ಆರಿಗಾರೋ ಕೃಷ್ಣ ಶೂರಕುಮಾರನೆಪ.
ಆರಿಗಾರೋ ನಿನ್ನ ಹೊರತು ಪೊರೆವರೆನ್ನಶೂರ ಮಾರಜನಕ ಅಕ್ರೂರವರದ ದೊರೆಯೆಅ.ಪ.
ಸತಿಸುತರು ಹಿತರೇನೊ ಮತಿಭ್ರಾಂತಿಬಡಿಸುವರುಗತಿ ಯಾರೊ ಮುಂದೆ ಗರುಡವಾಹನ ದೇವ1
ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳವಾಸುದೇವನೆ ನಿನ್ನ ದಾಸನೆಂದೆನಿಸಯ್ಯ 2
ಕಾಯ ಉ-ಪಾಯ ಯಾವುದೊ ಮುಂದೆ ರಾಯ ಹಯವದನ 3