ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೇಜಿಯೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ಪ. ಸುತ್ತಮುತ್ತ ಸಾವಿರಾರು ಸಾಲುದೀವಟಿಗೆ ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ಮತ್ತೆ ಸಭಾದಿಂದ ತೇಜಿ ಮೆಲ್ಲನೆ ನಡೆಸುತ್ತ ಜಾಣ1 ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ಮೇಲು ಪಂಚಕಂಗಳೆಲ್ಲ[ಮಿಗೆ] ಪೊಗಳಲು ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ಧೂಳುಗಳೆಬ್ಬಿಸಿ [ವೈಹಾಳಿ] ನಿಕ್ಕುತ ಜಾಣ 2 ಮುತ್ತಿನ ತುರಾಯಿ ಅಂಗಿ ಮುಂಡಾಸು ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ [ತೇಜಿಯ] ಪಿಡಿದು 3 ರಂಭೆ ಮೊದಲಾದ ದೇವರಮಣಿಯರು ಕುಂಭದ ಆರತಿಯೆತ್ತಿ ಕೂಡಿ ಪಾಡಲು ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ 4 ವೇದಘೋಷದಿಂದ ವಿಪ್ರರು ಸ್ತುತಿಸಲು ಮೋದದಿಂದ ಗಾಯಕರು ಹಾಡಿ ಪಾಡಲು ಹಾದಿ ಬೀದಿಯಲಿ ನಿಂತು ಸಜ್ಜನರಿಗೆಲ್ಲ ದೇವ ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ 5 ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ಮುಚ್ಚಿತಂದ ಕೆನೆಮೊಸರು ಮೀಸಲು ಬೆಣ್ಣೆಯು ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು 6 ಸಣ್ಣಮುತ್ತು [ತೆತ್ತಿಸಿದ] ಸಕಲಾತಿ ಗೊಂಡ್ಯ ಹೊನ್ನ [ತೆತ್ತಿಸಿದ ಹೊಸ] ಹೊಳೆವ ಸೊಬಗಿನ ಉನ್ನಂತ ಗುಣರಾಯ ಉತ್ತಮರಾಜಾಶ್ವವೇರಿ ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ 7
--------------
ವಾದಿರಾಜ
ನಾನು ಸಜ್ಜನನಾದೊಡೆಹೀನವಿಷಯಂಗಳಿಗೆ ಎರಗುವೆನೇನಯ್ಯ ಪ. ಚಿತ್ತವÀ ಪುರುಷೋತ್ತಮನಲ್ಲಿಡದೆಉತ್ತಮರಾದವರೊಡನಾಡದೆತತ್ವವಿಚಾರವೊಂದರಿಯದೆ ನಾನು-ನ್ಮತ್ತರಸಂಗವ ಮಾಡುವೆನೇನಯ್ಯ1 ನಿರುತವು ಪರನಿಂದೆಗಳ ಮಾಡುತಲಿಗುರುಹಿರಿಯರನು ವಿಚಾರಿಸದೆಗುರುವೆ ದೈವವೆಂದರಿಯದೆ ನಾನುಪರರ ಒಡವೆಯನು ಬಯಸುವೆನೇನಯ್ಯ 2 ಹೇಯಶರೀರವ ಪೋಷಿಸುವೆನೆಂದು-ಪಾಯವನು ಮಾಡಿ ನಾ ಬಳಲುತಿಹೆರಾಯರು ಮಾಡಿದ ಶರಣರ ಹೊರೆವಹಯವದನ ನಿನ್ನ ನಾ ಮರೆತಿಹೆನೇನಯ್ಯ 3
--------------
ವಾದಿರಾಜ
ನಾನೇ ಸಜ್ಜನನಾದಡೆ ಇಂಥ ಹೀನ ವಿಷಯಗಳಿಗೆರಗುವೆನೇನಯ್ಯ ಪ. ನಿರುತದಿ ಪರರ ನಿಂದಿಸುತಿಹೆನೆಗುರುಹಿರಿಯರು ಸಜ್ಜನರೆನ್ನದೆಹರಿ ಪರದೈವವೆಂದರಿತು ಭಜಿಸದೆಪರರ ವಡವೆಗಳ ಬಯಸುವೆನೇನಯ್ಯ 1 ಚಿತ್ತವ ಪುರುಷೋತ್ತಮನ ಮನದಲ್ಲಿಡದೆಉತ್ತಮರಾದವರೊಡನಾಡದೆತತ್ವ ವಿಚಾರವ ಮಾಡದೆ ನಾನು ನ್ಮತ್ತರ ಸಂಗವ ಮಾಡುವೆನೇನಯ್ಯ 2 ಹೇಯ ಶರೀರವ ಪೋಷಿಸಿಕೊಂಡುಪಾಯವ ಚಿಂತಿಸಿ ಬಳಲುವೆನುರಾಯರ ಶರಣರ ಸಲಹುವರಂಗವಿಠಲನ ಬಿಡುವೆನೇನಯ್ಯ 3
--------------
ಶ್ರೀಪಾದರಾಜರು
