ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಲ್ಲಮರ್ಧನ ರಾಣಿ - ಮಹ ಲಕ್ಷುಮೀ ಪ ಖುಲ್ಲ ಜನರೆದೆದಲ್ಲಣೆಯೆ | ಕೊಲ್ಲಾಪುರ ನಿಲಯೆ ಅ.ಪ. ಪ್ರಕೃತಿ ಚೇತಾತ್ಮೆ ಜಡ | ಪ್ರಕೃತಿ ದ್ರವ್ಯದ ಕಾರ್ಯವಿಕೃತಿ ಗೊಳಿಸುತ ಮೊದಲು | ವೈಕೃತವು ತದನಂತರಾ |ವ್ಯಕುತಿ ಗೈಯುತ ಲಿಂಗ | ಪ್ರಕೃತಿ ಕಾರ್ಯವ ಮಾಡಿಸುಕೃತ ತ್ರಿವಿಧರ ಸಹಜ | ಪ್ರಕೃತಿ ಶಬ್ದನಿಗೀವೇ 1 ಪರಿಭವ ಕಾರ್ಯನೀ ಮಾಳ್ಪೆ ಪ್ರಜ್ಞಾಂತ | ಪ್ರೇಮ ರೂಪದಲೀಈ ಮಹತ್ತುಪಕಾರ | ಸಾಮಸನ್ನುತ ಹರಿಯನೇಮದಿಂದಲಿ ಗೈವ | ಭಾಮೆಗಾ ನಮಿಪೇ 2 ಹರಿಕಾರ್ಯ ಸತ್ಸಾಧ್ಯೆ | ವಿರಜೆ ರೂಪದಿ ಹರಿಯೆ ||ವರ ಮಂದಿರಾವರಣ | ನೆರೆ ವಿರಚಿಸೀ |ಸರುವ ಸಜ್ಜೀವ ತವ | ಸರಿತದೋಲ್ ಅವಭೃತವವಿರಚಿಸಲು ಜಡ ಪ್ರಕೃತಿ | ಹರಿಸುವೆಯೆ ದಯದೀ 3 ಶ್ರೀ ಸಿತ ದ್ವೀಪಾದಿ | ಆ ಸುರೂಪವ ತಾಳಿವಾಸುದೇವನ ಸೇವೆ | ಆಶೆಯಲಿ ಗೈವೇ |ಈಸು ತವ ಮಹಿಮೆಯನು | ತೋಷದಲಿ ಸ್ತುತಿಪರಭಿಲಾಷೆ ಸಲಿಸುತ ತೋರ್ಪೆ | ವಾಸುದೇವನ ರೂಪ 4 ಸತಿ ಪತಿ ತೋರೇ 5
--------------
ಗುರುಗೋವಿಂದವಿಠಲರು
ಶ್ರೀ ವಿಷ್ಣು ತೀರ್ಥರು ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ಪ ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ ಬಡವರಂತತಿ ಬಾಯ ಬಿಡುವರಲ್ಲವರು ಅ.ಪ ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು ಮುಂಚೆ ತಿಳಿವರು ಈ ಪ್ರಪಂಚದಲ್ಲಿ ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು 1 ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು ಅಂಗದಲಿ ಸುರಿವರು ಕಂಗಳೊದಕವ ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ ಮುಂಗೈಯ್ಯ ಮುದ್ರೆಗಳ ಧರಿಸುವರಿವರು 2 ವಾಸುದೇವನ ದಾಸ ದಾಸರಾದೆವೆಂಬೊ ಆಶೆಯಲಿ ಅವನ ಸಹವಾಸ ಬಯಸುವರು ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು 3
--------------
ಅನಂತಾದ್ರೀಶರು