ಸರ್ವಾಧಾರ ವಿಠಲ | ಶರ್ವ ನೊಡೆಯ ಪ
ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ.
ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ 1
ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ 2
ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ 3
ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ 4
ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ 5