ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(4) ಕೆಂಗಲ್ಲು ಆಂಜನೇಯ ಕೆಂಗಲ್ಲ ಹನುಮಂತರಾಯ ನಮ್ಮ ರಂಗನಾಥಗೆ ಬಹು ಪ್ರಿಯ ಪ ಮಂಗಳಕರ ವಜ್ರಕಾಯ ಉ ತ್ತುಂಗ ವಿಕ್ರಮ ಪೊರೆ ಜೀಯ ಅ.ಪ ಶ್ರಾವಣ ಕಡೆ ಶನಿವಾರ ಬರೆ ಭಾವಿಸಿ ಭಕ್ತರು ಸೇರೆ ಆವಾವೆಡೆ ಜನ ಮೀರೆ ನಿನ್ನ ತೀವಿದ ಮನದಿ ಪಾಡುವರೊ ದೊರೆ 1 ಬಹುಭಜಕರು ಕುಣಿದಾಡಿ ಗುಣ ಸಾಹಸ್ರಗಳ ಕೊಂಡಾಡೀ ಶ್ರೀಹರಿ ವೈಭವ ನೋಡೀ ಮಹದಾನಂದದೊಳಗೋಲಾಡಿ2 ಪರಿ ವ್ಯಾದಗಳಿಂದ ಸಿರಿ ವರನುತ್ಸವ ಬಹುಚಂದ ತಿರುಪತಿ ಯಾತ್ರಿಕರಿಂದ ನೆರೆದೆಸೆವ ಕಲ್ಯಾಣ ಬೃಂದ 3 ತಾಳ ತಂಬೂರಿ ಮದ್ದಳೆಯ ಮೇಳ ತಮ್ಮಟೆಗಳ ಬಹು ಘೋಷ ಭೂಲೋಕದಿಂ ಸ್ವರ್ಗಕೈದಿ ಶ್ರೀ ಲೀಲೆಯ ತೋರ್ಪುದು ನಿಜದಿ 4 ವರಜಾಜಿ ಕೇಶವನ ನಾಮವನು ನಿರುತ ನೆನೆವ ಶರಣ ಪ್ರೇಮ ಕರುಣದಿ ಪೊರೆ ಪುಣ್ಯಧಾಮ ಸಿರಿ ಜಯಚಾಮನೃಪಸ್ತುತ್ಯ ಭೀಮ 5
--------------
ಶಾಮಶರ್ಮರು
ಎಲ್ಲೆಲ್ಲಿ ಭಾಗವತಾಂಶ ಮತ್ತೆಲ್ಲೆಲ್ಲಿ ಹರಿಸನ್ನಿವಾಸಎಲ್ಲೆಲ್ಲಿ ಕರೆದರೆ ದಾಸರಲ್ಲಲ್ಲಿಗೆಬಾಹರಮೇಶಪ.ಆವೆಡೆ ಲಕ್ಷವಂದನೆಯು ಆವಾವೆಡೆಗೆ ಭಕ್ತ ನರ್ತನೆಯುಆವೆಡೆ ಸುಪ್ರದಕ್ಷಿಣೆಯು ಆವಾವೆಡೆ ರಂಗನಾರಾಧನೆಯು 1ಎಂತು ದಂಡಿಗೆ ತಾಳ ಘೋಷ ಎಂತೆಂತು ಕಥಾಮೃತ ವರುಷಎಂತು ತತ್ವಾರ್ಥ ಜಿಜ್ಞಾಸ ಅಂತಂತೆ ಶ್ರೀಕಾಂತನ ಹರುಷ 2ಎಷ್ಟು ತಂತ್ರಸಾರಾರ್ಚನೆಯು ಎಷ್ಟೆಷ್ಟುಶ್ರುತಿಸೂತ್ರಗಳ ಧ್ವನಿಯುಎಷ್ಟು ತಾತ್ಪರ್ಯ ವರ್ಣನೆಯು ಅಷ್ಟಷ್ಟು ಕೃಷ್ಣನಕಂಠ ಮಣಿಯು 3ಏಸುಶ್ರೀಹರಿವ್ರತ ಮೌನ ಏಸೇಸು ಶ್ರೀ ಹರಿರೂಪಧ್ಯಾನಏಸುಸದ್ವ್ಯಾಖ್ಯಾನ ದಾನ ಆಸನ್ನ ಕೈವಲ್ಯನಿದಾನ4ಎನಿತು ಗುರುಪಾದಗಳ ಸ್ಮರಣೆ ಎನಿತೆನಿತು ಮಧ್ವಯತಿಗಳ ಸ್ಮರಣೆಎನಿತೇಕಾದಶಿಯ ಜಾಗರಣೆ ಅನಿತನಿತು ಸುಲಭ ಹರಿಸ್ಮರಣೆ 5ಆರು ಆರೂರು ಮೆಟ್ಟಿಹರು ಮತ್ತಾರೂರರಸರ ಕಟ್ಟಿಹರುಆರೀರ್ವರ ಪೊರಮಟ್ಟಿಹರು ಆರಾರಾಗಲಿ ಕೃಷ್ಣನವರು 6ಹೇಗೆ ಸಜ್ಜನರ ಉಲ್ಲಾಸ ಹಾಗ್ಹಾಗೆ ಮಹಾಮಹಿಮರಭಿಲಾಷಹೇಗೆ ಬುಧರ ಪರಿತೋಷ ಹಾಗಾಗುವುದು ಪ್ರಸನ್ವೆಂಕಟೇಶ 7
--------------
ಪ್ರಸನ್ನವೆಂಕಟದಾಸರು