ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಮನಕೆ ಆನಂದ ಇಂದಿನದಿ ಕೇಳೀ |ಮನ್ಮನೋರಥ ಮುಂದೆ | ಪೋಗಿ ಸೇರಿಹುದು ಪ ಮಧ್ವ ಸರಸಿಯ ತಟದಿ | ಮಧ್ವಮುನಿ ಸದ್ವಂದ್ಯಮಧ್ವೇಶ ಶಿರಿ ಕೃಷ್ಣ | ನರ್ಚಿಸುತ ನಿತ್ಯಮಧ್ವಮತ ಸಾಮ್ರಾಜ್ಯ | ಪೀಠದಲಿ ಭೂಷಿತರುವಿಶ್ವೇಶ ತೀರ್ಥರಿಗೆ | ವಂದಿಪೆನು ಸತತ 1 ಮಧ್ವ ಸಿದ್ಧಾಂತಗಳ | ಉತ್ಕರ್ಷ ಭೋದಿಸುತವಿದ್ವಜ್ಜನಾರಾಧ್ಯ | ಪಾಠಶಾಲಾವರ್ಧಂತಿ ಹತ್ತಾರು | ನಾಲ್ಕೊರ್ಷ ಉತ್ಸವದಿಅದ್ಯಕ್ಷ ವಿಶ್ವೇಶ | ತೀರ್ಥರನುಗ್ರಹಿಸೇ 2 ಅನಂತೇಶ ಸನ್ನಿಧಿಲಿ | ಅನುಮಾನ ತೀರ್ಥರಿಂದಾನಂತ ಸತ್ ಜ್ಞಾನ | ರಶ್ಮಿ ಸೂಸುತಲೀ |ಜ್ಞಾನ ಕಾರ್ಯವು ಗುರು | ಗೋವಿಂದ ವಿಠಲನಪ್ರೀಣನಕೆ ಜರುಗಿಹುದ | ನೋಡವನೆ ಧನ್ಯ 3
--------------
ಗುರುಗೋವಿಂದವಿಠಲರು
ಭಾವದ ಪೊಂಬ್ಹರಿವಾಣ ಭಕುತಿಯಾ | ತೀವಿದಾರತಿ ಜ್ಞಾನಜ್ಯೋತಿಯಾರುತಿಯಾ ಪ ಆರುತಿ ಬೆಳಗುವೆನಾ | ನಮ್ಮಯ್ಯಗೆ ಆರುತಿ ಬೆಳಗುವೆನಾ | ಶ್ರೀ ಗುರುವಿಗೆ ಆರುತಿ ಬೆಳಗುವೆನಾ 1 ಮುಖದಲಿ ನುಡಿಯುತ ನಾಮಾವಳಿಯಾ | ಸಕಲರು ಪ್ರೇಮದಿ ಹಾಕಿ ಚಪ್ಪಾಳೆಯಾ 2 ನಯನದಿ ನೋಡಿ | ಶರಣವ ಮಾಡಿ | ಭಯವ ನೀಡಾಡಿ | ಶೃುತಿಗಳಪಾಡಿ3 ಇಂದಿನದಿನದಾನಂದವು ನಮಗೆ | ಹಿಂದಿನ ಪುಣ್ಯ ಇದಿರಿಟ್ಟಿತು ಈಗ4 ಒಡಲ್ಹೊಕ್ಕು ಮಹೀಪತಿ ನಂದ ನೊಡೆಯನಾ | ಪಡೆವ ಬನ್ನಿರೋ ಬೇಗ ಮುಕುತಿಯ ಸದನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೃಂದಾವನ ದರುಶನವಾಯಿತು ಇಂದು ಪೋದವುಭವ ವೃಂದಗಳೆಲ್ಲ ಪ ಕುಂದು ಕೊರತೆಯಿಲ್ಲದ ಜ್ಞಾನಗಳೂ ಬಂದು ಘಟಿಸಿತು ಭಕುತಿ ವೈರಾಗ್ಯ ಇಂದಿನದಿನ ಆನಂದಪುಟ್ಟಿ ಹರಿ ದ್ವಂದ್ವ ಪದಗಳನು ತೋರಿಸುವಂಥ1 ಮಾಟಮಾದವು ಆಭರಣಗಳೂ ಸಾಟಿಯಿಲ್ಲದ ಪಷÀ್ಪಮಾಲವ ಧರಿಸಿದ ಕೋಟಿ ಸೂರ್ಯಪ್ರಭೆ ಸೋಲಿಸುವಂಥ2 ನೋಡಿದನಯನ ಅನ್ಯತ್ರನೋಡವೂ ಪಾಡಿದ ಜಿಹ್ವಾ ಅನ್ಯತ್ರಪಾಡವೂ ನಾಡಿನೊಳಿಂಥಾ ಶ್ರೀಪಾದ ರಾಜರಿಗೆ ಈಡುಗಾಣೆ ಮುದ್ದುಮೋಹನವಿಠಲ 3
--------------
ಮುದ್ದುಮೋಹನವಿಠಲದಾಸರು
ಶ್ರೀ ಗಣಾಧಿನಾಥಾಶ್ರಿತ ಸೌಖ್ಯಧಾತ ಪ ನಾಗಭೂಷಣಸುತ ನಾರದಾದಿವಂದಿತ ಅ.ಪ ಗಜವದನ ಗಣೇಶ ಲಂಬೋದರ ಗಿ- ರಿಜಾಮಲ ಸಮುದ್ಭವ ಭೂತೇಶ ಭೂರಿ ಭಜಿಸುವೆ ನಾನಿನ್ನ ಸುಜನರ ಕಾರ್ಯಕೆ ಬರುತಿಹ ವಿಘ್ನ ರಜಗಳಿಗೆ ನಮೊ ನಮೋ ಎಂಬುವೆನಾಂ 1 ಇಂದುಧರನ ತನಯಾ ರವಿ ಶಶಿ ಸಂ- ಕ್ರಂದನ ಮುಖ ಸುರಬೃಂದ ಸೇವ್ಯಮೃದು ಮಂದಹಾಸ ಪೂರ್ಣೇಂದುವದನ ಸ್ಫುರಿ- ತೇಂದೀವರನಯನಾ ಇಂದಿನದಿನ ಸಕಲ ದೇಶದವರು ಮುದ- ದಿಂದ ನಾಟಿ ಭೈರವಿ ಶ್ರೀರಾಗಗ- ದ್ವಂದ್ವಗಳನು ಕೊಂಡಾಡುತಲಿಹರೊ 2 ಪಾಶಾಂಕುಶಗಳ ಕರದಿ ಹಿಡಿದು ನಿಜ- ದೋಷದೂರ ಗುರುರಾಮವಿಠಲನ ದಾಸರದಾಸ್ಯವನಿತ್ತು ಸದಾಸಂ- ತೋಷದಿಂದ ಪಾಲಿಸು ಎನ್ನನು ಸ- ರ್ವೇಶ ಮೋದಕ ಪ್ರಿಯ ವಿಘ್ನೇಶಾ 3
--------------
ಗುರುರಾಮವಿಠಲ
ಸುಳಾದಿ ಕೌಸ್ತುಭ ಫಾಲ ಸಿಂಗಾಡಿಯಂತಿಪ್ಪ ಪುರ್ಬುಕೂರ್ಮನಂದದಿಗಲ್ಲ ಚುಬುಕ ಚುಬುಕಾಗ್ರದಿಂಸಿರಿಯರಸ ಹಯವದನ ಶೇಷಗಿರಿ ಅರಸನ ಕಿರೀಟದÀಪರಿಪರಿಯ ಸೊಬಗ ನಾ ಕಂಡು ಕೃತಾರ್ಥನಾದೆ ನಾ 1 ಮಠ್ಯತಾಳ ಇಂದಿನದಿನ ಸುದಿನ ಗೋವಿಂದನ ಕಂಡ ಕಾರಣಹಿಂದಿನ ಪಾಪವೃಂದವು ಬೆಂದುಹೋಯಿತು ಎನಗೆಮುಂದಿನ ಮುಕುತಿ ದೊರಕಿತುತಂದೆ ಹಯವದನನೊಲವಿಂದ 2 ತ್ರಿಪುಟತಾಳ ಪಾದ ಪದುಮದ ನೆನಹೊಂದಿದ್ದರೆ ಸಾಕು 3 ರೂಪಕತಾಳ ಗುರು ಭಕುತಿಯಿರಬೇಕು ಹಿರಿಯರ ಕರುಣವು ಬೇಕುಹರಿಕಥೆಗಳ ನಿತ್ಯದಲಿ ಕೇಳುತಿರಬೇಕುವಿರಕುತಿ ಬೇಕು ವಿಷ್ಣುವಿನಾರಾಧನೆ ಬೇಕುವರಮಂತ್ರ ಜಪಬೇಕು ತಪಬೇಕು ಪರಗತಿಗೆಪರಿಪರಿಯ ವ್ರತಬೇಕು ಸಿರಿಪತಿ ಹಯವದನನಪರಮಾನುಗ್ರಹ ಬೇಕು ವಿಷಯನಿಗ್ರಹಬೇಕು 4 ಝಂಪೆತಾಳ ಹರಿಸಗುಣ ಸಾಕಾರ ಸಕಲಸುರರೊಡೆಯ ನಿ-ರ್ಜರರೆಲ್ಲ ಹರಿಯ ಕಿಂಕರರೆಂದರಿಯಬೇಕುಮರಣಜನನ ದೋಷಗಳಿಗತಿ ದೂರತರನೆನಿಪಸ್ಮರಣೆ ಸಂತತಬೇಕು ದುರಾಚಾರ ಬಿಡಬೇಕುಸಿರಿ ಹಯವದನ ಶೇಷಗಿರಿ ಅರಸನಸ್ಮರಣೆಯಿದ್ದವನು ಸಂಸಾರ ಭಯವನುತ್ತರಿಸುವ 5 ಆದಿತಾಳ ಶ್ರೀನಾಥ ಪ್ರಭುವೆತ್ತ ಹೀನಯೋನಿಗಳೊಳುನಾನಾದುಃಖಗಳುಂಬ ಹೀನ ಮಾನವನೆತ್ತಭಾನುಮಂಡಲವೆತ್ತ ಶ್ವಾನನುಬ್ಬರವೆತ್ತಮಾನವ ಹರಿ ನಾನೆಂಬುದ ನೆನೆಯದಿರುದಾನವಕುಲವೈರಿ ಹಯವದನ ವೆಂಕಟಶ್ರೀನಿವಾಸನ ದಾಸರ ದಾಸನೆನಿಸಿಕೊ 6 ಏಕತಾಳ ಕೈವಲ್ಯವನೀವ ನಮ್ಮಶ್ರೀವಲ್ಲಭನ ಕೈಯಿಂದನೀವೆಲ್ಲ ಕ್ಷುದ್ರವ ಬೇಡಿಗಾವಿಲನ ಪೋಲದಿರಿಸಾವಿಲ್ಲದ ಮುಕುತಿಪಥವಬೇಡಿಕೊಳ್ಳಿರೊನೋವಿಲ್ಲದಂತೆ ಸುಖಿಸಬಲ್ಲಕೋವಿದರೆಲ್ಲರುಪೂವಿಲ್ಲನಯ್ಯ ವೆಂಕಟಪತಿ ಹ-ಯವದನನ್ನ ಪ-ದವಲ್ಲದನ್ಯತ್ರ ದಾವಲ್ಲಿ ಭಯ ತಪ್ಪದು 7 ಅಟ್ಟತಾಳ ಗಾತ್ರವ ಬಳಲಿಸಿ ಸ್ತೋತ್ರವ ಪಾಡುತ್ತಯಾತ್ರೆಯ ಮಾಡಿ ವೆಂಕಟೇಶನ ಮೂರ್ತಿಯನೇತ್ರದಿ ನೋಡಿ ತಮ್ಮಿಷ್ಟವ ಪಡೆವ ಸ-ದ್ಭಕ್ತರ ಕಂಡುನಿನ್ನ ಮನದ ಭ್ರಮೆಯ ಬಿಡುದೈತ್ಯ ಪೌಂಡ್ರಕಮತವ ನೆಚ್ಚಿ ಕೆಡಬೇಡಚಿತ್ರಚರಿತ್ರ ಹಯವದನನೊಲಿಸಿಕೊ 8 ದಿಲ್ಲಿಯರಾಯನ ಕಂಡು ಪುಲ್ಲಿಗೆಯ ಬೇಡುವರೆತಲ್ಲೆಯೂರಿ ತಪಸು ಇದ್ದಲ್ಲಿ ಸಾಧಿಸಿಕೊಳ್ಳಿರೊಕ್ಷುಲ್ಲಕರೆಂಜಲನುಂಡು ಬಾಳ್ವರ ನೋಡು ಲಕ್ಷುಮಿವಲ್ಲಭನಲ್ಲದೆ ಹೀನಫಲದಾಸೆ ಸಲ್ಲದಯ್ಯಚೆಲ್ವ ಹಯವದನ ತಿಮ್ಮನಲ್ಲದೆ ಕೈವಲ್ಯಕೆಹಲ್ಲು ಹಂಚಿಗೆ ಬಾಯಿತೆರೆದಂತೆ ಅಲ್ಲಲ್ಲಿಗೆ ಪೋಗದಿರಿ 9 ರೂಪಕತಾಳ ಹನುಮಂತನ ನೋಡು ತನುಮನಧನಂಗಳಶ್ರೀನರಸಿಂಹಗರ್ಪಿಸಿದಪ್ರಹ್ಲಾದನ ನೋಡುಅನುದಿನ ವನದಲ್ಲಿ ತಪವ ಮಾಡುವಮುನಿಜನರ ಕಂಡು ನಿನ್ನ ಮನದ ಭ್ರಮೆಯ ಬಿಡುಘನಮಹಿಮ ವೆಂಕಟಪತಿ ಹಯವದನನ ಭೃತ್ಯರ ಪರಿಚಾರಕರ ಭೃತ್ಯನೆನಿಸಿಕೊ 10 ಜತೆÀ ತಿರುಮಲೆರಾಯ ತ್ರಿವಿಕ್ರಮಮೂರುತಿಸಿರಿ ಹಯವದನನ [ಚರಣವೆ ಗತಿಯೆನ್ನು]
--------------
ವಾದಿರಾಜ