ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ಯಾಮಸುಂದರ ಕಾಮಿತಾರ್ಥದಾ ಪ್ರೇಮದಿ ಬಾಶ್ಯಾಮಸುಂದರಾ ಕಾಮಜನಕನೆ ಪ್ರೇಮದಿಂದಲಿಸೋಮಶೇಖರ ನುತ ಶಾಮಸುಂದರಾ ಪ ಭೂರಿ ಸಭೆಯೊಳು ನೀ ಶ್ಯಾಮಸುಂದರಾ 1 ಸಣ್ಣ ಶಿಶುವು ಬಂದು ವನದಿ ನಿಮ್ಮ ನಾಮ ಸ್ಮರಿಸೆ ಮನದಿಧನ್ಯಬಾಲಕನನ್ನು ಕರುಣದಿ ಮನ್ನಿಸಿದೆಯೋ ನೀಶ್ಯಾಮಸುಂದರಾ 2 ಈ ಶರೀರದೊಳಗೆ ನಿನ್ನ ವಾಸುದೇವನೇ ನೋಡೋಆಶೆಯಿಂದಲಿ ಪೋಷಿಸಿಂದಿರೇಶಾ ಬೇಗನೆ ಬಾಶ್ಯಾಮಸುಂದರಾ 3
--------------
ಇಂದಿರೇಶರು
ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ 1 ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ ದಾಸ ನಾನು ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು 2 ತ್ರಿವಿಡಿ ತಾಳ ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು ಸೃಷ್ಟಿಯೊಳಗೆ ಬಹು ಧನವಂತರ ಮನೆಯ ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು 3 ಅಟ್ಟತಾಳ ಕುರುಡ ದಾಸನು ನಾನು ಕುಂಟ ದಾಸನು ನಾನು ಹುರಡಿಗೆ ಮಾಡುವ ಹುರಳಿಲ್ಲದ ದಾಸ ಸರಿಯವರನು ಕಂಡು ಮರಗುವ ದಾಸನು ಎರಡು ಕಡೆ ಕೆಟ್ಟ ಭರಡಿ ದಾಸನು ನಾನು ಗರಕೆ ಕರದಾರೆ ಹಿಗ್ಗುವ ದಾಸನು ನಾನು 4 ಆದಿತಾಳ ಹೀನ ದಾಸನು ನಾನು, ನೀಚ ದಾಸನು ನಾನು ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು ಮಾನವಿಲ್ಲದೆ ಅಪಮಾನ ದಾಸ ನಾನು ದಾನ ಧರ್ಮವಿಲ್ಲದ ಹೀನ ದಾಸನು ನಾನು ಅನಂತ ಜನನಕ್ಕೆ ಹೊಲೆದಾಸನು ನಾನು ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು 5 ಜತೆ ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ 6
--------------
ವಿಜಯದಾಸ
