ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ ಎಲೆ ಥೂ ಪರದೇಸಿ ನೀ ಸುಳ್ಳೆ ಸುಳ್ಳೆ ಮಾಡಬೇಡ ಚೌಕಾಸಿ ಪ ತಿಳಕೊಂಡು ನೋಡು ನೀನು ಸುಧಾರಿಸಿ ಬಲವಾಗಿ ಬರದೇನು ಹಿಂಬಾಲಿಸಿ ಅ.ಪ ಎಷ್ಟು ದುಡಿದಿ ಸತಿಸುತರಿಗಾಗಿ ಗಂಟು ಕಟ್ಟಿಕಟ್ಹ್ಹೂಳಿಟ್ಟಿ ಇವರಿಗಾಗಿ ಅಷ್ಟು ಬಿಟ್ಟು ನಡೀತಿದ್ದಿ ಹಾಳಾಗಿ ನಿನ್ನ ಇಟ್ಟು ಬಂದು ಉಣುತಾರೋ ಹೋಳಿಗಿ 1 ಕಣ್ಣು ಮುಚ್ಚ್ಯಾಟವನಾಡುತಿದ್ದಿ ನೀ ಬಣ್ಣಗೆಟ್ಟು ಖರೆಯೆನುತಿದ್ದಿ ಸುಣ್ಣದ್ಹರಳ್ಹೊತ್ತ ಕೋಣ ಹೋಗಿ ಭರದಿ ಕಂಡು ತಣ್ಣೀರಿನೊಳು ಬಿದ್ದು ಸತ್ತ ಗಾದಿ2 ಘಟ ಇದು ಪುಸಿಯು ಬರಿದೆ ಗಾಳಿಯ ಮಟ್ಟ ವಸುಧೇಯೊಳಧಿಕೆಂದು ತೊಡು ನಿಷ್ಠೆ ನಮ್ಮ ಅಸಮ ಶ್ರೀರಾಮನ ಪಾದ್ಹಿಡಿ ಗಟ್ಟಿ 3
--------------
ರಾಮದಾಸರು
ಶ್ರೀ ಅನಂತಶಯನನ ಸ್ತೋತ್ರ (ಬೆಳಗಾವಿಯ ಶಹಪೂರ ಪೇಟೆಯ ಅನಂತಶಯನನು ಸ್ತುತಿಸುತ್ತ ಅಲ್ಲಿಯ ಕಟ್ಟಿಯ ಆಚಾರ್ಯರನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದ್ದು) ನೋಡಿ ನಾನು ಧನ್ಯನಾದೆನು ಅನಂತಶಯನನ |ನೋಡಿ ನಾನು ಧನ್ಯನಾದೆನು ಪ ನೋಡಿ ನಾನು ಧನ್ಯನಾದೆ |ರೂಢಿಯೊಳಗೆ ಮರುತಮಂದಿರ |ರೂಢಿ ಬೆಳಗಾವಿಯೊಳು ನಿಂದು |ಈಡು ಇಲ್ಲದೆ ಮೆರೆವ ದೇವನ ಅ.ಪ. ಮೂಲರೂಪನು ವೈಕುಂಠ ಬಿಟ್ಟು |ಪಾಲ ಸಾಗರ ಶಾಯಿ ಶ್ರೀಲೋಲ |ಕಾಲಕಾಲದಿ ಭಕ್ತರ ಮೌಳಿ |ಪೊರಿಯಬೇಕೆಂದು ನಿಂದನ 1 ಸಂತಾನ ಸಂಪತ್ತು ಜ್ಞಾನ ಸುಬುದ್ಧಿಯ |ನಂತ ಶಯನ ಇವರಿಗಾ |ನೆಂತು ಸುಖವ ನೀವೆನೆಂದು |ಸ್ವಾಂತದೊಳಗೆ ಬಂದು ನಿಂದನ 2 ಶ್ರೀಶ ಪ್ರಾಣೇಶ ವಿಠಲರೇಯ |ಶ್ರೀ ಸಹಿತವಾಸ ವಾಗಿಲ್ಲ |ಭೂಸುರೋತ್ತಮ ಕಟ್ಟಿಯವರನ್ನ |ಪೋಷಿಸಬೇಕೆಂದು ನಿಂದನ 3
--------------
ಶ್ರೀಶಪ್ರಾಣೇಶವಿಠಲರು