ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓದು ಬೇಡ ನಿನಗೆ ಶಾಸ್ತ್ರ ಬೇಡ ಸುಶೀಲಬುದ್ಧಿಲಿ ದೃಷ್ಟಿ ನಿಲಿಸಿದರೆ ಸಾಕೋ ಪ ವೇದ ಎನ್ನಲಿ ಬೇಡ ಯಮುನೆಧುಮುಕಲಿ ಬೇಡ ಕಪ್ಪೆಯಂತೆ ನೀರಲಿ ಮುಳಗಬೇಡ ಬಾಯಿ ಬಿಗಿಯಲಿ ಬೇಡ ಮೂಗ ಹಿಡಿಯಲಿಬೇಡ ಆ ಜಾಗದಲಿ ದೃಷ್ಟಿ ನಿಲಿಸಿದರೆ ಸಾಕೋ 1 ಆಯಾಸ ಬಡಬೇಡ ಅಡವಿ ಸೇರಲಿ ಬೇಡಕಾವಿ ಕಮಂಡಲ ಧರಿಸಬೇಡಜಪವ ಎಣಿಸಲಿ ಬೇಡ ಉಪವಾಸವಿರಬೇಡಕಾಳಷ್ಟು ದೃಷ್ಟಿ ನಿಲಿಸಿದರೆ ಸಾಕೊ 2 ಎರಡೂ ಕಣ್ಣಿನಿಂದ ನೋಡಿ ನಿಂತಿರಲಾಗಿಶರೀರ ಬಯಲಾದರೂ ಅಳಿವು ತಪ್ಪುದುಅರಿವಿಗೇ ಅರಿವಾಗಿ ಅರಿವಿಗೆ ಕುರುಹಾಗಿಗುರು ಚಿದಾನಂದನ ಗುರುತು ಇಲ್ಲೆನ್ನಬೇಡ 3
--------------
ಚಿದಾನಂದ ಅವಧೂತರು
ನಿನ್ನ ಮಾತಿಗೆ ಮೆಚ್ಚುವನಾವಾವಾ ಪರಾಕು ಎಲೊ ಎಚ್ಚರಿಕೆ ಪ ಎಂತಾಗುವದೆಂದು ನುಡಿಯದಿರಿ ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ 1 ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ 2 ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು ಒದಗಿ ಕಳೆವೋಪಾಯ ಕಡಿಮೆನ್ನದಿರೊ ಮುದದಿಂದ ನಿನ್ನಂಘ್ರಿಗೆರಗುವೆನು ಗತಿಪ್ರದಾ ಕದನದೊಳು ಬದುಕಿ ನರಧ್ವಜನೆ ಸಾಕ್ಷಿ3 ಆಪತ್ತು ಕಳೆವೆ ಬೇಡಿದ ಭೋಜನ ಕೊಡುವೆ ಈ ಪರಾಕ್ರಮ ನಿನಗಲ್ಲೆನ್ನದಿರು ಶ್ರೀಪತಿ ನಿನ್ನ ಲೀಲೆಗೆ ಬೆರಗಾಗುವೆನೊ ತಾಪಸರ ಮಧ್ಯದಲಿ ದುರ್ವಾಸಮುನಿ ಸಾಕ್ಷಿ 4 ನಾನಾ ಭಕ್ತರು ಇನಿತು ಸಾಕ್ಷಿಯಾಗಿರಲಿಕ್ಕೆ ಏನು ಸೋಜಿಗವೆಂಬೊ ಸೋಗು ಯಾಕೆ ಸಿರಿ ವಿಜಯವಿಠ್ಠಲರೇಯಾ ನಾನು ಬೇಡುವದೇನು ಸರ್ವಪ್ರೇರಕೆ ಪ್ರೀಯಾ5
--------------
ವಿಜಯದಾಸ
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು