ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದ್ದರೆ ಹೀಗೆ ಇರಬೇಕು ಇಲ್ಲದಿದ್ದರೆ ಕಾಯವ ಬಿಡಬೇಕು ಶುದ್ಧ ಚಿತ್ತವಾಗಿ ಹೃದಯದೊಳಿದ್ದ ವಸ್ತುವನ್ನು ನಿನ್ನ ಬುದ್ಧಿಯಿಂದ ನೀನೆ ತಿಳಿಯುತ್ತಿದ್ದು ಜೀವನ್ಮುಕ್ತನಾಗಿ ಪ ಕಲ್ಲು ಮರಳು ಕಾಷ್ಠತರುಗಳಲ್ಲಿ ಗಿರಿಗಳಲ್ಲಿ ಚರಿಸುವ ಹುಲ್ಲೆ ಕರಡಿ ವ್ಯಾಘ್ರ ಸಿಂಹದಲ್ಲಿ ಪಕ್ಷಿ ನಾನಾಮೃಗ ಗಳಲ್ಲಿ ವಸ್ತುವೊಬ್ಬನಲ್ಲದಿಲ್ಲವೆಂದು ಭಾವಿಸುತ್ತ 1 ದ್ರಷ್ಟವಾಗಿ ತೋರ್ಪುದೆಲ್ಲ ನಷ್ಟವಾಗಿ ಪೋಪುದೆಂದು ದಿಟ್ಟನಾಗಿ ತಿಳಿದುಜ್ಞಾನ ದೃಷ್ಟಿಯಿಂದಲೆ ದುಷ್ಟಜನರ ಸಂಗವನ್ನು ಬಿಟ್ಟು ಅರಿಗಳರುವರನ್ನು ಕುಟ್ಟಿ ಕೆಡಹಿ ಆಶಪಾಶವೆಂಬ ಹಗ್ಗವನ್ನು ಹರಿದು 2 ಗೇರು ಹಣ್ಣಿನ ಬೀಜ ಹೊರಸಾರಿ ಇರ್ದವೊಲು ಸಂ ಸಾರವೆಂಬ ವಾರಿಧಿಯೊಳು ಕಾಲಗಳೆಯುತ ನೀರ ಮೇಲಕಿದ್ದ ನಳಿನದಂತೆ ಹೊರಗೆ ಬಿದ್ದು ಬಕನ ಚಾರು ಚರಣ ಸ್ಮರಣೆಯಿಂದ 3
--------------
ಕವಿ ಪರಮದೇವದಾಸರು
ದಾಸರಾಯ ಪುರಂದರದಾಸರಾಯ ಪ. ಘಾಸಿಗೊಳಿಸದೆ ಇತ್ತು ಕರುಣಿಸಿ ವಾಸುದೇವನ ಕೃಪೆಗೈಸಿರಿ ಅ.ಪ. ದಾಸಕೂಟಕೆ ಮೊದಲನೆ ಗುರು ದೊಷವರ್ಜಿತ ಭಕ್ತರೆನಿಸಿ ಆಶಪಾಶವೆ ತೊರೆದು ಹರಿಯ ದಾಸತನವನು ತೋಷದಲಿ ಕೊಂಡು ಕೇಶವನು ಸರ್ವೋತ್ತಮನು ಎನ್ನುತ ಶ್ರೀಶನ ಗುಣಗಳನೆ ಪೊಗಳುತ ಭೂಸುರರ ರಕ್ಷಿಸುತ ಭಕ್ತರ ಕ್ಲೇಶಗಳೆÉದಂಥ ಗುರುವರ 1 ವೀಣೆ ಕರದಲಿ ಗಾನಮಾಡುತ ಜಾಣತನದಲಿ ಕೃಷ್ಣನೊಲಿಸುತ ಆನಂದದಲಿ ನರ್ತಿಸುತ್ತ ಧ್ಯಾನದಲಿ ಶ್ರೀ ಹರಿಯ ನೋಡುತ ಆನನವ ತೂಗುತ್ತ ವೇದ ವಿ- ಧಾನದಲಿ ಪದಗಳನೆ ರಚಿಸುತ ಮೌನಿವ್ಯಾಸರ ಶಿಕ್ಷೆಯಿಂದಲಿ ದಾನವಾಂತಕ ಹರಿಯನೊಲಿಸಿದ 2 ಪಾಪಿಗಳ ಪಾವನಗೈಸುತ ಶ್ರೀ ಪತಿಯ ಅಂಕಿತವ ನೀಡುತ ಈ ಪರಿಯಲಿ ಮೆರೆದ ಮಹಿಮೆಯ ನಾ ಪೇಳಲಳವಲ್ಲವಿನ್ನು ನಾ ಪಿರಿಯರಿಂ ಕೇಳಿದುದರಿಂ ದೀಪರಿ ನುಡಿದಿರುವೆನಲ್ಲದೆ ಗೋಪಾಲಕೃಷ್ಣವಿಠ್ಠಲನ ರೂಪ ನೋಡುತ ಸುಖಿಸುವಂಥ 3
--------------
ಅಂಬಾಬಾಯಿ
ಬಂದರ್ನೋಡೀ ಸುಂದರ್ತುಲಶೀರಾಮದಾಸರ್ಬಂದರು ಪ ಅಂದದೆಮ್ಮಾಕಂದರ್ಪಾಲಿಸೆಂದರ್ ತಾವೇ ಚಂದಾದಿಂದಾ ಇಂದ್ರರ್ಪದವಿಗಾಗಿ ಬೇಗಾ 1 ಭಕ್ತಿ ಮುಕ್ತಿ ಯೆರಡಕ್ಕೊಂದೆಯುಕ್ತಿ ತೋರಿ ಮತ್ತೆ ತಾನ್ ಭಕ್ತಿಜ್ಞಾನ ಯೇತನ್ಮಧ್ಯೆ ಹೊಕ್ಕಿ ಶಕ್ತರಾಗಿ ಬೇಗಾ 2 ಆಟಾಪಟಾವೆಂಬಳ ಕಳ್ಳ ಬೂಟಕಂಗಳನ್ನು ಬಿಡಿಸಿ ಸಾಟಿಯಾಗದ ತ್ರಿಕೂಟಮೆಂಬಟರಾರ್ಭಟಾ ತೋರಲ್ ಬೇಗಾ3 ಪಕ್ಷೇಂದ್ರನೇರಿ ಬಂದ ಯಕ್ಷರಕ್ಷನಾಗಿ ನಿಂದಾ ಸಾಕ್ಷಿ ಕೇಳುವಂತಾ ಅಡಿಯರ್ಗಾಕ್ಷಣವೆ ಮೋಕ್ಷ ತೋರಲ್ 4 ಆಶಪಾಶವೆಂಬೊದನ್ನು ನಾಶಮಾಡೊ ಈಶನಾಮಾ ದಾಸನಾದವರ್ಗೆ ಸಾಶಿರಾಂಗಾವಾಗಿ ಬೇಗಾ 5
--------------
ಚನ್ನಪಟ್ಟಣದ ಅಹೋಬಲದಾಸರು