ಜ್ಞಾನಾಮೃತ ಭುಜಿಸು ಜೀವ
ಮಾನವಜನುಮದ ಗುರಿಯಿದು ಪ
ಶುದ್ಧಮನದ ಪಾತ್ರೆಯಲ್ಲಿ
ಸದ್ಗುರುವಿನ ಬೋಧದನ್ನ
ಶುದ್ಧ ಚೈತನ್ಯಾತ್ಮ ನೀನೆ
ಬದ್ಧಜೀವನಲ್ಲವೆಂಬ 1
ಶಿವರೂಪನು ಸಚ್ಚಿದಾತ್ಮ
ಭವಬಂಧನವೆನ್ನೊಳಿಲ್ಲ
ಆವಿನಾಶಿಯೆ ನಾನು ಎಂಬ
ಸುವಿಚಾರದ ಬಾಯಿಯಿಂದ 2
ಸದ್ ರೂಪದ ಆರೋಗ್ಯ
ಚಿದ್ ರೂಪದ ಪರಮ ಭಾಗ್ಯ
ಆನಂದದ ನಿಧಿಯಾಗುವಿ
ಬೋಧ 3