ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಶೇಷಸಂದರ್ಭಗಳ ಹಾಡುಗಳು ತಿಳುಪಿದೆನು ಪರಮ ದಯದಿಂದ ತಿಳುಪಿದೆನು ಪರಮ ದಯದಿಂದ ಮುಂದಣ ಕಾರ್ಯ ಒಳಿತು ಬಿನ್ನಪವÀ ಲಾಲಿಸಲಿಬಹುದಯ್ಯ ಪ ಸಕಲ ದೇಶ ಕಾಲದಲ್ಲಿಪ್ಪ ಸಜ್ಜನರ ಸಕಲ ಪರಿಯಲಿಂದ ಪೊರೆವ ದಾತ ಅಕಳಂಕ ನರಸಿಂಹ ಹೊರತಿಲ್ಲೆಂದು ಸಕಲರೂ ಪೇಳಲು ಕೇಳ ಬಲ್ಲೆ 1 ಇನ್ನಾರು ತರುವಾಯ ದಶಮತಿಯ ರಾಗಮವ ಚನ್ನಾಗಿ ಪೇಳುವೆನೆಂಬುದೊಂದು ನಿನ್ನ ವಚನಂಗಳು ಪುಸಿಯಾಗಬಾರದು ಮನ್ನದಲ್ಲಿ ನೋಡಿಕೋ ಕರುಣ ಸಿಂಧೋ 2 ಬಡವಗೆ ಮಾತುಗಳು ಕೊಟ್ಟಿನ್ನು ತಾವಾಗಿ ಒಡೆಯರೇ ತಪ್ಪಿದರೆ ಏನಂಬರೊ ಮಡಿಯ ಹೊರಳುವೆ ನಿನ್ನ ಅಡಿಗೆ ಬೀಳುವೆ ಸ್ವಾಮಿ ಕಡೆ ಹಾಯಿಸೊ ರಂಗ ಎನ್ನಂತರಂಗ 3 ಜನನಿ ಕಾಣಳು ಕಣ್ಣು ಕಿವಿಯು ಕೇಳದು ಅಣ್ಣ ತನಯರು ಇಂದಿಗೂ ಜನಿಸಲಿಲ್ಲ ಮನದಲ್ಲಿ ಹಲವು ಹಂಬಲಗಳೋಲ್ಯಾಡುತಿವೆ ಜನಕ ಜನನೀ ತನಯ ನೀ ಎನಗೆ 4 ಆಸು ಲೋಕಗಳೆಲ್ಲ ನಿನ್ನವೆ ಸರಿ ಸ್ವಾಮಿ ವಾಸುದೇವವಿಠಲ ಬಹುಕಾಲದಿ ಭೂಸುರನ ಮಾಡಿ ಪುಟ್ಟಿಸಿದರೆ ಚಿರಕಾಲಈ ಸುಧಾಪಾನ ನೀ ಮಾಡಿಸೆನಗೆ
--------------
ವ್ಯಾಸತತ್ವಜ್ಞದಾಸರು
ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ ಪ ಕಾಮಕ್ರೋಧವ ಬಿಟ್ಟು ಮನಸಿನೊಳಗೆ ರಾಮ ಮೂರುತಿಯಿಟ್ಟು ಪ್ರೇಮ ತಿಳಿದಷ್ಟು ಆದಷ್ಟು ಕಾಮಿತಾರ್ಥವ ಕೊಟ್ಟು ಹೇಮಗರ್ಭಭವ ಸೋಮ ಸೂರ್ಯರಿಗೆಲ್ಲ 1 ನಿಯಮನ ಮಾಡುವ ಮಹಾ ದೈವವ ಬಿಟ್ಟು ಇರಸಲ್ಲ ಜಗದೊಳಜಾಮಿಳ ಬಲ್ಲ ನಂಬಿ ಕೆಟ್ಟವರಿಲ್ಲ ಧ್ರುವಬಲ ಇಂಬುಗೊಂಡರಲ್ಲ ತುಂಬಿದ ಸಭೆಯೊಳಾಂಬುಜಾಕ್ಷಿ ಅಂಬರ ದೃಷ್ಟಿ ಸುರಿಸಿದ2 ಒಂದೇ ಮನದಿ ಭಜಿಸೆ ಭವವೆಂಬೋ ಬಂಧನವ ಬಿಡಿಸುವ ಮುಂದೆ ಮುಕ್ತಿಯ ಹರಿಸಿ ಕೊಡುವನು ಚಂದದಿ ಅನುಕರಿಸಿ ಬಂಧ ಮೋಕ್ಷಪ್ರದ ಮಾನಿಧಿವಿಠಲನ ಇಂದಿಗೂ ಮುಂದಿಗೂ ಬಿಡದೆ ನೀನೆಂದೆಂದಿಗೂ 3
--------------
ಮಹಾನಿಥಿವಿಠಲ
