ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆಪ ಪರಿಪರಿವಿಧದಲಿ ಪರಿತಪಿಸುವರನು ಕರವಿಡಿದುದ್ಧರಿಸುತ ಸಂತೈಸುವ ಉರಗಾದ್ರಿವಾಸ ವಿಠ್ಠಲ ಸಂತೈಸು ಚರಣಕಮಲಗಳಿಗೆರಗಿ ಭಿನ್ನೈಸುವೆ1 ಮಂದಮತಿಯು ನಾನೆಂದು ವಂದಿಪರ ಬಂಧನ ಕಳೆಯುತ ಮುಂದೆ ಗತಿಯು ತೋರಿ ತಂದೆ ವೆಂಕಟೇಶ ವಿಠ್ಠಲ ಭಕುತರ ಸಂದಣಿ ಪೊರೆಯುವರೆಂಬ ಬಿರುದು ದೇವ 2 ಆಶಾಪಾಶಗಳಿಗೊಳಗಾಗಿಹ ಮನ- ದಾಸೆ ಪೂರೈಸುತ ನೀ ಸಲಹೈ ಗುರು ವಾಸುದೇವ ವಿಠ್ಠಲ ಹರಿ ಭಕುತರ ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3 ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ ಒದಗಿದ ಪಾಪದಿ ಹೆದರÀುತಲಿದೆ ಮನ ಪದುಮಜಾಂಡ ಸೃಜಿಸಿದ ಪರಮಾತ್ಮನಿ- ಗದ್ಭುತವೇ ಪಾಮರರನು ಪೊರೆವುದು 4 ಮಣಿದು ಬಿನ್ನೈಸುವೆ ಪವನಮತವÀ ತೋರಿ ಬಿನಗು ಬುದ್ಧಿಗಳ ಗಮನಕೆ ತಾರದೆ ಕಮಲನಾಭ ವಿಠ್ಠಲ ತವ ಕರುಣದಿ ಮನದ ಕ್ಲೇಶಗಳ ಕಳೆದು ಉದ್ಧರಿಸುತ 5
--------------
ನಿಡಗುರುಕಿ ಜೀವೂಬಾಯಿ