ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ
ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ.
ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ1
ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂzಸÀದಿ ಭಜಿಸೆಂದರುಹಿದರೂ 2
ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ 3