ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವುದು ಸ್ಥಿರವೆಲೋ ಮನವೆ ಇದು ಮಾಯವು ಕಾಣೆಲೊ ಪ ಆವದು ಸ್ಥಿರವೆಲೋ ಮಾಯವಿದೆಲ್ಲವು ಭಾವದಿ ಕುದಿಯುತ ನೋಯುವಿ ಯಾಕೆಲೊ ಅ.ಪ ಅರ್ಥವೆಂಬುವುದೆಲ್ಲ ವ್ಯರ್ಥವು ಮೃತ್ಯು ತಿಳಿಯೆ ನಿಖಿಲ ಅರ್ತುವಿಚಾರಿಸು ಸಾರ್ಥಕವಾವುದು ಮರ್ತುಕೆಡದೆ ಭವನಿರ್ತದಿಂ ಗೆಲೆಯೆಲೊ 1 ಸತಿಸುತರಿವರೆಲ್ಲ ಹಿತವಿರಲತಿ ಸೇವಿಪರೆಲ್ಲ ಗತಿಸಲು ಭಾಗ್ಯವು ಹಿತದೋರಿದವರೇ ಅತಿಜರೆಯುತ ನಿನ್ನ ವ್ಯಥೆಯ ಬಡಿಪರೆಲೊ 2 ಒಂದಿನ್ಹೋಗ್ವುದಂತು ತಪ್ಪದು ನೋಯುವುದ್ಯಾಕಿಂತು ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಂಘ್ರಿಗಳಿಗ್ಹೊಂದಿ ನೀ ಸುಖಿಯಾಗೊ 3
--------------
ರಾಮದಾಸರು
ಎನೊ ಎಂತೊ ತಿಳಿಯದು ತಿಳಿಯದು ಸ್ವಾನಂದದ ಸುಖದಾಟ ಧ್ರುವ ಒಳಗೊ ಹೊರಗೊ ಬೈಗೊ ಬೆಳಗೊ ಕಾಳೊ ಬೆಳದಿಂಗಳವೊ ಮಳಿಯೊ ಮಿಂಚೊ ಹೊಳವೊ ಸಳವೊ ತಿಳಿಯದ ಕಳೆಕಾಂತಿಗಳು 1 ಉದಿಯೊ ಅಸ್ತೊ ಆದ್ಯೊ ಅಂತ್ಯೊ ಮಧ್ಯೋ ತಾ ತಿಳಿಯದು ತುದಿಮೊದಲಿಲ್ಲದೆ ಸದಮಲ ಬ್ರಹ್ಮವು ಉದಿಯವಾಗಿಹ್ಯದು ನೊಡಿ 2 ಜೀವೋ ಭಾವೋ ಶಿವೊ ಶಕ್ತೋ ಆವದು ತಾ ತಿಳಿಯದು ಘವಘವಿಸುವ ಅವಿನಾಶನ ಪ್ರಭೆಯಿದು ಮಹಿಪತಿ ವಸ್ತುಮಯವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೈತ್ಯರಲ್ಲೆ ದುರ್ಜನ ಸೇವೆ ಪ ಪರರ ಲಾಭವನು ಧರಿಯೊಳು ನೋಡುತ | ಧರಿಸಲಾರ ಧಿಕ್ಕರಿಸುತ ನುಡಿವನು | ಪರರ ಹಾನಿಯಲಿ ಮರುಗದೆ ಮನದೊಳು | ಹರುಷ ಬಡವುತ ಚರಿಸು-ನೈಯ್ಯಾ 1 ಖಳ್ಳೆದೆಯೊಳು ಮನದಲ್ಲಿ ಕಪಟವು | ಸೊಲ್ಲಿತೆ ನೋಡಲು ಬೆಲ್ಲನೆ ಬೀರುವಾ | ಒಳ್ಳಿತು ಗುಣಗಳ ಯಳ್ಳಿಲಿ ನಿತೈಣಿಸದೆ | ಕ್ಷುಲ್ಲತನದಿ ಕುಂದಲ್ಲಿಡುವ-ಕೈಯ್ಯಾ 2 ಸತಿ | ಎನ್ನ ಮಗÀನೆ ಮಗ ಯನ್ನ ಗುಣವೇಗುಣ | ತನ್ನನೆ ಹೊಗಳುತ ಅನ್ಯಕ್ಹಳಿವರೆ 3 ಆವದು ಅರಿಯದ ಭಾವಿಕ ಜನರನು | ತಾವೀಗ ಕಂಡರೆ ಆವನನುಗ್ರಹ | ಆವ ಮಂತ್ರ ನಿನಗಾವ ನ್ಯಾಸವೇ | ದಾವಾಗ ಛಲಣಿಯ ಭಾವಿಪರವರೇ 4 ತಂದೆ ಮಹಿಪತಿ ನಂದನ ಪ್ರಭುವಿನಾ | ಒಂದರಗಳಿಗೆಯ ಛಂದದಿ ಸ್ಮರಿಸದೆ | ನಿಂದೆಯ ಮನೆಯೊಳು ಸಂದಿಸಿ ಅನುದಿನಾ | ಮಂದ ಮತಿಯರೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿವೇಕದಿಂದಾ ಮತಿಯುಕ್ತನಾಗಿ ಕುವಿದ್ಯದಾದಾ ಗುಣವೆಲ್ಲ ನೀಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದದಾಮೋದರ ಮಾಧವೇತಿ 1 ತ್ರಿವಿಧ ತಾಪದೊಳು ಮಗ್ನನಾಗಿ ನೀವ್ಯರ್ಥದಿನಗಳಿಯದೆ ಹೋಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 2 ಈ ವಿಷಯದಾಸುಖ ನಿತ್ಯವಲ್ಲಾ ನೀವಾತು ಕೇಳಿಗುರುವೀನ ಸೊಲ್ಲಾ ಭಾವಾರ್ಥದಿಂದ ಸ್ಮರಿಸೂದು ನೀತಿ ಗೋವಿಂದ ದಾಮೋದರ ಮಾಧವೇತಿ 3 ಆವದು ತನ್ನ ಹಿತವನು ನೋಡಿ ಸಾವಧನಾಗೀ ಶ್ರವಣ ಮಾಡಿ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 4 ಅವಾವ ಯೋನಿಯಲಿ ಬಂದಹಿಂದಾ ಅವದುಗತಿಯಂದು ನೋಡಿವಂದಾ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 5 ತಾವಂದೇ ಆಶ್ರೈಸದೆ ಕಾಮಧೇನು ಸಾವಿರ ಸಾಧನಕ ಬೀಳುದೇನು ಬಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 6 ಜೀವಾತ್ಮರಾಗಿ ಸಚ ರಾಚ ರಾವ ಬಾವರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೊದರ ಮಾಧವೇತಿ 7 ಗೋವಿಂದ ಅಷ್ಟಕವ ದಾವಪ್ರಾಣೀ ಸೇವಿಸುವನು ಕಾವನು ಚಕ್ರಪ್ರಾಣೀ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