ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಬಹುದಕೆ ಕನ್ನಡಿಯಾಕೆ ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿಧ್ರುವ ಕುಂಭಿನಿಯೊಳು ಘನಹೊಳೆಯುತ ತುಂಬಿತುಳುಕುತಲ್ಯಾದೆ ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ ಇಂಬು ತಾನೆ ಆಗ್ಯಾದೆ 1 ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯಾ ಚೆನ್ನಾಗಿ ಒಳ ಹೊರಗಿದು ಭಾಸುತಿ ಹ್ಯ ದೆಲ್ಲಾ ಸುಳವು ಬಲ್ಲಾತ ಯೋಗಿ ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ ಹೊಳೆವುತಿಹ್ಯದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ 2 ಇಲ್ಲೆವೆ ಎರಡು ಹಾದಿಯ ಕಟ್ಟಿಗುಲ್ಲುಮಾಡದೆ ನೋಡಿ ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ ಅಲ್ಲಿಯೆ ಮನ ತಾಂ ಮನಿಕಟ್ಟಿ ಫÀುಲ್ಲನಾಭನ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯಲೋ ರನ್ನಾ ನಿನ್ನೊಳು ನಿನ್ನ ಪ ಅನ್ನವ ನೀಡು ತುಪ್ಪವ ಕೊಡುಚೆನ್ನಾಗಿ ಉಣ್ಣುವವನಾರೋ ಅವನಾರೋ 1 ಹೋಳಿಗೆ ಹಿಸುಕಿ ಹಾಲೊಳು ಕುಸುಕಿಹೋಳಿಗೆ ಉಂಬವನ್ಹೆಸರೇನೋ ಹೆಸರೇನೋ2 ಜಡಕೆಯು ಇಲ್ಲಾ ಇದೆಲ್ಲಾಮೃಢ ಚಿದಾನಂದ ನೀನೆನ್ನು ನೀನೆನ್ನು 3
--------------
ಚಿದಾನಂದ ಅವಧೂತರು
ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ ಪ ಉಂಬವ ತಾನಾರು ಉಣಬಲ್ಲವನಾರುಸಂಭವಿಸುವನಾರು ಸಮನಿಸಿ ಇಂಬಾಗಿಹನಾರು 1 ಕಣ್ಣಿಂದಲೆ ನೋಡಿ ನೋಡುವ ಕಣ್ಣು ಕಾಂಬುದೆ ಖೋಡಿಕಣ್ಣೊಳಗದೆ ನೋಡಿ ಕಂಡಾ ಕಣ್ಣಹುದೆಂದಾಡಿ 2 ಕಿವಿಯಿಂದಲೆ ಕೇಳಿ ಕಿವಿಯನು ಕಿವಿಯೆ ಗಯ್ಯಾಳಿಕಿವಿಯೆ ದಿವಾಳಿ ಕಿವಿಗಾ ಕಿವಿಗರಿವಹುದ್ದೇಳಿ 3 ನಾಲಗೆ ನುಡಿಯಿರಲಿ ನುಡಿವುದೆ ನಾಲಗೆ ಬರಿ ತೊಗಲುನಾಲಗೆಯೊಳಗಿರಲು ಮೂಲದ ನಾಲಗೆಯಲಿ ಬರಲು 4 ಮೂಗಿನ ಮೂಲಕ ಪ್ರಾಣ ಅರಿವಡೆ ಮೂಗು ಬಲ್ಲುದೆ ಕೋಣಮೂಗರಿದವ ಜಾಣ ಮೂಗದು ನಿರ್ವಾಣ5 ತನುವಿನ ಒಳಗಿರ್ದು ಚೇತನ ಜನಿಸುತಲಿರುತಿರ್ದುಇನಿತಾದಲಿರ್ದು ಬೆಳಗುವ ತಾನೆ ತಾನಿರ್ದು 6 ರೂಪಕೆ ವಿರಹಿತನೆ ತೋರ್ಪಾ ರೂಪವೇ ತಾನಿಹನಾಲೇಪಕೆ ದೂರಿಹನಾ ಚಿದಾನಂದಪತಿ ಗುರುವವನಾ7
--------------
ಚಿದಾನಂದ ಅವಧೂತರು