ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕೊಡು ಕಾರ್ತಿಕೇಯಾ | ತವ | ಶಿರದ ಮೇಲಿಹ ಗಂಧ ಸಿಂಗಾರ ಹೂವಾ ಪ ದುರಿತ ಕೋಟಿಗಳನು ತರಿಯೇ | ಮಹಾ | ದುರುಳರುಪದ್ರದ ಗಿರಿಯನು ಮುರಿಯೇ ಪರಮ ಕುಲಿಶದಂತೆ ಇರುವಾ | ತವ | ಶಿರದ ಮೇಲಿರುವ ಸಂಪಿಗೆ ಹೂವ | ದೇವಾ 1 ಕೆಡುಕಿನ ತಾಮಸವಳಿದೂ | ತವ | ದೃಢಭಕ್ತಿ ಎನ್ನಯ ಮನದೊಳು ಮೊಳೆದೂದೃಢವಾಗಿ ನೆಲೆಸುವ ತೆರದೀ | ತವ | ಮುಡಿ ಮೇಲಿಹ ಮಲ್ಲಿಗೆಯನತಿ ಮುದದೀ2 ಆಶಾದಿಗಳ ಪರಿತ್ಯಜಿಪಾ | ತವ | ದಾಸರ ಚರಣಯುಗ್ಮಕೆ ನಮಸ್ಕರಿಪಾ | ಲೇಸಿನ ತಿಳಿ ಜನಿಸಲಿಕೇ ಪಾವಂ- ಜೇಶ ನೀ ಪೊತ್ತು ಕೊಂಡಿರುವ ಅಶೋಕೇ 3
--------------
ಬೆಳ್ಳೆ ದಾಸಪ್ಪಯ್ಯ
ಕರುಣಾನಿಧಿ ಸುರವರ ಗುಹ ಶರಜಾ ಪರಮಪುರುಷ ಅಘಹರ ನೀನೆ ಶರಜಾ ಪ ನಿಗಮ ವಜ್ರ ಶರಜಾ | ಅಗಜೆಯ ಮೋಹದ ಮಗ ನೀನೆ ಶರಜಾ 1 ಇಂದುವದನ ಅರವಿಂದೇಕ್ಷಣ ಶರಜಾ |ವೃಂದಾರಕ ಕುಲ ಮಂದಾರ ಶರಜಾ |ಕಂದರ್ಪ ಶತರೂಪ ಸುಂದರ ಶರಜಾ | ನಂದಿಧ್ವಜ ಜನಪ್ರಿಯ ಕಂದನೆ ಶರಜಾ 2 ವಾಸವ ವಂದ್ಯ ಸರ್ವೇಶನೆ ಶರಜಾ ಆಶಾದಿ ರಹಿತ ವಲ್ಲೀಶನೆ ಶರಜಾ ದಾಸ ಜನರ ಸದಾ ಪೋಷಕ ಶರಜಾ ವಾಸ ಪಾವಂಜೆ ಸೇನೇಶನೆ ಶರಜಾ 3
--------------
ಬೆಳ್ಳೆ ದಾಸಪ್ಪಯ್ಯ