ನೋಡಿ ದಣಿಯವೆನ್ನ ಕಂಗಳು ಈ ಸೋದೆಲಿರುವ ಈಡು ಇಲ್ಲದುತ್ಸವಂಗಳ ಬೇಡಿದವಗೀ ಧ್ವಜಬುತ್ತಿ (?) ನೀಡಿ ದಯಸೂರ್ಯಾಡುವರ ಪ ಯತಿಗಳ ಸಮೂಹವೆಷ್ಟು ಮಿತಿಯಿಲ್ಲದ ಬ್ರಾಹ್ಮಣ್ಯವೆಷ್ಟು ಮತಿಹೀನರಿಗೆ ಗತಿಯ ಕೊಡುವ ಪೃಥಿವಿಗಧಿಕ ಗುರುಗಳನ್ನು 1 ಭೂತನಾಥಗೆರಗಿ ನಿಂತು ವಾತಸುತಗೆ ಕೈಯ ಮುಗಿದು ಆತ ನಾರಾಯಣಭೂತನೆಂಬೋ ನೀತವಾದ ದೂತನಂತೆ2 ಕೊಳಲ ಕೃಷ್ಣ ಧವಳಗಂಗಾ ಹೊಳೆಯೊ ಮುತ್ತಿನ ಗದ್ದಿಗೆ ಮ್ಯಾಲೆ ಕಳೆಯು ಸುರಿವೊ ಕಮಲಪಾದ ಇಳೆಯೊಳ್ ಇಲ್ಲೀಳಿಗೆಯ ಪೂಜೆ 3 ಸನಕಾದಿ ಸುರೇಶನೆದುರು ಕಣಕ ಹ್ವಾಲಗ (ಹೋಳಿಗೆ?)ವನ್ನೆ ಮಾಡಿ ಮನಕೆ ಬಂದ ಮೃಷ್ಟಾನ್ನವನು ಜನಕೆ ತೃಪ್ತಿಬಡಿಸುತಿರಲು 4 ಸುತ್ತ ವೃಂದಾವನದ ಮಧ್ಯೆ ಉತ್ತಮರಾದ ವಾದಿರಾಜರು ಸತ್ಯವತಿಯ ಸುತರ ಎದುರು ನಿತ್ಯಾನಂದಭರಿತರಾಗಿ 5 ಸೃಷ್ಟಿಗಧಿಕಾನಂತಾಸನವು ಶ್ವೇತದ್ವೀಪ್ವೈಕುಂಠವೆಂಬೊ ಮುಕ್ತಸ್ಥಳದಲ್ವಾಸವಾದ ಲಕ್ಕುಮಿ ತ್ರಿವಿಕ್ರಮನ 6 ನೇಮನಿಷ್ಠ ಸೇವಕ ಜನಕೆ ಬೇಡಿದ ಇಷ್ಟಾರ್ಥ ಕೊಡುವೊ ಭೀಮೇಶಕೃಷ್ಣ ದಯದಿ ನೋಡಿದೆ ಹಯವದನನಂಘ್ರಿ 7
--------------
ಹರಪನಹಳ್ಳಿಭೀಮವ್ವ
ಸಂಸಾರವೆಂಬ ಸರ್ಪದ ಬಾಧೆಯನ್ನು ಕಂಸಾರಿ ಕೇಳು ಸೈರಿಸಲಾರೆ ಇನ್ನು ಪ ಕಚ್ಚಿ ಬಹುಕಾಲ ಕಡಿಮ್ಯಾಗಲೊಲ್ಲದು ಹೆಚ್ಚುತಲೆ ವೋಗುತಿದೆ ಪೇಳಲೇನು ಅಚ್ಯುತನೆ ನಿಮ್ಮ ನಾಮ ಮಂತ್ರದೌಷಧಿಯನ್ನು ಮುಚ್ಚಿ ಕೊಡುಯೆಂದು ಮನದಲ್ಲಿ ನಿಂದು 1 ಮತ್ತೆ ಮಹಾಪಾಪವೆಂಬ ವಿಷ ತಲೆಗೇರಿ ತತ್ತರಿಸಿ ಕಳವಳಗೊಳಿಸುತಲಿದೆ ಉತ್ತಮರಾ ಜ್ಞಾನವೆಂಬುತ್ತಾರವನೆ ಕೊಟ್ಟು ಹತ್ತುನೂರು ನಾಮದೊಡೆಯ ಹರಿಯೆ ಸಲಹೆನ್ನ 2 ಬೆಂದ ದುರ್ವಿಷಯಗಳು ಹಂದಿನಾಯ್ಗಳಿಗುಂಟು ಎಂದು ದೊರೆವುದೋ ದ್ವಿಜಾಗ್ರಕುಲವು ಎಂದಾದರೂ ಒಮ್ಮೆ ಬಯಸುವಂತಿ ಭಕುತಿ ಕೊಡು ತಂದೆ ಕದರುಂಡಲಗಿ ಹನುಮಯ್ಯನೊಡೆಯಾ 3
--------------
ಕದರುಂಡಲಗಿ ಹನುಮಯ್ಯ
ಜಲದನೀಲಗಾತ್ರ ಏತರ ಚೆಲುವ ರುಕ್ಮಿಣಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ ಪ.ಉದಕದೊಳಗೆ ವಾಸವೇಕೆ ಸದನವಿಲ್ಲವೆ |ಸುದತಿಸುಡುವ ಕಾಡಿಗಿಂತ ಲೇಸು ಅಲ್ಲವೆ1ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ |ಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ 2ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆ |ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ 3ಕರುಳ ಕೊರಳ ಸರವು ಏಕೆ ಸರವು ದೊರಕದೆ |ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ 4ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ 5ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾ !ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ 6ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆ |ಭೂತಗಣಗಳಾಳುವುದಕೆ ಭೀತಿ ಇಲ್ಲವೆ 7ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆ |ಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ 8ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ |............... ಶಾಪ ಹತ್ತಲಿಲ್ಲವೆ 9ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ 10
--------------
ಪುರಂದರದಾಸರು