ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತವತ್ಸಲ ಹರಿ ಎಂಬ ಬಿರುದು ನಿನ ಗಿತ್ತವರ್ಯಾರಯ್ಯಾ ಹೇ ಜೀಯಾ ಪ ತತ್ತರಿಸುತಲಿಹರು ಈ ಜಗದೊಳು ಅ.ಪ ಪರಿಪರಿಯಲಿ ನಿನ್ನ ಮೊರೆಯ ಹೊಕ್ಕಿರುವ ಪರಮ ಸುಜನರುಗಳು ಈ ಧರೆಯೊಳು ಒರಳಿಗೊಡ್ಡಿರುವ ಶಿರಗಳುಳ್ಳವರಂತೆ ದುರುಳರ ಭಯದಿಂದ ನರಳುತಿರೆ 1 ವಾಸಕೆ ಗೃಹವಿಲ್ಲ ಲೇಶ ಸುಖಕೆ ಅವ ಕಾಶ ಇವರಿಗಿಲ್ಲ ಈ ಭುವಿಯೊಳು ಶ್ರೀಶನಾಗಿರೆ ನಿನ್ನ ದಾಸರೊಳಗೆ ಪರಿ ಹಾಸ ಮಾಡುತಲಿಹೆಯೋ ಜಗದೀಶ 2 ಪರಿ ಘನ್ನಬಿರುದುಗಳು ಇನ್ನು ಉಳಿವುದೆಂತೋ ನಾ ಕಾಣೆ ಸನ್ನುತಿಸುವವರಿಗೆ ಇನ್ನಾದರು ಸುಖ ವನ್ನು ನೀ ದಯಮಾಡೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮಾಧವ ಸಾಧುಜನ ಕಾದಿರುವರೊ ಪ ಆದರದಿಂದ ನಿನ್ನ ನೋಡುವುದಕೆ ಅ.ಪ ಶಾಸ್ತ್ರಗಳಿಂದಲು ಅರಿಯದ ನಿನ್ನ ಪ ವಿತ್ರ ರೂಪವನು ನೋಡಲೋಸುಗ 1 ಘೋರತಪಗಳಿಂದ ಸೇರದೆÀ ನಿನ್ನನು ಚಾರಿಯೊಳ್ ಪೊಂದಲು ಕೋರುತಿಹರೊ 2 ದಾನ ಧರ್ಮಗಳಿಗೂ ಸುಲಭದಿ ದೊರೆಯದ ನೀನೆ ಬಂದಿರಲು ವಿನೋದಿಸುವರೊ 3 ತೀರ್ಥಯಾತ್ರೆಯು ಮನ ಮಾತ್ರ ಶೋಧಿಪುದೆಂದು ಮೂರ್ತಿ ನೋಡಲು ನಿನ್ನ ಪ್ರಾರ್ಥಿಸುವರೊ4 ಅನ್ನದಾನವ ಮಾಡೆ ಹೊನ್ನು ಇವರಿಗಿಲ್ಲ ಮನ್ನಣೆ ಮಾಡಿ ಪ್ರಸನ್ನನಾಗೆಲೊ 5
--------------
ವಿದ್ಯಾಪ್ರಸನ್ನತೀರ್ಥರು
ವರ್ಣಿಸಲು ಸಾಧ್ಯವೆ ಧರೆಯೊಳಿನ್ನು ಗುರುವರ್ಯಸುಶೀಲೇಂದ್ರ ತೀರ್ಥರ ಮಹಿಮೆಯನ್ನು ಪ ಭಾನುನಂದನನಂತೆ ದೀನ ಮಾನವರಿಗೆ ಸಾನುರಾಗದಿ ಕೊಡುವ ದಾನ ನೋಡಿ || ಏನು ಹೇಳಲಿ ದಿವಿಜಧೇನು ಭೂರುಹಮಣಿ ಕ್ಷೋಣಿಯೊಳು ಜಡಪಶು ರೂಪ ತಾಳಿದವು 1 ಪರಮಠಾಧೀಶರು ಪರಿಪರಿಯಲಿಂದವರ ಪರಮ ಔದಾರ್ಯಗುಣ ಪರೀಕ್ಷಿಸುತಲಿ ಬೆರಳು ಕಚ್ಚುತಲಿ ಬೆರಗಾಗಿ ಜಗದೊಳಗೆ ಸರಿ ಇವರಿಗಿಲ್ಲೆಂದು ಶಿರದೂಗಿ ಹೊಗಳಿದರು 2 ಧೀಮಂತ ಜನರೊಡೆಯ ಶ್ರೀಮಂತಮಂದಿರದ ಸ್ವಾಮಿಗಳ ಪೂರ್ಣ ಪ್ರೇಮ ಪಡೆದು | ತಾಮರಸ ಭಾವ ಪೂಜ್ಯ ಶಾಮಸುಂದರ ಮೂಲ ರಾಮ ಮೂರ್ತಿಯನು ಭೂಮಿಯೊಳು ಮೆರೆಸಿದರು 3
--------------
ಶಾಮಸುಂದರ ವಿಠಲ