ಭೂತರಾಜರ ಸ್ತೋತ್ರ ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ಪ ಪ್ರೀತಿ ಇವರಲಿ ಅಧಿಕ ವಾದಿರಾಜರಿಗೆ ಅ.ಪ. ಆತನಾಜ್ಞೆಯಿಂದ ಧರಿಸಲುಕೋತಿಯಂತೆ ಹುಬ್ಬು ಏಕೆ ಹಾರಿಸುವೆಜ್ಯೋತಿ ಸ್ವರೂಪಕ್ಕೆ ಬೂದಿಯು ಮುಸುಕಲುಪಾತಕಿಯು ತಾ ಮುಟ್ಟಿ ಬೊಚ್ಬಿ ಬಾರಿಸನೆ 1 ಗುರುಸೇವೆ ಇವರಂತೆ ಮಾಡ್ದವರು ಯಾರುಂಟುಗುರುಕೃಪಾ ಇವರಂತೆ ಪಡೆದವರು ಯಾರೊಅರಿತು ನೋಡಲು ನಿರುತ ರತಿಗೆ ಕಾರಣವುಂಟುನರಕುರಿ ಇದರ ಮರ್ಮವ ತಿಳಿವದುಂಟೆ 2 ಇಂದಿಗೂ ಸೋದೇಲಿ ಇವರದೇ ಗುರುಪೂಜೆಸುದ್ದಿ ಸುಳ್ಳೆಂದವಗೆ ದೆಬ್ಬೆ ಪೂಜಾಸದ್ದಿಲ್ಲದಿವರಡಿ ಸ್ಮರಿಸುವುದೇ ಗುರುಪೂಜಾತಂದೆ ಶ್ರೀ ನರಹರಿ ಒಪ್ಪುವಾ ಪೂಜಾ 3
--------------
ತಂದೆ ಶ್ರೀನರಹರಿ
ಶ್ರೀ ಶ್ರೀನಿವಾಸ ಭಕುತರ ಪೋಷ ಮಾಂ ಪಾಹಿ ಸುರೇಶ ಪ ಆರಾಧಕ ಪರಿವಾರವ ಪೊರೆಯಲು ಧಾರುಣಿಯೊಳು ಶಿರಿವಾರನಿವಾಸ ಅ.ಪ ವಾರಿಜೋದ್ಭವ ಮುಖಸುರ ಸಂಶೇವ್ಯಫಣಿ ರಾಜ ಸುಶಯ್ಯಾ ಸೇರಿಸೇವಿಪರಘ ತಿಮಿರಕೆ ಸೂರ್ಯ ನೀರದ ನಿಭಕಾಯ ಧಾರುಣಿ ಸುರಪರಿ ಗುರುಮೂರುತಿ ಪ್ರಿಯ 1 ಕಂದರ್ಪನಯ್ಯ ಕವಿಜನಗೇಯ ಬಂಧುರ ಶುಭನಿಲಯ ನಂದನಂದನ ಮಾಮುದ್ಧರ ಕೃಪಯಾನಾಮುಗಿವೆನು ಕೈಯ್ಯಾ ಇಂದಿಗೂ ಬುಧ ಜನರಿಂದ ವೈಭವದಿ ಸ್ಯಂದನವೇರಿದ ಸುಂದರಕಾಯಾ 2 ಇಳಿದೇವಾರ್ಪಿತ ಶ್ರೀ ತುಳಸಿಯ ಹಾರ ಪೀತಾಂಬರಧಾರ ಕುಂಡಲ ಮುಕುಟಾಲಂಕಾರ ಭೂಷಿತ ಶರೀರಾ ಜಲಧಿ ಶಯನ ಮಂಗಳ ರೂಪನೆಭವ ಕಲುಷ ವಿದೂರ 3 ಕೃಷ್ಣರಾಯಾನೆಂಬುವ ಸದ್ಭಕ್ತ ಇರುತಿರಲು ವಿರಕ್ತ ಸಾಷ್ಟಾಂಗ ನಮಸ್ಕøತಿ ಸೇವಾಸಕ್ತ ಗ್ರಾಮವ ರಕ್ಷಿಸುತ ನಿಷ್ಠೆಯಿಂದ ಮನಮುಟ್ಟಿ ಭಜಿಸುತಿರೆ ಥಟ್ಟನೆ ವಲಿದಖಿ ಲೇಷ್ಟ ಪ್ರದಾತಾ 4 ದೇಶಾದಾಗತ ಭಕುತರ ಅಭಿಲಾಷಾ ಪೂರೈಸಲು ಅನಿಶಾ ವಾಸಾ ಮಾಡಿದಿ ಗಿರಿಯೊಳು ಸರ್ವೇಶ ಕೊಡು ಸತ್ಸಹವಾಸ ದೇಶದಿ ಕಾರ್ಪರವಾಸ ಲಕ್ಷ್ಮಿನರಕೇಸರಿ ರೂಪನೆ ಶೇಷಗಿರೀಶ5
--------------
ಕಾರ್ಪರ ನರಹರಿದಾಸರು