್ನು ಕರೆದು ಪೇಳಿದವೇಗಿದನು 2 ಭೂಸುರನ ಗರ್ಭದಲಿ ಬಂದೆ ನೀನವತರಿಸಿ | ವಾಸುದೇವನೆಂಬ ನಾಮದಿಂದಲಿ ಜನಿಸೀ | ಭಾಸುರ ಕೀರ್ತಿಯಲಿ ಮೆರೆÀದೆ ಬಲು ಪಸರಿಸಿ | ದೋಷ ವರ್ಜಿತದ ಗುಣರಾಸಿ ಎನಿಸುವಾ | ಲೇಸು ಆರೈದೆರಡು ಲಕ್ಷಣ ಸಂನ್ಯಾಸಿ 3 ಪುಟ್ಟಿ ಇಳಿಯೊಳಗೆ ಸಂಕರನೆಂಬ ದುರವಾದಿ | ಜಟ್ಟಿಗನಾಗಿ ಸೋsಹಂ ಯೆಂಬ ಅತಿ ಕ್ರೋಧಿ | ಅಟ್ಟಹಾಸದಲಿ ತಿರುಗಿದನು ಬೀದಿ ಬೀದಿ | ಘಟ್ಟವಚನದಿಂದ ಕಾದಿ ಅವನ ಮುರಿ | ದೊಟ್ಟಿದೇ ವಪ್ಪದಲಿ ಮಾಯಿ ಮತಭೇದಿ 4 ಅಮೃತ | ಗ್ರಂಥ ಉತ್ತಮರಿಗೆರೆದು ಸುಖ ಬಡಿಸಿದೆ ಅತಿಶ್ಯಾಂತ | ಅತ್ಯಂತ ಮಹಿಮ ಬಲವಂತ ನಿಮಗೆ ನಾ | ಎತ್ತಿ ಕರಗಳ ಮುಗಿವೆ ತೋರು ನಿಜ ಪಂಥ 5 ಹರಿಯೆ ಪರನೆಂದು ಬೊಬ್ಬರಿದು ಎಳಹರಿ | ಮರಿಯೆ ಬಿರಿದು ಡಂಗುರವ ಹೊಯಿಸಿ | ಚರಿಸಿದ ಗುರು ದೊರೆಯೇ | ಸರಿಗಾಣೆ ನಿನಗೆಲ್ಲಿ ಮತ್ತೊಬ್ಬರನ ಕರಿಯೇ | ವರ ಬದರಿಲಿಪ್ಪ ವೈರಾಗ್ಯದ ಸಿರಿಯೇ 6 ಮುನಿಗಳೊಳಗೆ ರನ್ನ ಮುನಿದವರಿಗಿರಬೆನ್ನ | ಘನ ವಿದ್ಯಸಂಪನ್ನ ಗುಣದಲ್ಲಿ ಅಚ್ಛಿನ್ನ | ನೆನೆದವರ ಪ್ರಸನ್ನ ತನುವೆ ತಪುತ ಚಿನ್ನ | ಮಿನಗುವಂತೆಯಿಪ್ಪ ಪಾವನ್ನ ಮಧ್ವಮುನಿ | ಚಿನುಮಯ ವಿಜಯವಿಠ್ಠಲನ್ನ ಪ್ರಸನ್ನಾ7
--------------
ವಿಜಯದಾಸ
ಧರ್ಮಕ್ಕೆ ಕೈಬಾರದೀಕಾಲ - ಪಾಪ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.ದಂಡದೋಷಕೆ ಉಂಟು ಪುಂಡುಪೋಕರಿಗುಂಟು |ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||ಭಂಡೆಯರಿಗುಂಟು ದಿಂಡೆಯರಿಗುಂಟು - ಬೇಡಿ - |ಕೊಂಡಿವರಿಗಿಲ್ಲವು ಈ ಕಲಿಕಾಲ 1ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು |ಹೆತ್ತತಾಯಿಗಿಲ್ಲ ಈ ಕಲಿಕಾಲ ||ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ |ಉತ್ತಮರಿಗೆ ಇಲ್ಲವೀ ಕಲಿಕಾಲ 2ಹುಸಿದಿಟವಾಯಿತು ರಸ - ಕಸವಾಯಿತು |ಮಸಿ ಮಾಣಿಕವಾಯಿತೀಕಾಲ ||ವಸುಧೆಯೊಳಗೆ ನಮ್ಮ ಪುರಂದರವಿಠಲನ |ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ 3
--------------
ಪುರಂದರದಾಸರು