ಇದೇ ಸಮಯ ಹರಿಯೇ ಇದೇ ಸಮಯ ಪ
ಕಮಲ ತೋರಿ ಸದಾ |
ಬಿಡದೆ ಎನ್ನ ಮುದದಿ ಪೊರೆವುದಕೆ ಅ.ಪ
ನಾನಾ ಯೋನಿಯಲಿ ಬಂದು ಜ್ಞಾನ ದುರ್ಲಭನಾಗಿ |
ಹೀನನಾದವಗೆ ಸುಜ್ಞಾನ ಪಾಲಿಸುವುದಕೆ 1
ಆಶಾಪಾಶಕೆ ಸಿಲುಕಿ ಶ್ರೀಶನ ಮರೆತೆನೋ |
ಲೇಸು ದಾರಿಯ ತೋರಿ ದಾಸನ ಕಾಯುವುದಕೆ 2
ಸಂತರ ಸಂಗವ ಸಂತತ ಪಾಲಿಸಿ
ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ 3
ಹಿಂದಿನ ಸುಕೃತದಿ ಬಂದೆ ಭೂಸುರನಾಗಿ |
ಮುಂದಿನ ಪದಕ್ಕಾಗಿ ಕುಂದದೆ ಸಲಹುವುದಕೆ 4
ಪತಿ ವಿಜಯವಿಠ್ಠಲ ವೆಂಕಟ |
ತಾಪವ ಕಳೆದೆನ್ನ ಕಾಪಾಡುವುದಕೆ 5