ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಮರಸ ನೆರೆ ನಂಬಿದೆ ಪ ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ. ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ ಉಪೇಕ್ಷೆ ಮಾಡಿ ಕಳೆದೆ ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ ಅಪಕಾರ ಕಾಣುತಿದೆಕೋ ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆ ತಪ ವೃದ್ಧರನ್ನು ಹಳಿವೆ ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ 1 ಮಾರನ ಉಪಟಳಾಕಾರದಲಿ ನಾ ಬಲು ಪೋರ ಬುದ್ಧಿಯನು ಮಾಡಿ ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ ಕೋರಿದ್ದು ಇತ್ತು ನೀಡಿ ಕ್ರೂರಮಾನವರೊಳಗೆ ಆಡಿ ವಾರಿಜನಾಭ ನಿನ್ನ ಆರಾಧನೆಯ ಮರೆದು ಧಾರಿಣೀ ಭಾರದೆ ಪರಲೋಕ ಮರೆದೆ 2 ಭೂಸುರರು ಚಂಡಾಲ ಜಾತಿಯೆನ್ನದೆ ಬಲು ಹೇಸಿಕಿಲ್ಲದೆ ತಿರುಗುವೆ ಪರಿ ವೇಷವನು ಧರಿಸಿ ಮೆರೆದೇ ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ ದಾಸ ಸಹವಾಸ ಜರೆದೆ ವಾಸುಕೀಶಯನ ವಸುದೇವತನಯನೆ ನಿನ್ನ ದಾಸನೆನ್ನಿಸದೆ ಅಪಹಾಸ ಮಾನವನಾದೆ 3 ಹರಿದಾಸರ ಬಳಿ ಅರಘಳಿಗೆ ಕೂತರೆ ಶಿರವ್ಯಾಧಿಯೆಂದೇಳುವೇ ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ ಮರೆದು ಲಾಲಿಸಿ ಕೇಳುವೆ ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ ಪರಮ ಹರುಷವ ತಾಳುವೆ ಗುರುಹಿರಿಯರೊಂದುತ್ತರವನಾಡಲು ಕೇಳಿ ಧರಿಸಲಾರದೆ ನಾನು ಮತ್ಸರಿಪೆನವರೊಡನೇ 4 ನಾ ಮಾಡಿದಪರಾಧ ಎಣಿಸಿ ಬರೆದರೆ ಈ ಭೂಮಂಡಲವು ಸಾಲದಿಹುದೊ ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು ಈ ಮತಿಯ ಅದು ಪೋಲದು ಹೋಮ ಜಪತಪಗಳನು ಎಷ್ಟು ಮಾಡಲು ಪಾಪ ಸ್ತೋಮ ಎಂದಿಗು ಪೋಗದೊ ಸಾಮಜವರದ ಜಗನ್ನಾಥ ವಿಠಲ ನಿನ್ನ ಕಾಣಿ 5
--------------
ಜಗನ್ನಾಥದಾಸರು
ಪಾಂಡುರಂಗ ಹರಿ ವಿಠಲ | ಕಾಪಾಡೊ ಇವನಾ ಪ ತೊಂಡ ವತ್ಸಲ ನೆಂಬ | ಬಿರಿದುಳ್ಳೊ ದೇವಾ ಅ.ಪ. ದಾಸವತ್ಯರ ಕರುಣ | ಲೇಸಾಗಿ ಪಡೆದಿಹಗೆಆಸುಪ್ತಿಪತಿ ಸೂಚ್ಯ | ಮೀಸಲುಪದೇಶದಾಸದೀಕ್ಷಾರೂಪ | ಆಶೆಯುಳ್ಳವಗಿತ್ತುಆಶಿಷವನಿತ್ತಿಹೆನೊ | ಹೃಷೀ ಕಪನ ಮೂರ್ತೇ 1 ಪಾದ ಮಹಿಮಾನುಭವಸಾಧಿಸೊ ಇವನಲ್ಲಿ | ಶ್ರೀ ದ ಶ್ರೀ ಹರಿಯೇ 2 ಊರ್ಮ ಷಟ್ಕಳವಕಳೆಯೆ | ಕರ್ಮನಿಷ್ಕಾಮಕದಿಪೇರ್ಮೆಯಲ್ಲಾ ಚರಿಪ | ಸನ್ಮಮನವ ನೀಯೋನಿರ್ಮಲಾತ್ಮನೆ ದೇವ | ಹಮ್ರ್ಯ ಗಹ್ವರದಲ್ಲಿಪರ್ಮ ನಿನ್ನಯರೂಪ | ತೋರಿಸೋ ಹರಿಯೇ 3 ಭವ | ಅಂಬುಧಿಯ ಕಳೆಯೋ 4 ಕೈವಲ್ಯಪ್ರದ ಹರಿಯೆ | ಭಾವುಕರ ಪರಿಪಾಲನೋವಿಲ್ಲದಾ ಸ್ಥಳಕೆ | ಬಯ್ವದೋ ಇದನಾಈ ವಿಧದ ಭಿನ್ನಪವ | ಸಲಿಸೆಂದು ಪ್ರಾರ್ಥಿಸುವೆಧೀವರನೆ ಹರಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮಧ್ವಾಚಾರ್ಯರು ಮಧ್ವಮುನಿರಾಯ ಭಕ್ತೋದ್ಧಾರನೆ ಪ ಶುದ್ಧಮೂರ್ತಿಯಾದ ಕೃಷ್ಣ ದ್ವೈಪಾಯನರ ಶಿಷ್ಯ ಅ.ಪ ತಾಮಸರ ಮುರಿದು ಚೂ ಡಾಮಣಿಯ ಸ್ವಾಮಿಗಿತ್ತೆ 1 ಭೂಮಿ ಆಶೆಯುಳ್ಳ ದುರ್ಯೋಧನಾದ್ಯರ ನಿರ್- ನಾಮವ ಹೊಂದಿಸಿ ಕೃಷ್ಣನ ಪ್ರೇಮಕೆ ನೀ ಪಾತ್ರನಾದೆ 2 ಇಪ್ಪತ್ತೊಂದು ಭಾಷ್ಯಗಳಾ ಖಂಡಿಸೀ ಸರ್ಪಶಯನ ಸರ್ವೋತ್ತಮನೆಂದು ಸಾರಿಸಿ ಅಪ್ಪ ಗುರುರಾಮ ವಿಠಲನ ತಪ್ಪಾದೆ ಪೂಜಿಸುತಿರ್ಪ 3
--------------
ಗುರುರಾಮವಿಠಲ