ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೈತನ್ಯವೊಂದೆ ಸತ್ಯ ಈ ಜಗವೆಲ್ಲ ಭ್ರಾಂತಿ ಮಿಥ್ಯ ಅನಿಸುವಿಕೆ ಇಲ್ಲದಿರುವಾ ಮನವಾಣಿ ಮೀರುತಿರುವಾ ಘನವಾದ ಸ್ವಪ್ರಭಾವ ಅದೆ ನೋಡು ಆತ್ಮಭಾವಾ 1 ನಿಜವಾದ ಚೇತನವದು ಅಜರಾಮರಾಗಿರುವದು ಅದೆ ನೀನು ಎಂದು ತಿಳಿಯೈ ಇದು ಎಲ್ಲ ಕನಸುಮಿಥ್ಯ 2 ಇದು ನೋಡು ಶಾಸ್ತ್ರಸಾರಾ ಇದನರಿತ ಮನುಜ ಧೀರ ಇದನೊಂದೆ ತಿಳಿದುಕೊಳ್ಳೈ ಇದು ಶಂಕರಾರ್ಯಬೋಧ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬೇಡುವೆನು ಇದನೊಂದ ಕರುಣಿಸೋ ಹರಿಯೇ ಬೇಡವೆಂಬುದನೆಲ್ಲ ಏಕೀವೆ ಹರಿಯೇ ಪ ಒಪ್ಪಿಡಿಯ ಅವಲಕ್ಕಿಗೊಲಿದವನು ನೀನಂತೆ ಒಪ್ಪದಿಂದೆಲೆಯ ತಿಂದು ತೇಗಿದೆಯಂತೆ ತಪ್ಪುನೂರೆಂಟುಗಳು ಮನ್ನಿಸಿದೆ ನೀನಲ್ತೇ ಸರ್ಪಶಯನನೆ ನಿನ್ನ ನಾಮಭಜನೆಯ ಮಾತ್ರ 1 ಘೋರ ಪಾಪಿಯು ಮಗನ ಕರೆದಾಗ ಕರುಣಿಸಿದೆ ನಾರಿ ಹೊರದೂಡಿದ ತರಳನನು ಕಾಯ್ದೆ ಭಾರಿ ಮಕರಿಯ ಸೀಳಿ ಕರಿಯನೊಂದನು ಕಾಯ್ದೆ ನೀರಜಾಸನಪಿತನೆ ನಿನ್ನ ಸ್ಮರಣೆಯ ಮಾತ್ರ 2 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲು ಇನ್ನಾವ ಭಾಗ್ಯಗಳ ಬೇಡಲಾರೆನೋ ದೇವ ಪನ್ನಗೇಂದ್ರ ವಿಭೂಷಣ ಪರಿಪಾಲಿಸೈ ಶ್ರೀಶಾ ನಿನ್ನ ಧ್ಯಾನವ ಮಾತ್ರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್