ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರ ಶಿಶು ನಾನು ಶ್ರೀಹರಿ ದಾಸರು ಶಿಶು ನಾನು ಪ ಹೇಸಿ ಪ್ರಪಂಚದ ವಾಸನಳಿದು ಜಗ ದೀಶನ ಶ್ರೀಪಾದದಾಸಾನುದಾಸರ ಅ.ಪ ಮರವೆ ಮಾಯ ತರಿದು ಲೋಕ ದರಿವಿನೊಳಗೆ ಬೆರೆದು ಪರಿಪರಿಯಿಂದಲಿ ನರಹರಿ ಚರಣವ ಸ್ಮರಣೆಯೊಳಿಟ್ಟು ಬಲು ಹಿರಿಹಿರಿ ಹಿಗ್ಗುವ 1 ಮೋಸಕ್ಲೇಶವನಳಿದು ಭವದ ಆಶಾಪಾಶತುಳಿದು ಸೋಸಿಲಿಂದ ಅನುಮೇಷ ಬಿಡದೆ ಹರಿ ಸಾಸಿರ ನಾಮಮಂ ಬೇಸರದ್ಹೊಗಳುವ 2 ಸತ್ಯ ಸನ್ಮಾರ್ಗಬಿಡದೆ ಮನವಂ ಎತ್ತ ಕದಲಗೊಡದೆ ನಿತ್ಯ ನಿರ್ಮಲಾತ್ಮ ಕರ್ತು ಶ್ರೀರಾಮನ ಅರ್ತು ಭಜಿಸುವಂಥ 3
--------------
ರಾಮದಾಸರು