ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯಾನಮಿಪೆ ನಿಮ್ಮುತ್ತಮ ಪದಕೆ ಶ್ರೀ ಸತ್ಯಾಬೋಧ ಗುರುವೆ ಪ. ಚಿತ್ತದಲ್ಲಿ ಶ್ರೀ ವತ್ಸಾಂಕಿತನ ಪದ ನಿತ್ಯಾ ಸ್ಮರಿಪ ಮುನಿಯೆ ಅ.ಪ. ಚಿದಾತ್ಮವಾದ ನಿಮ್ಮುದಾರ ಕೀರ್ತಿಗೆ ಸದಾ ಉದಯವಹುದು ಇದನರಿಯದ ಅಧಮರಿಂದಲಿ ಒದಗುವುದೆ ಕುಂದು ವಿಧವಿಧಾನ್ನವ ಬುಧರಿಗಿತ್ತಂಥ ನಿಧಾನಿ ನೀನೆಂದು ಇದೆ ವಾರ್ತೆ ಕೇಳೆದೂರಿಗೆ ಬಂ ದದಾನರಿತೆನಿಂದು 1 ವೃಂದಾವನಸ್ಥನೆ ಮಂದರಿಗರಿದೆ ನಿ ಮ್ಮಂದಿನ ಕೀರುತಿಯು ಒಂದನರಿಯದ ಮಂದಮತಿಯು ನಾ ಬಂದೆ ನಿಮ್ಮ ಬಳಿಯು ಕುಂದುಗಳನೆಣಿಸದೆ ಸಂದೇಹ ಮಾಡದೆ ಇಂದು ಪೊರೆದು ಆಯು ಮುಂದೆ ಕೊಟ್ಟು ಗೋಪಿಕಂದನ ಪಾದ ದ್ವಂದ ತೋರಿ ಕಾಯೋ 2 ಕೃಪಾಳು ನಿಮ್ಮಂಥ ತಪಸಿಗಳು ಉಂಟೆ ತಪಾನ ನಿಶಿ ತೋರ್ದೆ ಪತಿ ರಾಮನ ಆಪಾದಮಸ್ತಕ ರೂಪ ನೋಡಿ ದಣಿದೆ ಭೂಪತಿಯಿಂದಲಿ ಈ ಪರಿಭವನವ ನೀ ಪ್ರೀತಿಯಿಂ ಪಡೆದೆ ಗೋಪಾಲಕೃಷ್ಣವಿಠ್ಠಲನ ಧ್ಯಾನಿಸುತ ಸ್ವ ರೂಪಾನಂದ ಪಡೆದೆ 3
--------------
ಅಂಬಾಬಾಯಿ
ಮನವೇ ಬರಿದೇ ಚಿಂತಿಸಲಿ ಬ್ಯಾಡಾ | ಹರಿಚರಣ ಸ್ಮರಿಸಿ ಸುಖಿಯಾಗು ಕಂಡ್ಯಾ ಪ ಕರ್ಮ ಜನಿತ ಲಾಭಾ ಲಾಭ | ವಿಧಿ ವರೆದ ಪರಿಯಾ | ತನ್ನಿಂದ ತಾನೇ ಬಹದೆಂದು ಖರಿಯಾ | ಇನ್ನು ತಾ ಬಯಸಿದರೆ ಬಾರದರಿಯಾ | ನಿನ್ನೊಳು ನೀ ತಿಳಿದು ನಂಬು ಹರಿಯಾ 1 ಬಸಿರೊಳಗ ಬೆಳೆಸಿ ಶಿಶುತನದಿಂದ ಯೌವನದ | ದೆಸೆಗೊಟ್ಟು ಸಲುಹಿದ ನಲ್ಲವೇನೋ | ಬಿಸಜಾಕ್ಷ ಅಸಮರ್ಥನಾದನೇನೋ | ಕುಶಲ ನಾನೆಂದ-ಹಂಕರಿಸಿದೇನೋ 2 ಬೊಂಬಿಯಾನು ಆಡಿಸುವ ಸೂತ್ರಧಾರಕನಂತೆ | ಇಂಬಾಗಿ ಕುಣಿಸುವನು ಪ್ರಾಣಿಗಳನು | ಡಿಂಬಿನೊಳು ನಿಂತು ತಾ ಚೇತಿಸುವನು | ಕುಂಭಿನಲಿ ಸ್ವತಂತ್ರನಲ್ಲ ನೀನು | ಅಂಬುಜನಾಭನ ಲೀಲೆಯೆಂದು ಕಾಣು 3 ಬದಿಲಿದ್ದ ಪಾತ್ರೆಯನು ಬಾವಿಯೊಳಗದ್ದಿದ್ದರೆ | ಉದಕ ತುಸು ಬಹದೆಂದು ನುಡಿದು ಸೊಲ್ಲಾ | ನದಿಯೊಳೆದ್ದಲು ನೀರು ಹೆಚ್ಚದಲ್ಲಾ | ಇದನರಿಯದೆವೆ ಭ್ರಾಂತಿಯೊಳಗ ಖುಳ್ಳಾ | ಕುದಿದು ಸಂಸಾರದಲಿ ಸೊರಗಿದನೆಲ್ಲಾ 4 ಗುರು ಮಹಿಪತಿಸ್ವಾಮಿ ಬೋಧಾಮೃತವ ಸವಿದು | ಹರಿಚರಣದಲಿ ಭಾರವಪ್ಪಿಸಿಟ್ಟು | ದೊರಕಿದದರಿಂದ ಸಂತುಷ್ಟಬಟ್ಟು | ಸ್ಥಿರಚಿತ್ತನಾಗಿ ಕಳವಳಿಕೆ ಬಿಟ್ಟು | ತರುಣೋಪಾಯದ ತಿಳಿಯೋ ಜ್ಞಾನಗುಟ್ಟು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರಿ ಸರಿ ಬಿಡು ಬಿಡು ನಿನ್ನಯ ಲೀಲೆಗ ಳರಿಯಲು ಸಾಧ್ಯವೆ ಮುರಹರನೇ ಪ ಸರಸ ನಿನಗೆ ಇದನರಿಯದ ಜನಗಳು ಮರೆತನು ಹರಿ ಭಕುತರನೆಂದು ಸುರಿವರು ಕಂಬನಿ ತರತರಿಸುವರು ದುರಾತ್ಮರಿಗೆ ಪರಾಜಯವೆ ಕಾಣದೆ 1 ಸಿಡಿಲಿನ ಬಡಿತಕೆ ಗುರಿಯಾದವು ಜಗ ನುಡಿದ ವಚನಗಳ ನಡೆಸುವುದಾದರೆ ತಡೆ ತಡೆ ಕಡುಘಾತಕರುಗಳನು 2 ಸೆಳೆಯುತಿಹನು ತನ್ನ ಬಲೆಗೆ ಗೆಳೆಯ ಪ್ರಸನ್ನನೇ ಕುಳಿತೆಡೆಯಲಿ ಜಗ ವಳಿಯುತಿರಲು ಕಿಲಿ ಕಿಲಿ ನಗುತಿಹೆಯ 3
--------------
ವಿದ್ಯಾಪ್ರಸನ್ನತೀರ್ಥರು