ಪುರಂದರ ಗುರುವರ ಇನ್ನು ಭಾಳ ಹೊತ್ತಾಯಿತು ಭಕುತ ಜನಪ್ರಿಯ ಪ. ಶ್ರೀಶನಪ್ಪಣೆಯಿಂದ ಭೂಲೋಕದಲಿ ಪುಟ್ಟಿ ಆಶೆಯಿಂದಲಿ ಧನ ಗಳಿಸಿ ಕೋಟಿ ವಾಸುದೇವನು ಎಚ್ಚರಿಸಲು ವೈರಾಗ್ಯ ದಾಸತ್ವದಲಿ ಜಗದಿ ಮೆರೆಯಬೇಕು 1 ವ್ಯಾಸ ಮುನಿಯಿಂದುಪದೇಶಕೊಳ್ಳಲುಬೇಕು ದಾಸತ್ವ ಜಗದಲಿ ಸ್ಥಾಪಿಸಬೇಕು ದೋಷರಹಿತ ಮಧ್ವಶಾಸ್ತ್ರ ತತ್ವಗಳ ಪ್ರ ಕಾಶಗೈಸುತ ಕವನಗೈಯ್ಯಬೇಕು 2 ಸತಿಸುತ ಪರಿವಾರ ಭೂ ಸಂಚರಿಸಬೇಕು ಸ್ತುತಿಸುತ್ತ ಹರಿಯನ್ನು ಕುಣಿಸಬೇಕು ಜತನದಿ ನಿಜತತ್ವಗಳನರಿಯಲಿಬೇಕು ಕ್ಷಿತಿಗೆ ಅಚ್ಚರಿ ಮಹಿಮೆಯ ತೋರಬೇಕು 3 ಪುಷ್ಯದಮಾವಾಸೆ ಹರಿಪುರ ಸೇರಲು ಶಿಷ್ಯಕುಲವು ಜಗದಿ ಬೆಳೆಯಲೆಂದು ಶಿಷ್ಯ ವಿಜಯದಾಸರಿಗೆ ಅಂಕಿತವನಿತ್ತು ಶಿಷ್ಯ ಪ್ರಶಿಷ್ಯ ಸಂತತಿ ಬೆಳಸಬೇಕು 4 ಪಾಪಿ ಜನಗಳ ಪಾವನಗೈಯಲಿಬೇಕು ತಾಪಪಡುವರ ಪೊರೆಯಲೆತ್ನಿಸಬೇಕು ಶ್ರೀಪತಿ ದಾಸತ್ವ ಜಗದಿ ನಿಲ್ಲಿಸಬೇಕು ಗೋಪಾಲಕೃಷ್ಣವಿಠ್ಠಲನ ಸ್ಮರಿಸಬೇಕು 5
--------------
ಅಂಬಾಬಾಯಿ
ಪುರಂದರದಾಸರು ಎಂತು ಪೊಗಳಲಿ ನಾನು ಪ ಕಂತುಪಿತನೇಕಾಂತ ಭಕ್ತನ ಪಂಥವನು ಪದ ಪಂಕ್ತಿಯಲಿ ತುಂಬಿಟ್ಟು ಸಲಹಿದ ದಾಸವರ್ಯರ ಅ.ಪ. ನಿತ್ಯ ನೆನೆಯುತ್ತ ಪಂಡಿತೋತ್ತಮರೊಡನೆ ಸುಖಿಸುತ್ತ ಕಂಡು ಹರಿಯನು ಮುಂದೆ ಕುಣಿಯುತ್ತ ಕುಂಡಲಿಗೆ ನಿಜ ಭೂಷಣವು ಎನಿಸುತ್ತ ಭಂಡಜನರಾ ಪುಂಡುಮಾರ್ಗವ ಕಂಡಕಂಡೆಡೆ ಖಂಡ್ರಿಸುತ ಬ್ರಹ್ಮಾಂಡ ದೊಡೆಯನ ಭಕ್ತಿ ಬಿತ್ತುತ ಹಿಂಡಿ ಮತಿಮತ ರಸವ ಕುಡಿಸಿದ ದಾಸವರ್ಯರ 1 ಮೊದಲು ಗಾಯಕ ದೇವಸಭೆಯಲ್ಲಿ ಮುದದಿ ಕಾಮುಕ ಚೇಷ್ಟೆ ನಡೆಸುತಲಿ ಪದವಿಯಿಂ ಚ್ಯುತನಾಗಿ ದಾಸಿಯಲಿ ಉದಿಸಿ ಬಂದು ಸಾಧು ಸಂಗದಲಿ ಬದಿಗೆ ತಳ್ಳುತ ಭವದ ಕೋಟಲೆ ಮುದದಿ ಜಪಿಸುತ ವಾಸುದೇವನ ಪದವಿ ಸಾಧಿಸಿ ದೇವ ಋಷಿ ತಾ ಪದುಮನಾಭನ ನೆನೆದು ನರಕವ ಬ ರಿದು ಮಾಡ್ಡ ಮಹಾನುಭಾವನ 2 ಕಾಸಿನಾಶಯವು ಮೋಸವೆಂತೆಂದು ಹೇಸಿವಿಷಯದಿ ಲೇಸು ಸಿಗದೆಂದು ಶ್ರೀಶ ಸಿಗುವನು ದಾಸಗೆಂತೆಂದು ಆಶೆಯಿಂದಲಿ ಸಾರಬೇಕೆಂದು ಓಸು ಸಂಪದ ನೂಕಿ ಭರದಿಂ ವ್ಯಾಸರಾಯರ ಶಿಷ್ಯನೆನಿಸುತ ವಾಸುದೇವನ ದಾಸನಾಗುತ ದೋಷಜ್ಞಾನವ ನಾಶಮಾಡಿದ ದೇಶ ತಿರುಗಿದ ದಾಸವರ್ಯರ 3 ಭಕ್ತಿಯಿಲ್ಲದ ಗಾನ ತಾನಿನ್ನು ಕತ್ತೆಕೂಗನುಮಾನವಿಲ್ಲೆಂದು ನಿತ್ಯದೇವನ ಗಾನ ಗೈಯಲು ಗಾತ್ರವಿದು ನಿಜವೀಣೆಯೆಂತೆಂದು ಸಪ್ತಸ್ವರಗಳ ಕ್ಲಪ್ತಮರ್ಮಗ ಳೆತ್ತಿ ತೋರುತ ಶ್ರೇಷ್ಠತರ ಸಂಗೀತ ಸೂತ್ರ ಸಂಮತ ನೀತಿ ನುಡಿದಿಹ ದಾಸವರ್ಯರ 4 ಪೊಂದಿ ಪುಸ್ತಕ ದೀಚೆ ಬರದೆಂದು ಛಂದ ಮರ್ಮವ ತಂದಿಡುವೆ ನಮ್ಮೀ ಅಂದ ಕನ್ನಡ ದೊಳಗೆ ಎಂತೆಂದು ಕಂದ ವೃತ್ತ ಸುಳಾದಿ ಪದಗಳ ಛಂದ ಭೂಷಣವೃಂದ ನೀಡುತ ನಂದದಿಂ ಕರ್ಣಾಟಮಾತೆಯ ಮುಂದೆ ತಾ ನಲಿವಂತೆ ಮಾಡಿದ ದಾಸವರ್ಯರ 5 ನಾರಿ ಮನೆ ಪರಿವಾರ ಹರಿಗೆಂದು ಸಾರವನ್ನೆ ಮುರಾರಿ ಮನೆಯೆಂದು ಚಾರು ಶ್ರುತಿಗತಸಾರ ನಡತೆಯಲಿ ಸೂರಿಯಾದವ ತೊರಬೇಕೆಂದು ನೀರಜಾಕ್ಷನ ಧೀರ ದೂತನ ಸಾರ ಮನವನು ಸಾರಿ ಸಾರುತ ದೂರ ಒಡಿಸಿ ಮೂರು ಮತಗಳ ನೇರ ಸುಖಪಥ ತೋರಿಸಿದ ಮಹರಾಯ ದಾಸರ 6 ಕರ್ಮಕೋಟಲೆಗಿಲ್ಲ ಕೊನೆಯೆಂದು ಮರ್ಮತಿಳಿಯುತ ಬಿಂಬಹೃದಯಗನ ನಿರ್ಮಮತೆಯಿಂದೆಸಗಿ ಕರ್ಮಗಳ ಕರ್ಮಪತಿಗೊಪ್ಪಿಸುತ ಸರ್ವಸ್ವ ಭರ್ಮಗರ್ಭನ ಭಕ್ತಿ ಭಾಗ್ಯದಿ ಪೇರ್ಮೆಯಿಂ ಹರಿದಾಸನೆಸಿಸುತ ಶರ್ಮ ಶಾಶ್ವತವಿತ್ತು ಸಲಹುವ ವರ್ಮ ನೀಡಿದ ವಿಶ್ವಬಾಂಧವ 7 ಇಂದಿರೇಶನು ಮುಂದೆ ಕುಣಿಯುತಿರೆ ಕುಂದುಂಟೆ ಮಹಿಮಾತಿಶಯಗಳಿಗೆ ತಂದೆ ಕೌತಕ ವೃಂದ ಮಳೆಗರೆದು ಕಂದನನು ಪೊರೆದಂದವೇನೆಂಬೆ ಬಂದು ಸತಿಸಹ ಮಂದಿರಕೆ ಗೋ ವಿಂದ ಪಾಕವಗೈದು ಬ್ರಾಹ್ಮಣ ವೃಂದಕಿಕ್ಕುತ ದಾಸರಿಗೆ ಮುದ ಮಾಧವ ಭಾಗ್ಯಕೆಣೆಯುಂಟೆ 8 ದೀನ ಹೊಲೆಯಗೆ ಪ್ರಾಣ ಬರಿಸಿದನು ಏನು ಒಲ್ಲದೆ ಹರಿಯ ಯಜಿಸಿದನು ಜ್ಞಾನ ಭಾಗ್ಯದಿ ಮುಳುಗಿ ತೇಲಿದನು ದೀನ ಜನರುದ್ಧಾರ ಮಾಡಿದನು ದಾನಿ ಜಯಮುನಿ ವಾಯು ಹೃದಯಗ ಚಿನ್ಮಯ ಶ್ರೀ ಕೃಷ್ಣವಿಠಲನ ಗಾನ ಸುಧೆಯನು ಬೀರಿಸುತ ವಿ ಜ್ಞಾನವಿತ್ತ ಮಹೋಪಕಾರಿ ವಿಶೇಷ ಮಹಿಮನ 9
--------------
ಕೃಷ್ಣವಿಠಲದಾಸರು
ಮರಿಯಾದೆ ಅಲ್ಲವೊ ನಿನಗೆ ಮನವೆ ಪ ಸರಿಯಾಗಿ ನಡೆಯದೆ ನೀ ಚಪಲ ಪಡುವದು ಅ.ಪ ಪರಧನ ಪರಕಾಮಿನಿಯರ ನೋಡಿ ಎರಗುತ ತನಗದು ಬೇಕೆಂಬದು 1 ಆಶೆಯಿಂದಲಿ ವೃಥಾಯಾಸವಲ್ಲದೆ ಏನು ಲೇಸು ಕಾಣೆನು ಬಲು ಘಾಸಿಪಡುವೆ 2 ಮಾತು ಮಾತಿಗೆ ನಾನು ನನ್ನದೆಂಬೋದು 3 ನಿಂತಲ್ಲಿ ನಿಲ್ಲದೆ ಸಂತತ ದುರ್ವಿಷಯ ಭ್ರಾಂತಿಯೊಳು ಮುಳುಗಿ ಚಿಂತಿಸುವದು4 ಗುರುರಾಮವಿಠಲನ ಸಿರಿನಾಮದ ರುಚಿ ಸುರಿದು ತೃಪ್ತಿಗೊಳದೆ ಬರಿದೆ ಮರುಗುವೆ5
--------------
ಗುರುರಾಮವಿಠಲ